ಉಡುಪಿ : ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಜಿಲ್ಲೆಯ ಕಡಿಯಾಳಿ ಓಕುಡೆ ಟವರ್ಸ್ ಬಳಿ ಸಂಭವಿಸಿದೆ. ಘಟನೆಯಲ್ಲಿ 3-4 ವಾಹನಗಳು ಜಖಂಗೊಂಡಿದ್ದು, ಓರ್ವ ವೃದ್ದನಿಗೆ ಗಂಭೀರ ಗಾಯವಾಗಿದೆ.
ಕಾರು ಮಣಿಪಾಲದಿಂದ ಉಡುಪಿ ಕಡೆಗೆ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಕಡಿಯಾಳಿ ಬಳಿ ಅತೀ ವೇಗದಿಂದ ಬಂದ ಕಾರು ಆಟೋಗೆ ಡಿಕ್ಕಿ ಹೊಡೆದು ಚಾಲಕನ ನಿಯಂತ್ರಣ ತಪ್ಪಿ ಸಡನ್ ಪಲ್ಟಿಯಾಗಿದೆ.
ಪಲ್ಟಿಯಾದ ರಭಸಕ್ಕೆ ರಸ್ತೆ ಬದಿಯಲ್ಲಿ ಬೈಕ್ನಲ್ಲಿ ಕುಳಿತಿದ್ದ ಸವಾರನಿಗೆ ಡಿಕ್ಕಿಯಾಗಿ, ಪಾರ್ಕ್ ಮಾಡಿದ್ದ ಮತ್ತೊಂದು ಕಾರಿಗೂ ಡಿಕ್ಕಿ ಹೊಡೆದಿದೆ. ಬೈಕ್ ಸವಾರ ವೃದ್ಧನಿಗೆ ಗಂಭೀರ ಗಾಯವಾಗಿದ್ದು, ಖಾಸಗಿ ಆಸ್ಪತ್ರಗೆ ದಾಖಲಿಸಲಾಗಿದೆ. ಅಪಘಾತದ ಭೀಕರ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಉಡುಪಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಇಂದು ದರ್ಶನ್, ಪವಿತ್ರಾಗೌಡ ಸೇರಿ 8 ಆರೋಪಿಗಳ ಜಾಮೀನು ಭವಿಷ್ಯ ನಿರ್ಧಾರ.. ದಾಸನಿಗೆ ಸಿಗುತ್ತಾ ರಿಲೀಫ್?
Post Views: 132