ರಾಜ್ಯದಲ್ಲಿನ ಮೂರು ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದೆ. ಶಿಗ್ಗಾಂವಿ, ಚನ್ನಪಟ್ಟಣ, ಸಂಡೂರು ವಿಧಾನಸಭೆ ಕ್ಷೇತ್ರಗಳಿಗೆ ನ.13ರಂದು ಉಪಸಮರ ಮುಹೂರ್ತ ಫಿಕ್ಸ್ ಆಗಿದೆ. ಮೂರು ಕ್ಷೇತ್ರಗಳಲ್ಲಿ ಎನ್ಡಿಎ ಮೈತ್ರಿ ಹಾಗೂ ಕಾಂಗ್ರೆಸ್ ಪಕ್ಷಗಳ ಮಧ್ಯೆ ಪೈಪೋಟಿ ಏರ್ಪಟ್ಟಿದೆ. ಇತ್ತ ಆಕಾಂಕ್ಷಿಗಳು ಟಿಕೆಟ್ ಗಿಟ್ಟಿಸಿಕೊಳ್ಳಲು ಕಸರತ್ತು ನಡೆಸುತ್ತಿದ್ದಾರೆ.
ಈಗಾಗಲೇ ಅಭ್ಯರ್ಥಿ ನಾನೇ ಅಂತಾ ಹೇಳಿಕೊಂಡಿರುವ ಡಿಕೆಶಿ, ಜಿದ್ದಾಜಿದ್ದಿನ ಯುದ್ಧಕ್ಕೆ ಸಹೋದರನ ಸಜ್ಜು ಮಾಡುತ್ತಿದ್ದರೇ, ಬಿಜೆಪಿ ಸೈನಿಕ ಸಿ.ಪಿ.ಯೋಗೇಶ್ವರ್ ಮೈತ್ರಿ ಪಕ್ಷದ ಟಿಕೆಟ್ ನನಗೆ ಸಿಗುತ್ತದೆಂದು ಹೇಳುತ್ತಾ ಸಭೆ ಸಮಾರಂಭಗಳನ್ನು ನಡೆಸುತ್ತಿದ್ದರೆ, ಇತ್ತ ಎಚ್.ಡಿ.ಕುಮಾರಸ್ವಾಮಿ ತಮ್ಮ ಮಗ ನಿಖಿಲ್ ಜೊತೆ ಕ್ಷೇತ್ರ ಸುತ್ತಿ ಮತದಾರರ ನಾಡಿಮಿಡಿತ ಅರಿತು ಮಗನನ್ನೇ ಕಣಕ್ಕೆ ಇಳಿಸುವ ಇರಾದೆ ವ್ಯಕ್ತ ಪಡಿಸುತ್ತಿರುವ ಕಾರಣ ಉಪ ಚುನಾವಣೆಯಲ್ಲಿ ಅಭ್ಯರ್ಥಿ ಯಾರೆಂಬುದು ಮತದಾರರನ್ನು ಗೊಂದಲಕ್ಕೆ ಸಿಲುಕಿಸಿದೆ.
ಇನ್ನು ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಅಭ್ಯರ್ಥಿಗಳು ಯಾರಾಗುತ್ತರೆಂಬುದು ಇನ್ನೂ ಅಂತಿಮವಾಗಿಲ್ಲದಿದ್ದರೂ ಕಾಂಗ್ರೆಸ್‌ನಿಂದ ಡಿ.ಕೆ.ಸುರೇಶ್, ಜೆಡಿಎಸ್‌ನಿಂದ ನಿಖಿಲ್ ಕುಮಾರಸ್ವಾಮಿ, ಬಿಜೆಪಿಯಿಂದ ಸಿ.ಪಿ.ಯೋಗೇಶ್ವರ್ ಹೆಸರುಗಳು ಕೇಳಿ ಬರುತ್ತಿದೆ. ಬೆಂಗಳೂರು ಗ್ರಾಮಾಂತರ ಸೋಲಿನ ಸೇಡು ತೀರಿಸಿಕೊಳ್ಳಲು ಗೊಂಬೆ ನಾಡಿಗೆ ಶಿಫ್ಟ್ ಆಗಿರುವ ಡಿಕೆ ಬ್ರದರ್ಸ್ ಗೌಡರ ಫ್ಯಾಮಿಲಿಗೆ ತಿರುಗೇಟು ಭರ್ಜರಿ ಪ್ಲಾನ್ ಮಾಡಿಕೊಂಡಿದ್ದಾರೆ.
ಇತ್ತ ಅಭ್ಯರ್ಥಿಗಳ ಆಯ್ಕೆಯಲ್ಲಿ ಎರಡೂ ಪಕ್ಷಗಳು ಸೋಲು-ಗೆಲುವಿನ ಲೆಕ್ಕಾಚಾರ ಮಾಡುತ್ತಿದೆ. ಈ ಉಪಸಮರ ಕಾಂಗ್ರೆಸ್ಗೆ ಲೋಕಸಭೆ ಚುನಾವಣೆ ಹಿನ್ನಡೆ ಮರೆಸಿ, ಹೊಸ ಹುರುಪು, ಜನ ಬೆಂಬಲ ಗಟ್ಟಿಗೊಳಿಸಲು ಇರುವ ವೇದಿಕೆಯಾಗಿದ್ದರೆ, ಎನ್ಡಿಎ ಮೈತ್ರಿಗಳಾದ ಬಿಜೆಪಿ-ಜೆಡಿಎಸ್ಗೆ ಲೋಕಸಭೆ ಉಪಸಮರದ ಫಲಿತಾಂಶ ಮರುಕಳಿಸಲು, ಆಡಳಿತಾರೂಢ ಪಕ್ಷಕ್ಕೆ ಸೋಲಿನ ರುಚಿ ತೋರಿಸುವುದರೊಂದಿಗೆ ಮೈತ್ರಿ ಬಲ ಪ್ರದರ್ಶಿಸಲು ಇರುವ ರಣಕಣವಾಗಿದೆ ಎಂದೇ ಹೇಳಬಹುದು.
ಇದನ್ನೂ ಓದಿ : ಗಂಡು ಮಗುವಿಗೆ ಜನ್ಮ ನೀಡಿದ ರೇಣುಕಾಸ್ವಾಮಿ ಪತ್ನಿ..!