ಚಿತ್ರದುರ್ಗ : ನದಿ ಪಾತ್ರದಲ್ಲಿ ಮೀನು ಹಿಡಿಯಲು ಹೋಗಿದ್ದ ವ್ಯಕ್ತಿಯೊಬ್ಬ ನೀರುಪಾಲಾಗಿರುವ ಘಟನೆ ಹೊಸದುರ್ಗ ತಾಲ್ಲೂಕಿನ ಕೆಲ್ಲೋಡು ಸಮೀಪ ನಡೆದಿದೆ. ಜಾನಕಲ್ ಗ್ರಾಮದ 35 ವರ್ಷದ ಶಿವು ನೀರಲ್ಲಿ ಕೊಚ್ಚಿ ಹೋದ ವ್ಯಕ್ತಿ.
ಶಿವು ಮೀನು ಹಿಡಿಯಲು ಚಿತ್ರದುರ್ಗದ ವೇದಾವತಿ ನದಿಗೆ ತೆರಳಿದ್ದ, ಈ ವೇಳೆ ಕಾಲು ಜಾರಿ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ. ನದಿ ಪಾತ್ರಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಈಜುಗಾರರು ಭೇಟಿ ನೀಡಿದ್ದು, ಶಿವು ಪತ್ತೆಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಶ್ರೀರಾಂಪುರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ : ತುಮಕೂರು : ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪ – ಆರ್. ಸುಬ್ರಹ್ಮಣ್ಯರಿಗೆ 2 ಕೋಟಿ 32 ಲಕ್ಷ ರೂ. ದಂಡ, 5 ವರ್ಷ ಜೈಲು..!
Post Views: 139