ರಾಜ್ಯದ ಎಲ್ಲಾ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ದಾಖಲಿಸಿದೆ. ಚನ್ನಪಟ್ಟಣದಲ್ಲಿ ಕಾಂಗ್ರೆಸ್‌ನ ಸಿ.ಪಿ.ಯೋಗೇಶ್ವರ್, ಶಿಗ್ಗಾಂವಿಯಲ್ಲಿ ಯಾಸಿರ್ ಅಹ್ಮದ್ ಖಾನ್ ಪಠಾಣ್ ಮತ್ತು ಸಂಡೂರಿನಲ್ಲಿ ಅನ್ನಪೂರ್ಣ ತುಕಾರಾಂ ಗೆಲುವು ಸಾಧಿಸಿದ್ದಾರೆ.
ಇದೀಗ ಸುದ್ದಿಗೋಷ್ಠಿ ನಡೆಸಿ ಗೆಲುವಿನ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಮಾತನಾಡಿ, ಮೂರು ಉಪ ಚುನಾವಣೆಯಲ್ಲಿ ನನಗಿದ್ದ ಮಾಹಿತಿ ಪ್ರಕಾರ ಗೆಲ್ತೀವಿ ಅಂತ ಇತ್ತು. ಆ ನಿರೀಕ್ಷೆಯಂತೆ ಮೂರು ಉಪ ಚುನಾವಣೆಯಲ್ಲಿ ಗೆದ್ದಿದ್ಧೇವೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ವಾಲ್ಮೀಕಿ ನಿಗಮ, ಮುಡಾ ಕೇಸ್‌ನಲ್ಲಿ ನಮ್ಮ ಸರ್ಕಾರದ ವಿರುದ್ಧ ಸುಳ್ಳು ಆರೋಪ ಮಾಡಿದ್ರು. ನನ್ನ ಏನು ಪಾತ್ರ ಇಲ್ಲದಿದ್ದರೂ ಸಿದ್ದರಾಮಯ್ಯ ಪಾತ್ರ ಇದೆ ಅಂದ್ರು, ವಕ್ಫ್ ಪ್ರಾಪರ್ಟಿ ವಿಚಾರದಲ್ಲಿ ಕೋಮುವಾದ ಶುರು ಮಾಡಲು ಪ್ರಯತ್ನ ನಡೆಸಿದ್ದರು ಆದ್ರೆ ಮೂರು ಕ್ಷೇತ್ರಗಳ ಉಪಚುನಾವಣೆಯ ಗೆಲುವಿನ ಬಳಿಕ ಬಿಜೆಪಿಯವರಿಗೆ ಜನ ಉತ್ತರ ಕೊಟ್ಟಿದ್ದಾರೆ ಎಂದು ತಿಳಿಸಿದರು.
ಇನ್ನು ದೇವೆಗೌಡ್ರು ಸಿದ್ದರಾಮಯ್ಯ ಸೊಕ್ಕು ಮುರಿಯಬೇಕು, ಗರ್ವಭಂಗ ಮಾಡಬೇಕು ಅಂದ್ರು, ಕಾಂಗ್ರೆಸ್ ಕಿತ್ತೊಗೆಯಿರಿ, ಕಾಂಗ್ರೆಸ್ ತೆಗೆಯುವುದೇ ನನ್ನ ಉದ್ದೇಶ ಅಂದ್ರು. ಮಾಜಿ ಪ್ರಧಾನಿಯಾಗಿ ನನ್ನ ವಿರುದ್ದ ಈ ರೀತಿ ಮಾತನಾಡಿದ್ರು ಅಂತ ಬೇಸರ ಆಗಿದೆ. ನಾನು ತುಂಬಾ ವರ್ಷ ಅವರ ಜೊತೆಗಿದ್ದೆ. ಗೊತ್ತಿದ್ದರೂ ಸೊಕ್ಕು ಮುರಿಯಿರಿ ಅಂದ್ರು, ನಾನು ಅಧಿಕಾರ ಇರಲಿ ಬಿಡಲಿ ಒಂದೇ ರೀತಿ ಇರ್ತೇನೆ ಎಂದರು.
ಇನ್ನು 40 ವರ್ಷದ ರಾಜಕೀಯದಲ್ಲಿ ನಾನು ಯಾವತ್ತೂ ಸೊಕ್ಕಿನಿಂದ ಗರ್ವದಿಂದ ನಡೆದುಕೊಂಡಿಲ್ಲ, ಗೊಳೋ ಅಂತ ಅಳೋದನ್ನ ದೇವೆಗೌಡ, ಅವರ ಮಗ ಹಾಗೂ ಮೊಮ್ಮಗ ಅಭ್ಯಾಸ ಮಾಡಿಕೊಂಡಿದ್ದಾರೆ. ಹೃದಯ ಇದ್ದವರಿಗೆ ಅಳು ಬರುತ್ತೆ ಅನ್ನೋರು ಪ್ರಜ್ವಲ್ ಕೇಸ್ ಸಂತ್ರಸ್ಥರನ್ನು ಕಂಡು ಅಳು ಬರಲಿಲ್ವ ಎಂದು ದೇವೇಗೌಡ ಕುಟುಂಬದ ವಿರುದ್ದ ಹರಿಹಾಯ್ದರು.
ಇದನ್ನೂ ಓದಿ : ಸೋಲಿನಿಂದ ಎದೆಗುಂದಿಲ್ಲ.. ನಾನು ರಾಮನಗರದ ಮಗ, ಇಲ್ಲಿಂದ ಹಿಂದೆ ಸರಿಯಲ್ಲ – ನಿಖಿಲ್ ಕುಮಾರಸ್ವಾಮಿ..!