ಚಿತ್ರದುರ್ಗ : ಯುವಕನೋರ್ವ ತಹಶೀಲ್ದಾರ್ ಜೀಪಿಗೆ ಬೆಂಕಿ ಹಚ್ಚಿ ಹುಚ್ಚಾಟ ಮೆರೆದ ಘಟನೆ ಜಿಲ್ಲೆಯ ಚಳ್ಳಕೆರೆ ನಗರದ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ನಡೆದಿದೆ. ಗಾಂಧಿ ನಗರ ನಿವಾಸಿ ಪೃಥ್ವಿರಾಜ್ ಕುಕೃತ್ಯ ಮೆರೆದ ಯುವಕನಾಗಿದ್ದಾನೆ.
ಪೃಥ್ವಿರಾಜ್ ತಹಶೀಲ್ದಾರ್ ರೇಹಾನ್ ಪಾಷ ಜೀಪಿಗೆ ಬೆಂಕಿ ಹಚ್ಚಿದ್ದು, ಜೀಪಿನ ಮುಂಭಾಗ ಸುಟ್ಟು ಕರಕಲಾಗಿದೆ. ಚಳ್ಳಕೆರೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆಂದು ವಿಧಾನಸೌಧದ ಮುಂಭಾಗ ಈ ಹಿಂದೆ ಯುವಕ ಪೃಥ್ವಿರಾಜ್ ಬೈಕ್ಗೆ ಬೆಂಕಿ ಹಚ್ಚಿದ್ದ. ಇದೀಗ ಪೊಲೀಸ್ ಜೀಪಿಗೆ ಬೆಂಕಿ ಹಚ್ಚಲು ಬಂದು, ತಹಶೀಲ್ದಾರ್ ಜೀಪಿಗೆ ಬೆಂಕಿ ಹಚ್ಚಿ ಹುಚ್ಚಾಟ ಮೆರೆದಿದ್ದಾನೆ.
ಪೃಥ್ವಿರಾಜ್ ಪೊಲೀಸರ ಜೀಪಿಗೆ ಬೆಂಕಿ ಹಚ್ಚಲು ಪೆಟ್ರೋಲ್ ಸಮೇತ ಬಂದಿದ್ದ. ಕೂಡಲೇ ಎಚ್ಚೆತ್ತ ಪೊಲೀಸರು ಯುವಕ ಪೃಥ್ವಿರಾಜ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇನ್ನು ಪೃಥ್ವಿರಾಜ್ ಪ್ರಕರಣಕ್ಕೂ ಒಂದು ದಿನ ಮುಂಚೆಯೇ ವಾಟ್ಸಪ್ ಸ್ಟೇಟಸ್ ಹಾಕಿದ್ದ. ನಾನು ಮೊದಲು ಹೇಳಿ ಮಾಡುವ ಅಭ್ಯಾಸ, ಎಲ್ಲವನ್ನ ಹೇಳಿದ್ದೇನೆ. ಈಗ ಚಳ್ಳಕೆರೆ ಮಹಾ ಜನತೆಗೆ ಹೇಳುತ್ತಿದ್ದೇನೆ. ನಾಳೆ ಬೆಳಿಗ್ಗೆ ಚಳ್ಳಕೆರೆ ಪೊಲೀಸ್ ಠಾಣೆ ಬಳಿ ಎಲ್ಲರೂ ಬನ್ನಿ, ಜನರಿಗೋಸ್ಕ ಲೈವ್ ಇರುತ್ತದೆ. ಮರೆತು ನಿರಾಶರಾಗದಿರಿ ಎಂದು ಫೋಸ್ಟ್ ಕೂಡ ಮಾಡಿದ್ದ.
ಇದನ್ನೂ ಓದಿ : ಕನ್ನಡ ಚಿತ್ರರಂಗದ ಲೈಂಗಿಕ ಹಿಂಸೆ ತನಿಖೆಗೆ ಎದ್ದ ಕೂಗು – ಸಿಎಂಗೆ ಮನವಿ ಸಲ್ಲಿಸಿದ ‘ಫೈರ್’ ಸಂಸ್ಥೆ..!