ಬೆಂಗಳೂರು : ಮಂಗಳಮುಖಿಯರು ಯುವಕನಿಗೆ ಬಲವಂತವಾಗಿ ಲಿಂಗ ಪರಿವರ್ತನೆ ಮಾಡಿದ ಆರೋಪ ಕೇಳಿಬಂದಿದೆ. ಲಿಂಗ ಪರಿವರ್ತನೆ ಮಾಡಿ ಭಿಕ್ಷಾಟನೆ ಮಾಡುವಂತೆ ದೈಹಿಕ ಹಲ್ಲೆ, ಮಾನಸಿಕ ಹಿಂಸೆ ನೀಡಿದ್ದಾರೆ ಅನ್ನೊ ಆರೋಪವಿದೆ.
ಮಂಗಳಮುಖಿಯರು ಯುವಕನಿಗೆ ಬಲವಂತವಾಗಿ ಇಂಜೆಕ್ಷನ್ ಕೊಟ್ಟು ಲಿಂಗ ಪರಿವರ್ತನೆ ಮಾಡಿದ್ದಾರೆ. ನಂತರ ಅಶ್ಲೀಲ ಪೋಟೊ ತೆಗೆದುಕೊಂಡು ಬ್ಲಾಕ್ ಮೇಲ್ ಮಾಡಿದ್ದಲ್ಲದೆ ಮನಬಂದಂತೆ ಥಳಿಸಿ ಚಿತ್ರ ಹಿಂಸೆ ನೀಡಿರುವ ಕೃತ್ಯ ಫ್ರೇಜರ್ ಟೌನ್ನಲ್ಲಿ ನಡೆದಿದೆ.
ಈ ಬಗ್ಗೆ ಕಸೀಪಾ ಎನ್ನುವರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಐವರ ವಿರುದ್ಧ ಪುಲಿಕೇಶಿನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಬರೋದಿಲ್ಲ ಎಂದಿದ್ದಕ್ಕೆ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದರೆಂದು ಆರೋಪ ಕೇಳಿಬಂದಿದ್ದು, ಕೇಸ್ ದಾಖಲಿಸಿ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.
ಇದನ್ನೂ ಓದಿ : ರೋಡ್ ರೇಜ್ ಕೇಸ್ – ಕಾರಿನ ಗ್ಲಾಸ್ ಒಡೆದು ದರ್ಪ ತೋರಿದ್ದ ಆರೋಪಿ ಅರೆಸ್ಟ್..!
Post Views: 127