ಚಿಕ್ಕಬಳ್ಳಾಪುರ : ರೈಲಿಗೆ ತಲೆಕೊಟ್ಟು ಅಣ್ಣ-ತಂಗಿ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಶಿಡ್ಲಘಟ್ಟ ನಗರದಲ್ಲಿ ನಡೆದಿದೆ. ಒಬ್ಬರ ಕೈ ಒಬ್ಬರು ದಾರದಿಂದ ಕಟ್ಟಿಕೊಂಡು ರೈಲಿಗೆ ತಲೆಕೊಟ್ಟಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟದ ಪ್ರೇಮ ನಗರ ನಿವಾಸಿಗಳಾದ 25 ವರ್ಷದ ಪ್ರಭು, 22 ವರ್ಷದ ನವ್ಯ ಮೃತ ದುರ್ದೈವಿಗಳು. ಶಿಡ್ಲಘಟ್ಟ ನಗರದ ಶೆಟ್ಟಪ್ಪನವರ ತೋಪಿನ ರೈಲ್ವೆ ಹಳಿಯಲ್ಲಿ ಈ ಘಟನೆ ನಡೆದಿದೆ.
ತಾಯಿಯೊಂದಿಗೆ ಹೆಚ್ಚು ಒಡಂಬಡಿಕೆ ಇಟ್ಟುಕೊಂಡಿದ್ದ ಅಣ್ಣ, ತಂಗಿ ಇತ್ತೀಚೆಗೆ ತಾಯಿಯ ಮರಣದಿಂದ ಮಾನಸಿಕವಾಗಿ ಮನನೊಂದಿದ್ದರು. ಹಾಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅನ್ನೊ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಚಿಕ್ಕಬಳ್ಳಾಪುರ ರೈಲ್ವೆ ಹೊರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ : ಜೆಡಿಎಸ್-ಬಿಜೆಪಿಯವರಿಗೆ 1400ಕ್ಕೂ ಹೆಚ್ಚು ಮುಡಾ ಸೈಟ್ ಹಂಚಿಕೆಯಾಗಿವೆ – ಡಿ.ಕೆ ಸುರೇಶ್ ಗುಡುಗು..!
Post Views: 445