ಬೆಂಗಳೂರು : ರಾಜ್ಯದ ಮೂರು ಕ್ಷೇತ್ರಗಳ ಉಪಕದನ ಗೆಲ್ಲುತ್ತಿದ್ದಂತೆ ಸರ್ಕಾರದಲ್ಲಿ ಸಂಪುಟ ಪುನಾರಚನೆ, ಬದಲಾವಣೆಯ ಚರ್ಚೆ ಜೋರಾಗಿತ್ತು. ಕೆಲ ನಾಯಕರು ಈ ಬಾರಿ ನಮಗೆ ಸಚಿವ ಸ್ಥಾನ ಬೇಕೇ ಬೇಕೆಂದು ಟೆವೆಲ್ ಹಾಕಿ ಕಾಯ್ತಿದ್ದರು. ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ ಎಂದು ಆಸೆ ವ್ಯಕ್ತಪಡಿಸಿದ್ರು.
ಇದ್ರ ಮಧ್ಯೆ ಸಿಎಂ, ಡಿಸಿಎಂ ದೆಹಲಿಗೆ ತೆರಳಿದ್ದು, ಕುತೂಹಲಕ್ಕೆ ಕಾರಣವಾಗಿತ್ತು. ಹೈಕಮಾಂಡ್ ಭೇಟಿಯಾದ ಸಿಎಂ ಸಿದ್ದು, ಡಿಸಿಎಂ ಡಿಕೆಶಿ ಅವರು, ರಾಜ್ಯದಲ್ಲಿ ನಡೆಯಲಿದೆ ಸಂಪುಟ ಸರ್ಜರಿ ಎಂಬ ಚರ್ಚೆಗೆ ಬ್ರೇಕ್ ಹಾಕಿದ್ದಾರೆ. ಸದ್ಯಕ್ಕೆ ಸಂಪುಟ ಪುನಾರಚನೆ ಇಲ್ಲ. ಅಂತಹ ಯಾವುದೇ ಸಂದರ್ಭದ ಉದ್ಬವ ಆಗಿಲ್ಲ ಎಂದು ಸಿಎಂ, ಡಿಸಿಎಂ ಸ್ಪಷ್ಟನೆ ನೀಡಿದ್ದಾರೆ. ಸದ್ಯ ಸಿಎಂ ಮಾತು ಕೇಳಿ ಸಚಿವಾಕಾಂಕ್ಷಿಗಳಿಗೆ ನಿರಾಸೆಯಾಗಿದೆ.
ಸಿಎಂ ಸಿದ್ದು ಐದಾರು ಸಚಿವರ ಬದಲಾವಣೆಗೆ ಮನಸ್ಸು ಮಾಡಿದ್ದರು. ಆದ್ರೆ ಸಂಪುಟ ಸರ್ಜರಿಗೆ ಮುಂದಾದ್ರೆ ಪಕ್ಷದಲ್ಲಿ ಗೊಂದಲ ಹೆಚ್ಚಾಗುತ್ತೆ. ಅಧಿವೇಶನದ ನಂತರ ಇದರ ಬಗ್ಗೆ ಚರ್ಚಿಸೋಣ ಎಂದು ಹೈಕಮಾಂಡ್ ಸೂಚಿಸಿದೆ. ಬಿ.ನಾಗೇಂದ್ರ ಸೇರ್ಪಡೆ ಬಗ್ಗೆಯೂ ಯಾವುದೇ ನಿರ್ಧಾರ ಆಗಿಲ್ಲ. KPCC ಅಧ್ಯಕ್ಷರ ಬದಲಾವಣೆ ಬಗ್ಗೆಯೂ ಅಂತಿಮ ನಿರ್ಧಾರ ಆಗಿಲ್ಲ. ಸದ್ಯಕ್ಕೆ ಯಾವುದೇ ಬದಲಾವಣೆ ಮಾಡದಿರಲು ಹೈಕಮಾಂಡ್ ನಿರ್ಧಾರ ಮಾಡಿದ್ದು, ಸರ್ಕಾರ ಎರಡೂವರೆ ವರ್ಷ ಪೂರೈಸಿದ ನಂತರ, ಅಂದರೆ 2025ಕ್ಕೆ ಸಿದ್ದು ಸಂಪುಟ ಸರ್ಜರಿ ನಡೆಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ : ಬಿಜೆಪಿಯಲ್ಲಿ ಬಣ ಬಡಿದಾಟ ಹೆಚ್ಚಾಗ್ತಿದ್ದಂತೆ ದೆಹಲಿಗೆ ವಿಜಯೇಂದ್ರ – ಇಂದು ಹೈಕಮಾಂಡ್ ಜೊತೆ ಮಹತ್ವದ ಚರ್ಚೆ..!