Download Our App

Follow us

Home » ಸಿನಿಮಾ » ಮಕ್ಕಳ ಸಾಹಸದ ಕಥಾನಕ‌ ‘ಭಗವತಿ’ ಚಿತ್ರಕ್ಕೆ ಚಾಲನೆ..!

ಮಕ್ಕಳ ಸಾಹಸದ ಕಥಾನಕ‌ ‘ಭಗವತಿ’ ಚಿತ್ರಕ್ಕೆ ಚಾಲನೆ..!

ಮಕ್ಕಳ ಸಾಹಸದ ಕಥಾನಕ‌ ಒಳಗೊಂಡ ‘ಭಗವತಿ’ ಚಿತ್ರ ವಿದ್ಯಾಧರೆ ಸಿನಿಮಾಸ್ ಮೂಲಕ ನಿರ್ಮಾಣವಾಗುತ್ತಿದೆ. ಬಂಗಾರಿ, ಶಿವನಪಾದ ಸೇರಿದಂತೆ ಹಲವಾರು ಚಿತ್ರಗಳನ್ನು ನಿರ್ದೇಶಿಸಿದ ಮಾ. ಚಂದ್ರು ಅವರು ಕಥೆ ಚಿತ್ರಕಥೆ ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳುತ್ತಿರುವ ಮಕ್ಕಳ ಸಾಹಸದ ಕಥೆ ಇರುವ ಮತ್ತೊಂದು ಸಿನಿಮಾ ಭಗವತಿ. ಈ ಚಿತ್ರಕ್ಕೆ ಇತ್ತೀಚೆಗೆ ಬೆಂಗಳೂರಿನ ವಿಜಯ ನಗರದ ಮಾರುತಿ ಮಂದಿರದಲ್ಲಿ ಮುಹೂರ್ತ ಸಮಾರಂಭ ನಡೆಯಿತು.

ಈ ಹಿಂದೆ ಲೂಸ್ ಮಾದ ಯೋಗಿ, ರಾಗಿಣಿ ಅಭಿನಯದ ಬಂಗಾರಿ, ಬೆಟ್ಟದ ದಾರಿ, ನಡಗಲ್ಲು, ಶಿವನಪಾದ ಚಿತ್ರಗಳನ್ನು ನಿರ್ದೇಶಿಸಿದ್ದ ಮಾ. ಚಂದ್ರು ಅವರು ಈ ಸಲ ಮಕ್ಕಳ ಸಾಹಸ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ಮಕ್ಕಳಿಗೆ ಆಗುತ್ತಿರುವ ಅನ್ಯಾಯದ ವಿರುದ್ದ ಸಿಡಿದುನಿಂತ ಮಕ್ಕಳು ಕಾನೂನಾತ್ಮಕವಾಗಿ ಹೋರಾಟ ನಡೆಸಿ ಗೆಲ್ಲುವಂಥ ಮಕ್ಕಳ ಸಾಹಸಮಯ ಕಥಾಹಂದರ ಈ ಚಿತ್ರದಲ್ಲಿದೆ. ಈಗಿನ ಜನರೇಶನ್ ಕುರಿತಾದ ಕಾನ್ಸೆಪ್ಟ್ ಹೊಂದಿರುವ ಈ ಚಿತ್ರದಲ್ಲಿ ಮಕ್ಕಳು ಹೇಗೆ ಹೋರಾಡಿ ಗೆಲ್ಲುತ್ತಾರೆ ಎಂಬುದನ್ನು ನಿರ್ದೇಶಕರು ರೋಚಕ ಕಥೆಯೊಂದಿಗೆ ಹೇಳಹೊರಟಿದ್ದಾರೆ. ಈ ಚಿತ್ರದಲ್ಲಿ ಒಟ್ಟು ಎರಡು ಹಾಡುಗಳಿದ್ದು, ರಾಜೇಶ್ ಗೌಡ ಕ್ಯಾಮೆರಾ ವರ್ಕ್ ನಿಭಾಯಿಸುತ್ತಿದ್ದಾರೆ.

ಆಗಸ್ಟ್ 5ರಿಂದ ಆರಂಭಿಸಿ ಬೆಂಗಳೂರು, ಕನಕಪುರ ಹಾಗೂ ಮಡಿಕೇರಿಯ ಸುತ್ತಮುತ್ತ ಭಗವತಿ ಚಿತ್ರದ ಚಿತ್ರೀಕರಣ ನಡೆಯಲಿದೆ. ಇನ್ನು ಈ ಚಿತ್ರದಲ್ಲಿ ಬಾಲ ಕಲಾವಿದರಾದ ರಿಷಿಕಾ ರಾಮ್, ದೀಪಕ್ ಪಿ.ಕೆ, ಅದ್ವೈತ್ ಪ್ರೇರಣ್, ಅದೇಶ್ ಪ್ರೇರಣ್, ಅಭಿನವ್ ಸಮರ್ಥ, ವೇದಾಂತ್, ಮೇಘನಾ, ಮಾನ್ವಿ, ರೋಶಿನಿ, ತೇಜಸ್, ಸುಷ್ಮಾ, ಶ್ವೇತಾ, ವಿಷ್ಣು, ಜಿ.ಡಿ. ಹೇರಂಭ , ಭಾನು, ಮೋಹನ್ ಕುಮಾರ್ ಡಿ.ಕೆ. ಸತೀಶ್, ಶರತ್, ಹರ್ಷ. ಮುಂತಾದವರು ಅಭಿನಯಿಸುತ್ತಿದ್ದಾರೆ. ಉಳಿದ ಕಲಾವಿದರ ಹಾಗೂ ತಾಂತ್ರಿಕ ವರ್ಗದ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ.

ಇದನ್ನೂ ಓದಿ : ಡಿಸಿಎಂ ಡಿ.ಕೆ ಶಿವಕುಮಾರ್​ನ್ನು ಭೇಟಿಯಾದ ದರ್ಶನ್​​ ಪತ್ನಿ ವಿಜಯಲಕ್ಷ್ಮಿ..!

Leave a Comment

DG Ad

RELATED LATEST NEWS

Top Headlines

ಬಸ್ ಚಾಲಕನ ನಿಯಂತ್ರಣ ತಪ್ಪಿ ಭೀಕರ ರಸ್ತೆ ಅಪಘಾತ – 7 ಮಂದಿ ದಾರುಣ ಸಾವು..!

ಮುಂಬೈ : ಬಸ್‌ ಚಾಲಕನ ನಿಯಂತ್ರಣ ತಪ್ಪಿ ಭೀಕರ ರಸ್ತೆ ಅಪಘಾತ ಸಂಭವಿಸಿದ ಪರಿಣಾಮ 7 ಮಂದಿ ಸಾವನ್ನಪ್ಪಿರೋ ಘಟನೆ ಮುಂಬೈನ ಕುರ್ಲಾದಲ್ಲಿ ನಡೆದಿದೆ. ಟ್ರಾನ್ಸ್‌ಪೋರ್ಟ್ ಸಂಸ್ಥೆಯ ಬಸ್

Live Cricket

Add Your Heading Text Here