ಬೆಂಗಳೂರು : ಮುಡಾ ಹಗರಣ ಕೇಸ್ನಲ್ಲಿ ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಲೋಕಾಯುಕ್ತ ಬಳಿಕ ಈಗ ಸಿದ್ದರಾಮಯ್ಯ ವಿರುದ್ಧ ಜಾರಿ ನಿರ್ದೇಶನಾಲಯ (ED) FIR ದಾಖಲಿಸುವ ಸಾಧ್ಯತೆಯಿದೆ.
ಇಂದು ಬೆಂಗಳೂರಿನ ಇಡಿ ಕಚೇರಿಯಲ್ಲಿ ಸ್ನೇಹಮಯಿ ಕೃಷ್ಣ ದೂರು ದಾಖಲಿಸಿದ್ದು, ಈ ದೂರಿನ ಮೇರೆಗೆ ಸಿಎಂ ವಿರುದ್ಧ ಯಾವುದೇ ಸಂದರ್ಭದಲ್ಲಿ ಎಫ್ಐಆರ್ ದಾಖಲಾಗುವ ಸಾಧ್ಯತೆ ಇದೆ. ಅಕ್ರಮ ಹಣ ವರ್ಗಾವಣೆ ಸಂಬಂಧ ಲೋಕಾಯುಕ್ತ ತನಿಖೆ ಬೆನ್ನಲ್ಲೇ EDಯಿಂದಲೂ ತನಿಖೆ ನಡೆಯುತ್ತಿದೆ. ಮೈಸೂರು ಲೋಕಾದಲ್ಲಿ ದಾಖಲಾಗಿರುವ ದೂರು ಆಧರಿಸಿ ತನಿಖೆ ನಡೆಯುತ್ತಿದೆ.
ಮುಡಾ ಕೇಸ್ ದೂರುದಾರ ಸ್ನೇಹಮಯಿ ಕೃಷ್ಣ ಅವರು ಇಂದು ತಮ್ಮವರ ಮೂಲಕ ಇಡಿ ಕಚೇರಿಗೆ ದೂರು ತಲುಪಿಸಿದ್ದು, ಇದೀಗ ಇಡಿ ಅಧಿಕಾರಿಗಳು ದೂರು ದಾಖಲಿಸಿಕೊಂಡು ಸ್ವೀಕೃತಿ ಪತ್ರ ಸಹ ನೀಡಿದ್ದಾರೆ. ಹೀಗಾಗಿ ಯಾವುದೇ ಸಮಯದಲ್ಲೂ ಸಹ ಸಿಎಂ ವಿರುದ್ಧ ಇಡಿ ಅಧಿಕಾರಿಗಳು ಎಫ್ಐಆರ್ ದಾಖಲಿಸಲಿದ್ದಾರೆ.
ಇದನ್ನೂ ಓದಿ : ದೀಪಿಕಾ ದಾಸ್ ನಟನೆಯ ‘#ಪಾರುಪಾರ್ವತಿ’ ಚಿತ್ರದ ‘ಇನ್ಫಿನಿಟಿ ರೋಡ್’ ಪೋಸ್ಟರ್ ರಿಲೀಸ್..!