Download Our App

Follow us

Home » ರಾಜಕೀಯ » ಚಿಕ್ಕಪೇಟೆ ಶಾಸಕ ಉದಯ್ ಗರುಡಾಚಾರ್​​ಗೆ ಲಘು ಹೃದಯಾಘಾತ : ಆಸ್ಪತ್ರೆಗೆ ದಾಖಲು..!

ಚಿಕ್ಕಪೇಟೆ ಶಾಸಕ ಉದಯ್ ಗರುಡಾಚಾರ್​​ಗೆ ಲಘು ಹೃದಯಾಘಾತ : ಆಸ್ಪತ್ರೆಗೆ ದಾಖಲು..!

ಬೆಂಗಳೂರು : ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಉದಯ್ ಗರುಡಾಚಾರ್‌ಗೆ ಲಘು ಹೃದಯಘಾತವಾಗಿದೆ. ಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ನಿನ್ನೆ ಸಂಜೆ ವೇಳೆ ಅವರಿಗೆ ಹೃದಯ ಸಮಸ್ಯೆ ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ರವಾನಿಸಿದ್ದು, ಸದ್ಯ ತಜ್ಞ ವೈದ್ಯರಿಂದ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ನಿನ್ನೆ ಬೆಳಗ್ಗೆ ಶಾಸಕ ಉದಯ್ ಗರುಡಾಚಾರ್ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ಪ್ರಧಾನಿ ನರೇಂದ್ರ ಮೋದಿ ಕರೆಯಂತೆ ನಡೆಯುತ್ತಿರುವ ದೇವಾಲಯಗಳ ಸ್ವಚ್ಛತೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆದರೆ ನಿನ್ನೆ ಸಂಜೆ ಮನೆಯಲ್ಲಿ ವ್ಯಾಯಾಮ ಮಾಡುವಾಗ ಶಾಸಕ ಉದಯ್ ಗರುಡಾಚಾರ್‌ಗೆ ಲಘು ಹೃದಯಾಘಾತವಾಗಿದೆ. ತಕ್ಷಣ ಅವರನ್ನು ಜಯನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇದನ್ನೂ ಓದಿ : ದಾವಣಗೆರೆ : ಟ್ರ್ಯಾಕ್ಟರ್‌ಗೆ ಮಾರುತಿ ವ್ಯಾನ್​ ಡಿಕ್ಕಿ – ಒಂದೇ ಕುಟುಂಬದ ಮೂವರು ಸಾ*ವು..!

Btv Kannada1
Author: Btv Kannada1

Leave a Comment

RELATED LATEST NEWS

Top Headlines

“ಕೊರಗಜ್ಜ” ಸಿನಿಮಾ ರೀ ಶೂಟ್ ವೇಳೆ ಅಗೋಚರ ಶಕ್ತಿಯ ಅಪಾಯದಿಂದ ಪಾರಾದ ನಿರ್ದೇಶಕ ಅತ್ತಾವರ್…!

ತ್ರಿವಿಕ್ರಮ ಸಪಲ್ಯ ನಿರ್ಮಾಣದ ಬಹುಕೋಟಿ ಬಜೆಟ್​​ನ, ತ್ರಿವಿಕ್ರಮ ಸಿನೆಮಾಸ್ ಮತ್ತು ಸಕ್ಸಸ್ ಫಿಲಂಸ್ ಬ್ಯಾನರ್​​ನಡಿಯ “ಕೊರಗಜ್ಜ” ಸಿನಿಮಾ ಆರಂಭದಿಂದಲೂ ಹಲವಾರು ಪವಾಡ ಮತ್ತು ಸವಾಲುಗಳ ಜೊತೆ ತೊಂದರೆಗಳನ್ನು

Live Cricket

Add Your Heading Text Here