ಚಿತ್ರದುರ್ಗ : ಟೈರ್ ಸ್ಫೋಟಗೊಂಡು ಕಾರು ಪಲ್ಟಿಯಾಗಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗದ ಚಳ್ಳಕೆರೆ ತಾಲೂಕಿನ ನಾಗಗೊಂಡನಹಳ್ಳಿ ಬಳಿ ನಡೆದಿದೆ. 35 ವರ್ಷದ ಕೊಂಡ್ಲಹಳ್ಳಿ ಮೂಲದ ಮಲ್ಲಿಕಾರ್ಜುನ ಮೃತಪಟ್ಟ ವ್ಯಕ್ತಿ.
ಚಳ್ಳಕೆರೆ ತಾಲೂಕಿನ ನಾಗಗೊಂಡನಹಳ್ಳಿ ಬಳಿ ಕಾರ್ ಪಲ್ಟಿಯಾಗಿದೆ. ಘಟನೆಯ ಪರಿಣಾಮ ಮಲ್ಲಿಕಾರ್ಜುನ ಸ್ಥಳದಲ್ಲೇ ಮೃತಪಟ್ಟಿರೇ, ಮಾರುತಿ ಎಂಬಾತನಿಗೆ ಗಾಯಗಳಾಗಿದ್ದು, ಚಳ್ಳಕೆರೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯತ್ತಿದ್ದಾರೆ. ಸ್ಥಳಕ್ಕೆ ಪರಶುರಾಮಪುರ ಪಿಎಸ್ಐ ಬಸವರಾಜ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ : ಶಿವಣ್ಣನಿಗೆ ಕ್ಯಾನ್ಸರ್? ಅಮೆರಿಕದಲ್ಲಿ ಚಿಕಿತ್ಸೆ, ಸುದ್ದಿ ಕೇಳಿ ಫ್ಯಾನ್ಸ್ ಕಂಗಾಲು..!
Post Views: 1,047