ಬೆಂಗಳೂರು : ನಮ್ಮ ಮೇಲೆ ನಾವೇ ಯುದ್ಧ ಮಾಡೋದು ಸರಿಯಲ್ಲ.ಕೂಡಿ ಬಾಳಿದ್ರೆ ಸ್ವರ್ಗ ಸುಖ ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಯತ್ನಾಳ್ ವಿರುದ್ಧ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಕಿಡಿ ಕಾರಿದ್ದಾರೆ.
ಬೆಂಗಳೂರಿನಲ್ಲಿ ಬಿಜೆಪಿ ಭಿನ್ನಮತದ ಬಗ್ಗೆ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ ಅವರು, ಯತ್ನಾಳ್ ಅವರನ್ನು ಕಡೆಗಣನೆ ಮಾಡಿಲ್ಲ.. ಅವ್ರು ನಮ್ಮ ಶಾಸಕರು. ನಮ್ಮ ಪಕ್ಷದ ಅಧ್ಯಕ್ಷರು ವಿಜಯೇಂದ್ರ, ಅವರು ಹೇಳಿದಂತೆ ಕೇಳಬೇಕು ಎಂದಿದ್ದಾರೆ.
ಇನ್ನು ವಿಜಯಪುರದ ವಕ್ಪ್ ಹೋರಾಟದಲ್ಲೂ ನಾನು ಭಾಗಿಯಾಗಿದ್ದೆ. ಅಧ್ಯಕ್ಷರ ಆದೇಶವೇ ಪಕ್ಷದ ಆದೇಶ, ಬೇರೆಯವರ ಆದೇಶ ಅಲ್ಲ. ಅಧ್ಯಕ್ಷರ ಆದೇಶ ಪಾಲನೆ ಮಾಡೋದು ನಮ್ಮ ಕೆಲಸ.
ಪಕ್ಷ ಏನು ಹೇಳುತ್ತೋ ಮಾಡೋದು ಅಷ್ಟೇ ನಮ್ಮ ಕೆಲಸ ಎಂದಿದ್ದಾರೆ.
ಇದನ್ನೂ ಓದಿ : ಇಂದಿರಾನಗರ ಹೋಟೆಲ್ನಲ್ಲಿ ಮಾಯ ಕೊಲೆ ಕೇಸ್ – ಆರೋಪಿ ಪೊಲೀಸ್ ವಶಕ್ಕೆ..!
Post Views: 48