ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಹೊಸ ಪಿಂಚಣಿ ಯೋಜನೆ ‘ಏಕೀಕೃತ ಪಿಂಚಣಿ ಯೋಜನೆ‘ಗೆ (ಯುಪಿಎಸ್) ಅನುಮೋದನೆ ನೀಡಿದೆ. ನಿನ್ನೆ ರಾತ್ರಿ ನಡೆದ ಕೇಂದ್ರ ಕ್ಯಾಬಿನೆಟ್ ಸಭೆಯಲ್ಲಿ UPSಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. 25 ವರ್ಷ ಕೆಲಸ ಮಾಡುವ ನೌಕರರಿಗೆ ಪೂರ್ಣ ಪಿಂಚಣಿ ಸಿಗಲಿದೆ ಎಂದು ಸರ್ಕಾರ ಹೇಳಿದೆ. ಯುಪಿಎಸ್ ಯೋಜನೆಯಿಂದ 23 ಲಕ್ಷ ಕೇಂದ್ರ ನೌಕರರು ಪ್ರಯೋಜನ ಪಡೆಯಲಿದ್ದಾರೆ. ಈ ಯೋಜನೆಯು 2025ರ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ.
ಹೊಸ ಪಿಂಚಣಿ ನೀತಿಯಲ್ಲಿ ಏನಿದೆ?
- 25 ವರ್ಷ ಸರ್ವೀಸ್ಗೆ 50% ಪೆನ್ಷನ್
- ಪಿಂಚಣಿದಾರ ಮೃತಪಟ್ಟರೆ, ಕುಟುಂಬಕ್ಕೆ ಪಿಂಚಣಿಯ 60%
- 10 ವರ್ಷಗಳ ನಂತರ ಕೆಲಸ ಬಿಟ್ಟರೆ 10,000 ರೂಪಾಯಿ ಪಿಂಚಣಿ
- ಕೇಂದ್ರ ಸರ್ಕಾರಿ ನೌಕರರಿಗೆ ಹಣದುಬ್ಬರ ಸೂಚ್ಯಂಕದ ಲಾಭ
- ಪ್ರತಿ ಆರು ತಿಂಗಳ ಸೇವೆಗೆ, ನಿವೃತ್ತಿಯ ನಂತರ ಮಾಸಿಕ ಸಂಬಳದ 1/10 ಭಾಗ
ಇದನ್ನೂ ಓದಿ : ಬೆಂಗಳೂರಿಗರನ್ನು ಬೆಚ್ಚಿಬೀಳಿಸಿದ ಬಾಲಕಿಯರ ಡಬಲ್ ಮರ್ಡರ್ – ಮಲತಂದೆಯಿಂದಲೇ ಹೆಣ್ಮಕ್ಕಳ ಬರ್ಬರ ಹತ್ಯೆ..!
Post Views: 178