ಚಿತ್ರದುರ್ಗ : ವ್ಯಕ್ತಿಯೊಬ್ಬ ಹಾಡಹಗಲೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಚಿತ್ರದುರ್ಗದ ಅಂಬೇಡ್ಕರ್ ವೃತ್ತದ ಬಳಿ ನಡೆದಿದೆ. ಬೆಂಕಿ ಹಚ್ಚಿಕೊಳ್ಳುತ್ತಿದ್ದಂತೆ ಪೊಲೀಸರು ರಕ್ಷಣೆಗೆ ದಾವಿಸಿದ್ದಾರೆ.
ಪೊಲೀಸರು ಗೋಣಿ ಚೀಲ ಹಿಡಿದು ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಬೆಂಕಿ ಹಚ್ಚಿಕೊಂಡಾತ ಮಾನಸಿಕ ಅಸ್ವಸ್ಥ ಎಂಬ ಮಾಹಿತಿ ತಿಳಿದುಬಂದಿದೆ. ಸ್ಥಳಕ್ಕೆ ಚಿತ್ರದುರ್ಗ DySP ದಿನಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಗೋಪಿನಾಥ್ ಬೆಂಕಿ ಹಚ್ಚಿಕೊಂಡು ಕಿರುಚಾಡಿದ್ದ. ಬೆಂಕಿ ಹಚ್ಚಿಕೊಂಡಿರುವ ವಿಡಿಯೋ ಮೊಬೈಲ್ನಲ್ಲಿ ವೈರಲ್ ಆಗಿದ್ದು, ಆತ್ಮಹತ್ಯೆಗೆ ಯತ್ನಿಸಿರೊ ಕಾರಣ ಏನೆಂದು ಇನ್ನು ತಿಳಿದು ಬಂದಿಲ್ಲ.
ಇದನ್ನೂ ಓದಿ : ಉಗ್ರರ ಗುಂಡಿಗೆ ಸೇನೆಯ ಸೂಪರ್ ಹೀರೋ ‘ಫ್ಯಾಂಟಮ್’ ಬಲಿ.. ವೀರ ಮರಣವನ್ನಪ್ಪಿದ ಶ್ವಾನಕ್ಕೆ ಕಣ್ಣೀರ ವಿದಾಯ..!
Post Views: 186