Download Our App

Follow us

Home » ಅಪರಾಧ » ಚಿಕ್ಕೋಡಿಯಲ್ಲಿ ಪೊಲೀಸರ ಭರ್ಜರಿ ಕಾರ್ಯಾಚರಣೆ : ದಾಖಲೆ ಇಲ್ಲದೆ ಸಾಗಿಸುತ್ತಿದ್ದ 16 ಲಕ್ಷ ನಗದು ವಶಕ್ಕೆ..!

ಚಿಕ್ಕೋಡಿಯಲ್ಲಿ ಪೊಲೀಸರ ಭರ್ಜರಿ ಕಾರ್ಯಾಚರಣೆ : ದಾಖಲೆ ಇಲ್ಲದೆ ಸಾಗಿಸುತ್ತಿದ್ದ 16 ಲಕ್ಷ ನಗದು ವಶಕ್ಕೆ..!

ಚಿಕ್ಕೋಡಿ : ಲೋಕಸಭೆ ಚುನಾವಣೆಗೆ ಹಿನ್ನೆಲೆ ಇಡೀ ದೇಶಾದ್ಯಂತ ನೀತೆ ಸಂಹಿತೆ ಜಾರಿಯಾಗಿದ್ದು, ಅಲ್ಲಲ್ಲಿ ಚೆಕ್​ಪೋಸ್ಟ್​ಗಳನ್ನು ಹಾಕಿರುವ ಪೊಲೀಸರು ಮತ್ತು ಚುನಾವಣಾಧಿಕಾರಿಗಳು, ಚುನಾವಣಾ ಅಕ್ರಮಗಳನ್ನು ತಡೆಯಲು ಹದ್ದಿನ ಕಣ್ಣಿಟ್ಟಿದ್ದಾರೆ.

ಈಗಾಗಲೇ ರಾಜ್ಯದ ಹಲವೆಡೆ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಕೋಟಿ ಕೋಟಿ ಹಣ, ಮದ್ಯ, ಚಿನ್ನಾಭರಣ ಸೀಜ್​ ಮಾಡಲಾಗಿದೆ. ಇದರ ಬೆನ್ನಲ್ಲೇ ಇದೀಗ ಚಿಕ್ಕೋಡಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 16 ಲಕ್ಷ ಹಣವನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರು ಹಣದ ಸಮೇತ ಮಹಾರಾಷ್ಟ್ರದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಮಹಾರಾಷ್ಟ್ರದ ಇಂಚಲಕರಂಜಿ ಪಟ್ಟಣಕ್ಕೆ ತೆರಳುತ್ತಿದ್ದ ಇಬ್ಬರು ವ್ಯಕ್ತಿಗಳು ಬಸ್ ಮೂಲಕ 16 ಲಕ್ಷ 30 ಸಾವಿರ ಹಣ ಸಾಗಿಸುತ್ತಿದ್ದರು. ಈ ವೇಳೆ ಚಿಕ್ಕೋಡಿ ಬಸ್ ನಿಲ್ದಾಣದಲ್ಲಿ ಪೊಲೀಸರು ತಪಾಸಣೆ ನಡೆಸಿದ ವೇಳೆ ದೊಡ್ಡ ಮೊತ್ತದ ನಗದು ಪತ್ತೆಯಾಗಿದೆ. ತಪಾಸಣೆ ನಡೆಸಿದ ಪೊಲೀಸರು ಚಿಕ್ಕೋಡಿ ಬಸ್ ಸ್ಟ್ಯಾಂಡ್ ಬಳಿ ಇಬ್ಬರನ್ನು ವಶಕ್ಕೆ ಪಡೆದು ಹಣದ ಬಗ್ಗೆ ದಾಖಲೆ ಕೇಳುತ್ತಿದ್ದಾರೆ. ಪೊಲೀಸರ ತನಿಖೆಯ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಾಗಿದೆ.

ಇದನ್ನೂ ಓದಿ :  ರಾಜ್ಯಾದ್ಯಂತ ಇಂದು ರಂಜಾನ್ ಆಚರಣೆ : ಬೆಂಗಳೂರು ಸೇರಿದಂತೆ ಹಲವೆಡೆ ಮುಸಲ್ಮಾನ್ ಬಾಂಧವರಿಂದ ಸಾಮೂಹಿಕ ಪ್ರಾರ್ಥನೆ..!

Leave a Comment

RELATED LATEST NEWS

Top Headlines

ಮೋದಿ ಮತ್ತೆ ಗೆದ್ದರೆ ತಮ್ಮ ದೇಗುಲವನ್ನು ತಾವೇ ಕಟ್ಟಿಸ್ತಾರೆ : ಸಚಿವ ಶಿವರಾಜ್​ ತಂಗಡಗಿ..!

ಕೊಪ್ಪಳ : ಮೋದಿ ಮತ್ತೆ ಗೆದ್ದರೆ ತಮ್ಮ ದೇಗುಲವನ್ನು ತಾವೇ ಕಟ್ಟಿಕೊಳ್ತಾರೆ, ರಾಮನ ಮಂದಿರ ಆಯ್ತು ಈಗ ಮೋದಿ ಮಂದಿರ ಕಟ್ತಾರೇನೋ..? ಮೋದಿಯವರ ಮಾತು ಕೇಳ್ತಾ ಇದ್ರೆ

Live Cricket

Add Your Heading Text Here