ಬೆಂಗಳೂರು : ವಿಧಾನಸೌಧದ ಗ್ರ‍್ಯಾಂಡ್ ಸ್ಟೆಪ್ನಲ್ಲಿ 200ನೇ ಕಿತ್ತೂರು ವಿಜಯೋತ್ಸವ ಆಚರಣೆ ಕಾರ್ಯಕ್ರಮಕ್ಕೆ ಇಂದು ಸಿಎಂ ಚಾಲನೆ ನೀಡಿದರು. ಜ್ಯೋತಿ ಬೆಳಗುವ ವೇಳೆ ಸಿಎಂ ಸಿದ್ದರಾಮಯ್ಯ ಕೈಗೆ ಬೆಂಕಿ ತಗುಲಿದೆ.
ಕಿತ್ತೂರು ಉತ್ಸವದಲ್ಲಿ ಸಿಎಂ ಸಿದ್ದರಾಮಯ್ಯ ಜ್ಯೋತಿ ಬೆಳಗಿಸಿ ಹಿಂತಿರುಗಿದಾಗ ಸಿಎಂ ಶರ್ಟ್ಗೆ ಬೆಂಕಿ ತಾಗಿ ಬಿಸಿ ತಟ್ಟಿದೆ. ಬೆಂಕಿ ಶರ್ಟ್ಗೆ ತಾಗಿದ್ದರಿಂದ ತಕ್ಷಣ ಸಿಎಂ ಕೈ ಹಿಂದಕ್ಕೆತ್ತಿದ್ದಾರೆ. ಇನ್ನು ಅಲ್ಲೇ ಇದ್ದ ಗನ್ ಮ್ಯಾನ್ ಬಟ್ಟೆಗೆ ಆಕಸ್ಮಿಕವಾಗಿ ತಾಕಿದ ಕಿಡಿಯನ್ನು ಕೂಡಲೇ ಆರಿಸಿದ್ದಾರೆ.
ಇನ್ನು ಈ ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆಶಿವಕುಮಾರ್, ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್, ಎಚ್.ಕೆ. ಪಾಟೀಲ್, ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ ಸೇರಿ ಹಲವರು ಉಪಸ್ಥಿತರಿದ್ದರು.
ಇದನ್ನೂ ಓದಿ : ಪ್ಯಾರಾಸೈಕಾಲಜಿಕಲ್ ಥ್ರಿಲ್ಲರ್ ಮೂವಿ ‘ನಿಮಿತ್ತ ಮಾತ್ರ’ – ಮಂಗಳೂರಿನ ಅತೀವ ಭಯಾನಕ ಘಟನೆಯೇ ಚಿತ್ರದ ಕಥಾಹಂದರ..!
Post Views: 49