ಚನ್ನಪಟ್ಟಣ ಉಪಚುನಾವಣೆ ದಿನಾಂಕ ಘೋಷಣೆಯಾಗಿದ್ದು, ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್‌ನಲ್ಲಿ ರಾಜಕೀಯ ಚಟುವಟಿಕೆ ಚುರುಕಾಗಿದೆ. ಟಿಕೆಟ್‌ಗಾಗಿ ಜೆಡಿಎಸ್-ಬಿಜೆಪಿ ಹಗ್ಗಜಗ್ಗಾಟದ ನಡುವೆಯೂ ಮೈತ್ರಿ ಟಿಕೆಟ್‌ನ ಪ್ರಬಲ ಆಕಾಂಕ್ಷಿಯಾಗಿದ್ದ, ಬಿಜೆಪಿ ಸೈನಿಕ ಸಿ.ಪಿ.ಯೋಗೇಶ್ವರ್ ಇಂದು ಬಿಜೆಪಿ ಮುಖಂಡರು, ಕಾರ್ಯಕರ್ತರ ಜೊತೆ ಸಭೆ ನಡೆಸಿದ್ದಾರೆ.
ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಸಿ.ಪಿ.ಯೋಗೇಶ್ವರ್ ಅವರು, ಚನ್ನಪಟ್ಟಣಕ್ಕೆ ನಾನೇ NDA ಅಭ್ಯರ್ಥಿ. NDA ಟಿಕೆಟ್ ಪಡೆದೇ ಚನ್ನಪಟ್ಟಣಕ್ಕೆ ಬರ್ತೇನೆ. ಪಕ್ಷ ಕೈಬಿಟ್ಟರೂ ಕ್ಷೇತ್ರದ ಜನ ಕೈಬಿಡಲ್ಲ ಎಂದಿದ್ದಾರೆ.
ಇನ್ನು ನೂರಕ್ಕೆ ನೂರು ನಾನೇ ಚನ್ನಪಟ್ಟಣ ಅಭ್ಯರ್ಥಿ. ಪಕ್ಷದ ನಾಯಕರೂ ನನಗೆ ಭರವಸೆ ನೀಡಿದ್ದಾರೆ. 15 ವರ್ಷ ಬಿಜೆಪಿಗೆ ನಾನು ದುಡಿದಿದ್ದೇನೆ. NDA ಮೈತ್ರಿಗೆ ನನ್ನದೂ ಕೊಡುಗೆ ಇದೆ. ಡಿ.ಕೆ.ಸುರೇಶ್ ಚನ್ನಪಟ್ಟಣಕ್ಕೆ ಬರುವಷ್ಟು ದಡ್ಡರಲ್ಲ. ಚನ್ನಪಟ್ಟಣವನ್ನು ಡಿಕೆಶಿ ಸೀರಿಯಸ್ಸಾಗಿ ತಗೆದುಕೊಂಡಿಲ್ಲ ಎಂದಿದ್ದಾರೆ.
ಇದನ್ನೂ ಓದಿ : ಜನ ಮೆಚ್ಚಿದ ಮಾರ್ಟಿನ್.. ದೇಶಾದ್ಯಂತ ಯಶಸ್ವಿ ಪ್ರದರ್ಶನ – ಸಕ್ಸಸ್ ಮೀಟ್‌ನಲ್ಲಿ ಜನತೆಗೆ ಧನ್ಯವಾದ ಸಲ್ಲಿಸಿದ ಧ್ರುವ ಸರ್ಜಾ..!