Download Our App

Follow us

Home » ಮೆಟ್ರೋ » ಪೊಲೀಸರ ವಿರುದ್ಧ ದೂರಿದ್ದಕ್ಕೆ ಸುಳ್ಳು ಕೇಸ್​ ಹಾಕಿ ಬಂಧಿಸಿದ ಆರೋಪ ​- ಜಡ್ಜ್​ ಮುಂದೆ ಅಳಲು ತೋಡಿಕೊಂಡ KPTCL ಉದ್ಯೋಗಿ..!

ಪೊಲೀಸರ ವಿರುದ್ಧ ದೂರಿದ್ದಕ್ಕೆ ಸುಳ್ಳು ಕೇಸ್​ ಹಾಕಿ ಬಂಧಿಸಿದ ಆರೋಪ ​- ಜಡ್ಜ್​ ಮುಂದೆ ಅಳಲು ತೋಡಿಕೊಂಡ KPTCL ಉದ್ಯೋಗಿ..!

ಬೆಂಗಳೂರು : ಪೊಲೀಸರ ವಿರುದ್ಧ ದೂರಿದ್ದಕ್ಕೆ ಸುಳ್ಳು ಕೇಸ್ ಹಾಕಿ ಬಂಧನ ಮಾಡಿದ್ದಾರೆ ಎಂದು ಕೆಪಿಟಿಸಿಎಲ್ ಉದ್ಯೋಗಿಯೊಬ್ಬರು ಗಂಭೀರ ಅರೋಪ ಮಾಡಿದ್ದಾರೆ.

ಪೊಲೀಸರು ಗಾಂಜಾ ಕೇಸ್ ಹಾಕಿದ್ದಾರೆ ಎಂದು ಕೆಪಿಟಿಸಿಎಲ್ ಇಂಜಿನಿಯರ್ ಆಗಿರುವ ಶಾಂತಕುಮಾರ್​ ಎನ್ನುವರು ಹೈಕೋರ್ಟ್​ ಮೊರಹೋಗಿದ್ದು, ಹೈಕೋರ್ಟ್​ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಪೀಠದ ಮುಂದೆ ಪೊಲೀಸರಿಂದ ತಮಗಾದ ಕಿರುಕುಳವನ್ನು ಬಿಚ್ಚಿಟ್ಟಿದ್ದಾರೆ. ಇದನ್ನು ಆಲಿಸಿದ ಹೈಕೋರ್ಟ್​, ಪೊಲೀಸರಿಗೆ ಎಚ್ಚರಿಕೆ ನೀಡಿದೆ.

ಅಂತೆಯೇ ಕಿರುಕುಳ ನೀಡದಂತೆ ಪೊಲೀಸರಿಗೆ ಹೇಳುವಂತೆ ಎಸ್​​ಪಿಪಿಗೆ ಸೂಚನೆ ನೀಡಿದೆ. ಇನ್ನು ಈ ಆರೋಪ ಸತ್ಯವಾದರೆ ಡಿವೈಎಸ್​ಪಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಕೋರ್ಟ್ ತಿಳಿಸಿದೆ.

ಪೊಲೀಸರ ವಿರುದ್ಧ ಮಾಡಿದ ಆರೋಪಗಳೇನು? ಮದುವೆ ರದ್ದಾಗಿದ್ದಕ್ಕೆ ದುಡ್ಡು ಕೊಡುವಂತೆ ಶಾಸಕ ಹಾಗೂ‌ ಪೊಲೀಸರು ಬೆದರಿಕೆ ಹಾಕಿದ್ದಾರೆ. ಹೀಗಾಗಿ ಪೊಲೀಸರ ವಿರುದ್ಧ ಲೋಕಾಯುಕ್ತ ಸಂಸ್ಥೆಗೆ ಶಾಂತಕುಮಾರಸ್ವಾಮಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಗಾಂಜಾ ಕೇಸ್ ಹಾಕಿ ಬಂಧಿಸಿದ್ದಾರೆ. ಅಲ್ಲದೇ ಪೊಲೀಸರು ಡೋರ್ ಕ್ಲೋಸ್ ಮಾಡಿ ಹೊಡೆದಿದ್ದಾರೆ ಎಂದು ಸಾಗರ ಡಿವೈಎಸ್​ಪಿ ಗೋಪಾಲಕೃಷ್ಣ ನಾಯಕ್ ವಿರುದ್ಧ‌ ಆರೋಪ ಮಾಡಿದ್ದಾರೆ. ಸದ್ಯ ಪೊಲೀಸರಿಗೆ ಈ ವಿಚಾರವಾಗಿ ಹೈಕೋರ್ಟ್ ವಾರ್ನ್ ಮಾಡಿದೆ.

ಇದನ್ನೂ ಓದಿ : ಮದ್ಯ ಪ್ರಿಯರಿಗೆ ಗುಡ್​​ನ್ಯೂಸ್​​​ ಕೊಟ್ಟ ಸರ್ಕಾರ – ಮಿಡ್​ನೈಟ್​​ವರೆಗೂ ಓಪನ್​ ಇರುತ್ತೆ ಬಾರ್​​ & ಹೋಟೆಲ್​​​​​..!

Leave a Comment

DG Ad

RELATED LATEST NEWS

Top Headlines

ಮಾಜಿ ಮಂತ್ರಿ ಮುನಿರತ್ನ ವಿರುದ್ಧ ತಿರುಗಿಬಿದ್ದ ಒಕ್ಕಲಿಗರು – ಕಠಿಣ ಕ್ರಮಕ್ಕೆ ಆಗ್ರಹ..!

ಬೆಂಗಳೂರು : ಗುತ್ತಿಗೆದಾರನಿಗೆ ಜೀವ ಬೆದರಿಕೆ, ಜಾತಿ ನಿಂದನೆ ಕೇಸ್‌ನಲ್ಲಿ ಶಾಸಕ ಮುನಿರತ್ನ ಬಂಧನವಾಗಿದೆ. ಇದೀಗ ಒಕ್ಕಲಿಗ ಸಮುದಾಯ ಮತ್ತು ಒಕ್ಕಲಿಗ ಹೆಣ್ಣು ಮಕ್ಕಳಿಗೆ ಅಪಮಾನ  ಮಾಡಿರುವುದನ್ನು

Live Cricket

Add Your Heading Text Here