ಮೈಸೂರು : ನಾನು ತಪ್ಪು ಮಾಡಿಲ್ಲ.. ರಾಜೀನಾಮೆ ಕೊಡಲ್ಲ. ನಾನು ಯಾವುದಕ್ಕೂ ಇನ್ಮುಂದೆ ಹೆದರಲ್ಲ. ಕುಮಾರಸ್ವಾಮಿ ಬೇಲ್ ಮೇಲೆ ಇದ್ದಾರೆ ರಾಜೀನಾಮೆ ಕೊಟ್ರಾ ಎಂದು ಸಿಎಂ ಸಿದ್ದರಾಮಯ್ಯ ಕೆಂಡಾಮಂಡಲವಾಗಿದ್ದಾರೆ.
ಮೈಸೂರಿನಲ್ಲಿ ಬಿಜೆಪಿ ವಿರುದ್ದ ಕಿಡಿಕಾರಿದ ಸಿಎಂ ಸಿದ್ದರಾಮಯ್ಯ ಅವರು, ನನಗೆ ಯಾರ ಭಯ ಇಲ್ಲ.. ಇದೆಲ್ಲಾ ರಾಜಕೀಯ ಅಷ್ಟೇ. ನಮ್ಮ ಸರ್ಕಾರ ಅಸ್ಥಿರಗೊಳಿಸಲು ಮೈತ್ರಿ ನಾಯಕರ ಯತ್ನಿಸುತ್ತಿದ್ದಾರೆ. ಇದು ನನ್ನ ರಾಜಕೀಯ ಜೀವನದ ಮೊದಲ ಕೇಸ್. ಬಿಜೆಪಿ ನಾಯಕರು ನನ್ನ ವಿರುದ್ಧ ಷಡ್ಯಂತ್ರ ಮಾಡ್ತಿದ್ದಾರೆ ಎಂದು ಗುಡುಗಿದ್ದಾರೆ.
ಇನ್ನು ಗೋದ್ರಾ ಘಟನೆ ಆದಾಗ ಯಾಕೆ ಮೋದಿ ರಾಜೀನಾಮೆ ಕೊಟ್ಟಿಲ್ಲ? ಗೋದ್ರಾ ಘಟನೆಯಲ್ಲಿ ನೂರಾರು ಜನ ಸಾವನ್ನಪ್ಪಿದ್ರು. ನನ್ನ ರಾಜೀನಾಮೆ ಕೇಳೋಕೆ ಯಾವ ನೈತಿಕತೆ ಇದೆ? ನಾನು ರಾಜೀನಾಮೆ ಕೊಡಲ್ಲ..ನಾನು ಯಾವ ತಪ್ಪು ಮಾಡಿಲ್ಲ ಎಂದು ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ : ಡೆವಿಲ್ ರಿಲೀಸ್ ಡೇಟ್ನಲ್ಲಿ ಮ್ಯಾಕ್ಸ್ ಎಂಟ್ರಿ – ದರ್ಶನ್ ಲಾಕ್ ಆದ ತಿಂಗಳಲ್ಲಿ ಲಕ್ ಇದ್ಯಾ?