ಬಿಗ್ ಬಾಸ್ : ನಿನ್ನೆ ಜೋಡಿ ಟಾಸ್ಕ್ ಮುಗಿದ ಬಳಿಕ ಚೈತ್ರಾ ಕುಂದಾಪುರ ಅವರು ಕುಸಿದು ಬಿದ್ದಿದ್ದಾರೆ. ಬಾತ್ರೂಮ್ ಏರಿಯಾಲ್ಲಿ ಒಬ್ಬರೇ ಇದ್ದಾಗ ಅವರು ಪ್ರಜ್ಞೆ ತಪ್ಪಿದ್ದಾರೆ. ಇದನ್ನು ಗಮನಿಸಿದ ಬಿಗ್ ಬಾಸ್ ಕೂಡಲೇ ಅವರ ನೆರವಿಗಾಗಿ ಮೋಕ್ಷಿತಾ ಮತ್ತು ಗೌತಮಿ ಜಾದವ್ ಅವರನ್ನು ಕಳಿಸಿದ್ದಾರೆ.
ಅವರಿಬ್ಬರು ಓಡಿ ಬಂದು ನೋಡಿದಾಗ ಚೈತ್ರಾ ಕುಂದಾಪುರ ಅವರು ನೆಲದ ಮೇಲೆ ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿ ಬಿದ್ದಿದ್ದರು. ಬಳಿಕ ಬಿಗ್ ಬಾಸ್ ಮನೆಯ ಇನ್ನುಳಿದ ಸದಸ್ಯರು ಕೂಡ ಓಡೋಡಿ ಬಂದರು. ಎಷ್ಟು ಪ್ರಯತ್ನಿಸಿದರೂ ಕೂಡ ಚೈತ್ರಾ ಅವರಿಗೆ ಪ್ರಜ್ಞೆ ಬಂದಿಲ್ಲ. ಹೀಗಾಗಿ ಬಿಗ್ಬಾಸ್ ಚೈತ್ರಾ ಅವರನ್ನು ಕನ್ಫೆಕ್ಷನ್ ರೂಂ ಕರೆ ತನ್ನಿ ಅಂತ ಹೇಳಿದ್ದರು.
ಬಳಿಕ ತ್ರಿವಿಕ್ರಮ್ ಅವರು ಚೈತ್ರಾ ಅವರನ್ನು ಎತ್ತಿಕೊಂಡು ಬಂದು ಕನ್ಫೆಷನ್ ರೂಮ್ನಲ್ಲಿ ಮಲಗಿಸಿದರು. ಎತ್ತಿಕೊಂಡ ಬರುವಾಗ ಚೈತ್ರಾ ಪರಿಸ್ಥಿತಿ ಗಂಭೀರವಾಗಿದ್ದಂತೆ ಕಾಣಿಸಿದೆ.
ಬಿಗ್ ಬಾಸ್ ಮನೆಯಲ್ಲಿ ಪ್ರತಿ ದಿನವೂ ಒಂದಲ್ಲ ಒಂದು ಟಾಸ್ಕ್ ಇರುತ್ತದೆ. ಹಾಗಾಗಿ ಎನರ್ಜಿ ಲೆವೆಲ್ ಕಾಪಾಡಿಕೊಳ್ಳುವುದು ಮುಖ್ಯ. ಚೈತ್ರಾ ಅವರು ಹೀಗೆ ಏಕಾಏಕಿ ಪ್ರಜ್ಞೆ ತಪ್ಪಿ ಬೀಳಲು ಕಾರಣ ಆಗಿದ್ದು ಏನು ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.
ಇದನ್ನೂ ಓದಿ : ಸಚಿವ ಜಮೀರ್ ಅಹ್ಮದ್ ಖಾನ್ಗೆ ಅಕ್ರಮ ಆಸ್ತಿ ಸಂಕಷ್ಟ – ಲೋಕಾಯುಕ್ತ ಬುಲಾವ್..!