ಬೆಂಗಳೂರು : ಸಚಿವ ಚಲುವರಾಯಸ್ವಾಮಿ ಹಾಗೂ ಕಾಂಗ್ರೆಸ್ ಮುಖಂಡ ಕೀಲಾರಿ ಜಯರಾಮ ನಡುವೆ ಗಲಾಟೆ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿದೆ. ವರ್ಗಾವಣೆ ಹಣ ಹಂಚಿಕೆ ಮಾಡುವ ವಿಚಾರಕ್ಕೆ ಚಲುವರಾಯಸ್ವಾಮಿ ಮೇಲೆ ಹಲ್ಲೆ ನಡೆದಿದೆ ಎಂದು ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.
ಇದರ ಬೆನ್ನಲ್ಲೇ ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಚಲುವರಾಯಸ್ವಾಮಿ ಅವರು, ನಾನು ಎಂಗೇಜ್ಮೆಂಟ್ ಹೋಗಿದ್ದೆ. ಅಲ್ಲೇನು ಗಲಾಟೆ ನಡೆದಿಲ್ಲ, ಜಯರಾಮ್ ಗೆ ನೀವು ಕೇಳಿ. ಅಂಥಾದ್ದೇನು ನಡೆದಿಲ್ಲ ಎಂದಿದ್ದಾರೆ.
ಇನ್ನು ನಾನು ಜಯರಾಂ ಒಳ್ಳೆ ಸ್ನೇಹಿತರು. ಮಾತನಾಡಿದ್ದನ್ನೇ ಗಲಾಟೆ ಅಂತಾ ಹೇಳ್ತಿದ್ದಾರೆ. ಹೆಚ್ಡಿಕೆ ಏನೋ ಮಾತಾಡಬೇಕು ಅಂತಾ ಮಾತಾಡ್ತಾರೆ ಎಂದು ಕುಮಾರಸ್ವಾಮಿ ವಿರುದ್ದ ಸಚಿವ ಚೆಲುವರಾಸ್ವಾಮಿ ಕಿಡಿಕಾರಿದ್ದಾರೆ.
ಇದನ್ನೂ ಓದಿ : ಜಿದ್ದಾಜಿದ್ದಿನ ಚನ್ನಪಟ್ಟಣದಲ್ಲಿ ಕಾಂಗ್ರೆಸ್ಗೆ ಬಿಗ್ ಶಾಕ್ – JDS ಪರ ಪ್ರಚಾರಕ್ಕಿಳಿದ ಕಾಂಗ್ರೆಸ್ ಶಾಸಕ..!
Post Views: 132