Download Our App

Follow us

Home » ರಾಜಕೀಯ » ಸ್ವಾಮೀಜಿಗಳನ್ನು ವಿಚಾರಣೆಗೆ ಕರೆಯಬಾರದಾ? ಕಾನೂನು, ಸಂವಿಧಾನ ಎಲ್ಲರಿಗೂ ಒಂದೇ – ಸಚಿವ ಪ್ರಿಯಾಂಕ್​ ಖರ್ಗೆ..!

ಸ್ವಾಮೀಜಿಗಳನ್ನು ವಿಚಾರಣೆಗೆ ಕರೆಯಬಾರದಾ? ಕಾನೂನು, ಸಂವಿಧಾನ ಎಲ್ಲರಿಗೂ ಒಂದೇ – ಸಚಿವ ಪ್ರಿಯಾಂಕ್​ ಖರ್ಗೆ..!

ಗುಲ್ಬರ್ಗ : ‘ಮುಸ್ಲಿಮರಿಗೆ ಮತದಾನದ ಹಕ್ಕನ್ನು ರದ್ದುಪಡಿಸಲು ಕಾನೂನು ಜಾರಿ ಮಾಡಬೇಕು’ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ವಿಶ್ವ ಒಕ್ಕಲಿಗ ಮಹಾಸಂಸ್ಥಾನದ  ಚಂದ್ರಶೇಖರನಾಥ ಸ್ವಾಮೀಜಿಗೆ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಉಪ್ಪಾರಪೇಟೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಸ್ವಾಮೀಜಿಗೆ ನೋಟಿಸ್​​ ನೀಡಿದ ವಿಚಾರ ಒಕ್ಕಲಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಇದೀಗ ಈ ಬಗ್ಗೆ ಸಚಿವ ಪ್ರಿಯಾಂಕ್​ ಖರ್ಗೆ ಮಾತನಾಡಿ, ಸ್ವಾಮೀಜಿಗಳನ್ನು ವಿಚಾರಣೆಗೆ ಕರೆಯಬಾರದಾ? ವಿಚಾರಣೆಯನ್ನೇ ಮಾಡಬಾರದು ಅಂದ್ರೆ ಹೇಗೆ ? ಕಾನೂನು, ಸಂವಿಧಾನ ಎಲ್ಲರಿಗೂ ಒಂದೇ. ಅವರಿಗೊಂದು, ನಮಗೊಂದು ಸಂವಿಧಾನ, ಕಾನೂನು ಇದೆಯಾ? ಎಂದು ಸ್ವಾಮೀಜಿಗೆ ನೋಟಿಸ್ ನೀಡಿದನ್ನು ​ಸಮರ್ಥಿಸಿಕೊಂಡಿದ್ದಾರೆ.

ಇನ್ನು ಸ್ವಾಮೀಜಿಯವರು ನೀಡಿರುವ ಹೇಳಿಕೆ ಸಂವಿಧಾನ ವಿರೋಧಿ. ವಿಷಾಧ ವ್ಯಕ್ತಪಡಿಸಿದ ಮಾತ್ರಕ್ಕೆ ಹೇಳಿಕೆಯನ್ನೇ ಕೊಟ್ಟಿಲ್ಲ ಅಂತಾನಾ? ಸ್ವಾಮೀಜಿ ಪರ ಹೋರಾಟ ಮಾಡ್ತೀವಿ ಅಂದ್ರೆ ಏನರ್ಥ. ಅಶೋಕ್​ ಅವ್ರೇ ನೀವು ಸ್ವಾಮೀಜಿ ಪರ ಹೋರಾಡಿದ್ರೆ, ಸಂವಿಧಾನದ ಉಳಿವಿಗಾಗಿ ಹೋರಾಡೋ ಲಕ್ಷಾಂತರ ಜನರಿದ್ದಾರೆ  ಅಶೋಕ್​ ನೆನಪಿಟ್ಟುಕೊಳ್ಳಿ ಎಂದು ಪ್ರಿಯಾಂಕ್​​ ಖರ್ಗೆ ತಿಳಿಸಿದ್ದಾರೆ.

ಇದನ್ನೂ ಓದಿ : BTV ವರದಿ ಬಿಗ್​ ಇಂಪ್ಯಾಕ್ಟ್​ – ಕಾಂಗ್ರೆಸ್​ನಿಂದ 6 ವರ್ಷಗಳ ಕಾಲ ಗುರಪ್ಪ ನಾಯ್ಡು ಕಿಕ್​ಔಟ್..!​

Leave a Comment

DG Ad

RELATED LATEST NEWS

Top Headlines

ನಟ ದರ್ಶನ್​ಗೆ ನಾಳೆ ನಿರ್ಣಾಯಕ ದಿನ – ಏನಾಗಲಿದೆ ಬೇಲ್ ಭವಿಷ್ಯ?

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ A2 ಆರೋಪಿಯಾಗಿರುವ ನಟ ದರ್ಶನ್​​ಗೆ ನಾಳೆ ನಿರ್ಣಾಯಕ ದಿನವಾಗಿದೆ. ಮಧ್ಯಂತರ ಜಾಮೀನು ಪಡೆದು ಜೈಲಿಂದ ಹೊರಗೆ ಬಂದಿರುವ ನಟ ದರ್ಶನ್ ಸದ್ಯ

Live Cricket

Add Your Heading Text Here