Download Our App

Follow us

Home » ಮೆಟ್ರೋ » ಬಿಬಿಎಂಪಿ ವ್ಯಾಪ್ತಿಯಲ್ಲಿ ಗುಂಡಿ ಮುಚ್ಚಲು ಡೆಡ್​ಲೈನ್​ ಕೊಟ್ಟ ಸಿಎಂ ಸಿದ್ದು..!

ಬಿಬಿಎಂಪಿ ವ್ಯಾಪ್ತಿಯಲ್ಲಿ ಗುಂಡಿ ಮುಚ್ಚಲು ಡೆಡ್​ಲೈನ್​ ಕೊಟ್ಟ ಸಿಎಂ ಸಿದ್ದು..!

ಬೆಂಗಳೂರು : ಮುಡಾ ಹಗರಣ ಆರೋಪದ ಅರ್ಜಿ ವಿಚಾರಣೆಯ ನಡುವೆಯೂ ಸಿಎಂ ಸಿದ್ಧರಾಮಯ್ಯ ಅವರು ನಿನ್ನೆ ಬೆಂಗಳೂರು ನಗರದ ರಸ್ತೆ ಗುಂಡಿಗಳ ನಿರ್ಮೂಲನೆ, ರಸ್ತೆ ಅಭಿವೃದ್ಧಿ ಮತ್ತು ಇಲಾಖೆಗಳಿಂದ ಕೈಗೊಳ್ಳಲಾಗಿರುವ ಮೂಲಭೂತ ಸೌಕರ್ಯ ಕಾಮಗಾರಿಗಳನ್ನು ವೀಕ್ಷಿಸಿದರು. ಈ ವೇಳೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಗುಂಡಿ ಮುಚ್ಚಲು ಸೆಪ್ಟೆಂಬರ್​ 20ರ ಗಡುವು ಕೊಟ್ಟಿದ್ದಾರೆ.

ಬಿಬಿಎಂಪಿ 2684 ಗುಂಡಿಗಳನ್ನು ಗುರುತಿಸಿದ್ದು, ರಸ್ತೆ ಗುಂಡಿಗಳನ್ನು ತ್ವರಿತವಾಗಿ ಮುಚ್ಚುವಂತೆ ಸಿಎಂ ಸೂಚನೆ ನೀಡಿದ್ದಾರೆ. ಈ ಹಿಂದೆ ಡಿಸಿಎಂ ಡಿಕೆಶಿ ಬೆಂಗಳೂರು ಗುಂಡಿ ಮುಚ್ಚಲು ಸೆಪ್ಟೆಂಬರ್​​ 8ರ ಗಡುವು ನೀಡಿದ್ದರು. ನಂತರ ಸೆಪ್ಟೆಂಬರ್​ 15ರೊಳಗೆ ಗುಂಡಿ ಮುಚ್ಚದಿದ್ರೆ ಬಿಬಿಎಂಪಿ ಎಂಜಿನಿಯರ್​ಗಳನ್ನು ಸಸ್ಪೆಂಡ್ ಮಾಡುವುದಾಗಿ ಎಚ್ಚರಿಕೆ ಕೊಟ್ಟಿದ್ದರು. ಹಾಗಾಗಿ ಸಮರೋಪಾದಿಯಲ್ಲಿ ಗುಂಡಿ ಮುಚ್ಚುವ ಕಾರ್ಯ ಶುರುವಾಗಿತ್ತು. ಬೆಂಗಳೂರಲ್ಲಿ 12,878 ಕಿಲೋ ಮೀಟರ್ ರಸ್ತೆ ವ್ಯಾಪ್ತಿ ಇದ್ದು, ಪ್ರತಿ ವಾರ್ಡ್​ಗೆ 15 ಲಕ್ಷ ಹಣ ಗುಂಡಿ ಮುಚ್ಚಲು ರಿಲೀಸ್ ಆಗಿದೆ.

ರಸ್ತೆ ಗುಂಡಿ ಗಮನ ಆ್ಯಪ್​​​​ ಮೂಲಕ ದೂರು ಆಲಿಸಿ ಕ್ರಮ ಕೈಗೊಳ್ಳಲಾಗುವುದು. 1376 ರಸ್ತೆ ಗುಂಡಿ ಮುಚ್ಚಿರೋದಾಗಿ ಬಿಬಿಎಂಪಿ ಮಾಹಿತಿ ಲಭ್ಯವಾಗಿದ್ದು, ಇನ್ನೂ 2684 ರಸ್ತೆ ಗುಂಡಿಗಳು ಮುಚ್ಚೋಕೆ ಬಾಕಿ ಇದೆ. ಹೀಗಾಗಿ ರಸ್ತೆ ಗುಂಡಿ ಮುಚ್ಚಲು ಐದು ದಿನ ಹೆಚ್ಚುವರಿ ಅವಕಾಶ ನೀಡಿದ್ದಾರೆ.

ಇದನ್ನೂ ಓದಿ : ಪತ್ರಕರ್ತರಿಗೆ ಬೆದರಿಕೆ ಹಾಕಿದರೆ ರೂ. 50,000 ದಂಡ, 3 ವರ್ಷ ಜೈಲು – ಪ್ರಧಾನಿ ಮೋದಿ..!

Leave a Comment

DG Ad

RELATED LATEST NEWS

Top Headlines

4 ಅಂತಸ್ತಿನ ಕಟ್ಟಡ ಕುಸಿತ – ಕೂದಲೆಳೆ ಅಂತರದಲ್ಲಿ ಪಾರಾದ ತಾಯಿ, ಮಗು..!

ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ತಾಯಿ ಮಗು ಪ್ರಾಣಾಪಾಯದಿಂದ ಪಾರಾಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಆಘಾತಕಾರಿ ಘಟನೆಯ ಸಂಪೂರ್ಣ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೀಡಿಯೊದಲ್ಲಿ

Live Cricket

Add Your Heading Text Here