ಬೆಂಗಳೂರು : ಜಾತಿನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಮುನಿರತ್ನ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಸಿಐಡಿ, ಎಸ್ಐಟಿ ಪೊಲೀಸರು 590 ಪುಟಗಳ ಚಾರ್ಜ್ಶೀಟ್ ಸಲ್ಲಿಸಿದ್ದಾರೆ.
ತನಿಖೆ ವೇಳೆ SIT ಪೊಲೀಸರು 53 ಸಾಕ್ಷಿಗಳ ಹೇಳಿಕೆ ದಾಖಲಿಸಿದ್ದಾರೆ. ಈ ಚಾರ್ಜ್ಶೀಟ್ನಲ್ಲಿ 157 ದಾಖಲಾತಿ, 3 ಪ್ರತ್ಯಕ್ಷದರ್ಶಿ ಹೇಳಿಕೆಗಳು ಒಳಗೊಂಡಿದೆ. 3 ಪ್ರತ್ಯಕ್ಷದರ್ಶಿಗಳು ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಿದ್ದು, ಜಾತಿ ನಿಂದನೆ ಬಗ್ಗೆ ಎಸ್ಐಟಿ ಆಡಿಯೋ FSLಗೆ ಕಳುಹಿಸಿತ್ತು.
ಇನ್ನು FSL ವರದಿಯಲ್ಲಿ ಆಡಿಯೋ ಮುನಿರತ್ನರದ್ದೇ ಎಂಬುದು ದೃಢವಾಗಿದೆ. ವೈಜ್ಞಾನಿಕ ಸಾಕ್ಷ್ಯದಾರಗಳನ್ನ ಸಂಗ್ರಹಿಸಿ ಆರೋಪಿ ವಿರುದ್ಧ ಸಾರ್ವಜನಿಕವಾಗಿ ಜಾತಿನಿಂದನೆ ಮಾಡಿರುವುದು ದೃಢವಾಗಿದೆ.
ಇದನ್ನೂ ಓದಿ : ಚಂದ್ರಶೇಖರನಾಥ ಸ್ವಾಮೀಜಿ ವಿರುದ್ಧ FIR ಖಂಡಿಸಿ ಮಂಡ್ಯದಲ್ಲಿ ಪ್ರೊಟೆಸ್ಟ್..!
Post Views: 21