ಬೆಂಗಳೂರು : ಸಿಎಂ ಸಿದ್ದರಾಮಯ್ಯಗೆ ಅಧಿಕಾರದ ಪಿತ್ತ ನೆತ್ತಿಗೇರಿದೆ, ಅಧಿಕಾರ ಶಾಶ್ವತ ಎನ್ನುವ ಭ್ರಮೆಯಲ್ಲಿ ಸರ್ಕಾರ ಇದೆ. ರಾಜಕೀಯ ಪ್ರೇರಿತವಾದ ತನಿಖೆಗಳಿಗೆ ಹೆದರಲ್ಲ ಎಂದು ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಕಿಡಿ ಕಾರಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ವಿಜಯೇಂದ್ರ ಮಾತನಾಡಿ, ಆನೆ ನಡೆದಿದ್ದೇ ದಾರಿ ಎನ್ನುವಂತೆ ಮಾಡುತ್ತಿದ್ದಾರೆ. ಇಂಥಾ ದರ್ಪದ ತೀರ್ಮಾನಗಳನ್ನು ಸಹಿಸಲ್ಲ, ತನಿಖೆಗೆ ನಾವು ಹೆದರಿ ಓಡಿಹೋಗಲ್ಲ.
ಏನೇ ಬಂದರೂ ಧೈರ್ಯವಾಗಿ ಎದುರಿಸುತ್ತೇವೆ ಎಂದಿದ್ದಾರೆ.
ಮುಖ್ಯಮಂತ್ರಿಗಳು ಮುಡಾ ತನಿಖೆಯಿಂದ ವಿಚಲಿತರಾಗಿದ್ದಾರೆ, ಹೀಗಾಗಿ ಸರ್ಕಾರದ ವೈಫಲ್ಯಗಳ ಬಗ್ಗೆ ಚರ್ಚೆಗೆ ತಯಾರಿಲ್ಲ. ಮುನಿರತ್ನ ಪ್ರಕರಣ, ಕೊವಿಡ್ ಖರೀದಿ ಪ್ರಕರಣ, ಬಿಎಸ್ವೈ ಪ್ರಕರಣಗಳನ್ನು ಚರ್ಚೆ ಮಾಡೋ ಕೆಲಸ ಮಾಡ್ತಿದೆ. ನ್ಯಾ.ಡಿ.ಕುನ್ಹಾ ಸಮಿತಿ ಮಧ್ಯಂತರ ವರದಿ ಮೇಲೆ FIR ಹಾಕಿದ್ದಾರೆ. ಎರಡು ವರ್ಷದಿಂದ ಈ ಸರ್ಕಾರ ಏನ್ ಮಾಡ್ತಾ ಇತ್ತು, ಸದನದಲ್ಲಿ ರೈತರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ಬಿಡ್ತಿಲ್ಲ ಎಂದು ಸರ್ಕಾರದ ವಿರುದ್ಧ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ : ಗ್ರಂಥಾಧಾರಿತ “ನೀಲವಂತಿ” ಚಿತ್ರದ ಟೈಟಲ್ ರಿಲೀಸ್ ಮಾಡಿದ ಡಾರ್ಲಿಂಗ್ ಕೃಷ್ಣ..!