Download Our App

Follow us

Home » ರಾಜಕೀಯ » ತುಂಗಭದ್ರಾ ಡ್ಯಾಂ ವೀಕ್ಷಣೆ ಮಾಡಿದ ಸಿಎಂ ಸಿದ್ದರಾಮಯ್ಯ..!

ತುಂಗಭದ್ರಾ ಡ್ಯಾಂ ವೀಕ್ಷಣೆ ಮಾಡಿದ ಸಿಎಂ ಸಿದ್ದರಾಮಯ್ಯ..!

ವಿಜಯನಗರ : ಬಯಲು ಸೀಮೆಯ ಲಕ್ಷಾಂತರ ರೈತರ ಜೀವನಾಡಿ ತುಂಗಭದ್ರಾ ಡ್ಯಾಂನ ಕ್ರಸ್ಟ್ ಗೇಟ್ ಮುರಿದು ಕೊಚ್ಚಿ ಹೋಗಿದೆ. ಈಗಾಗಲೇ ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ವಿಪಕ್ಷ ನಾಯಕರು ಡ್ಯಾಂಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡಿ, 19ನೇ ಕ್ರಸ್ಟ್ ಗೇಟ್ ವೀಕ್ಷಣೆ ಮಾಡಿದರು.

ತುಂಗಭದ್ರಾ ಡ್ಯಾಂಗೆ ಭೇಟಿ ನೀಡಿದ ಸಿಎಂ ಸಿದ್ದರಾಮಯ್ಯ ಅವರು, ಮುರಿದು ಬಿದ್ದ ಕ್ರಸ್ಟ್​ ಗೇಟ್​​​ನ ಬಗ್ಗೆ ತುಂಗಭದ್ರಾ ಡ್ಯಾಂ ನಿರ್ವಹಣಾ ಮಂಡಳಿಯಿಂದ ಮಾಹಿತಿ ಸಂಗ್ರಹ ಮಾಡಿದ್ದಾರೆ. 19ನೇ ಕ್ರಸ್ಟ್​ ಗೇಟ್​ ಚೈನ್​ ಲಿಂಕ್​​ ಕಟ್​ ಆಗಿದ್ದು ಹೇಗೆ? ಡ್ಯಾಂನಿಂದ ಎಷ್ಟು ಪ್ರಮಾಣದ ನೀರು ಹರಿದು ಹೋಗಿದೆ? ಕ್ರಸ್ಟ್​ ಗೇಟ್​ ರಿಪೇರಿ ಕಾರ್ಯ ಯಾವ ಹಂತಕ್ಕೆ ಬಂದಿದೆ ಎಂಬ ವಿಚಾರದ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ. ಈ ವೇಳೆ ಸಚಿವರಾದ ಎನ್​​.ಎಸ್​.ಬೋಸರಾಜು, ಶಿವರಾಜ್​​ ತಂಗಡಗಿ ಹಾಗೂ ಶಾಸಕರು, ಸ್ಥಳೀಯ ಮುಖಂಡರು ಸಾಥ್​​ ನೀಡಿದ್ದಾರೆ.

ಇನ್ನು ಡ್ಯಾಂ ವೀಕ್ಷಣೆ ನಂತರ ಮಾಹಿತಿ ನೀಡಿದ ಸಿಎಂ ಸಿದ್ದರಾಮಯ್ಯ ಅವರು, ರೈತರಿಗೆ ಯಾವುದೇ ತೊಂದರೆ ಆಗಲು ಬಿಡೋದಿಲ್ಲ. ಸೆಪ್ಟೆಂಬರ್​ವರೆಗೂ ಉತ್ತಮ ಮಳೆಯಾಗೋ ನಿರೀಕ್ಷೆ ಇದೆ.
ರೈತರ ಬೆಳೆಗಳಿಗೆ ನೀರು ಒದಗಿಸಲು ತೊಂದರೆ ಆಗೋದಿಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ‘ಸಿ’ ಸಿನಿಮಾದ ಟ್ರೈಲರ್ ಔಟ್ – ಹೊಸಬರ ವಿಭಿನ್ನ ಪ್ರಯತ್ನಕ್ಕೆ ಫ್ಯಾನ್ಸ್ ಫಿದಾ..!

Leave a Comment

DG Ad

RELATED LATEST NEWS

Top Headlines

ಶಾಲಾ ಮಕ್ಕಳ ಕ್ಷೀರ ಭಾಗ್ಯಕ್ಕೆ ಕನ್ನ ಹಾಕಿದ ಹೆಡ್​​ ಮಾಸ್ಟರ್ – ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು..!

ಗುಲ್ಬರ್ಗ : ಅಕ್ಷರ ದಾಸೋಹ ಯೋಜನೆಯ ಕ್ಷೀರ ಭಾಗ್ಯಕ್ಕೆ ಹೆಡ್​​ ಮಾಸ್ಟರರೇ ಕನ್ನ ಹಾಕಿರುವ ಘಟನೆಯೊಂದು ನಡೆದಿದೆ. ಗುಲ್ಬರ್ಗದ ಅಫಜಲಪುರ ತಾಲ್ಲೂಕಿನ ಸ್ಟೇಷನ್ ಗಾಣಗಾಪುರ ಗ್ರಾಮದ ಸರ್ಕಾರಿ

Live Cricket

Add Your Heading Text Here