ಬೆಂಗಳೂರು : ಕಾಫಿ ಡೇ ಎಂಟರ್‌ಪ್ರೈಸಸ್ ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದೆ. ಸಾಲ ಪಾವತಿಯೊಂದರಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಕಂಪನಿ ವಿರುದ್ಧ ದಿವಾಳಿ ಪ್ರಕ್ರಿಯೆಗಳನ್ನು ಪ್ರಾರಂಭಿಸಲು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್‌ಸಿಎಲ್‌ಟಿ) ಆದೇಶಿಸಿದೆ. ಕಾಫಿ ಡೇ ವಿರುದ್ಧ ದಿವಾಳಿ ಪ್ರಕ್ರಿಯೆಗೆ ಅನುಮತಿ ನೀಡಿದ ಹಿನ್ನೆಲೆ ಐಡಿಬಿಐ ಬ್ಯಾಂಕ್ ದಿವಾಳಿ ಪ್ರಕ್ರಿಯೆ ಶುರು ಮಾಡಿದೆ.
ಕಾಫಿ ಡೇ ಎಂಟರ್‌ಪ್ರೈಸಸ್ 228 ಕೋಟಿ ರೂ. ಐಡಿಬಿಐ ಬ್ಯಾಂಕ್ಗೆ ಬಾಕಿ ಉಳಿಸಿಕೊಂಡಿದೆ. ಹೀಗಾಗಿ ಸಾಲ ಪಾವತಿಸಲು ವಿಫಲವಾಗಿದೆ ಎಂದು ಐಡಿಬಿಐ ಟ್ರಸ್ಟಿಶಿಪ್ ಸರ್ವಿಸಸ್ ಲಿಮಿಟೆಡ್ ಮನವಿ ಸಲ್ಲಿಸಿತ್ತು. ಈ ಮನವಿಯನ್ನು ಒಪ್ಪಿಕೊಂಡ ಎನ್‌ಸಿಎಲ್‌ಟಿ ದಿವಾಳಿ ಪ್ರಕ್ರಿಯೆಗೆ ಅನುಮತಿ ನೀಡಿದೆ.
ಇನ್ನು ವಿಪರೀತ ಸಾಲದಿಂದಾಗಿ ಕಾಫಿ ಡೇ ಸಿದ್ಧಾರ್ಥ ಜು.29ರಂದು ಮಂಗಳೂರಿನ ಉಳ್ಳಾಲ ನೇತ್ರಾವತಿ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಬಳಿಕ ಹಲವು ಆಸ್ತಿ ಮಾರಿ ಸಾಲ ತೀರಿಸುತ್ತಿರೋ ಕಾಫಿ ಡೇಗೆ 2023 ಜುಲೈನಲ್ಲಿ ಇಂಡಸ್ಇಂಡ್ ಬ್ಯಾಂಕ್ನಿಂದ ದಿವಾಳಿ ಪ್ರಕ್ರಿಯೆ ನಡೆದಿತ್ತು. ಇದೀಗ ದಿ.ಸಿದ್ದಾರ್ಥರ ಕಾಫಿ ಡೇ ವಿರುದ್ಧ 2ನೇ ದಿವಾಳಿ ಪ್ರಕ್ರಿಯೆ ನಡೆಯುತ್ತಿದೆ.
ಇದನ್ನೂ ಓದಿ : ‘ಗೋಪಿಲೋಲ’ ಸಿನಿಮಾದ ಎರಡನೇ ಸಾಂಗ್ ರಿಲೀಸ್..!