ಬೆಂಗಳೂರು : ಹೋಟೆಲ್ ಉದ್ಯಮಿ ಪ್ರದೀಪ್ ಕಾರಿನಲ್ಲೇ ಕುಳಿತು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಫುಡ್ ವಯರ್ ಇಂಡಿಯಾ ಕಂಪನಿ ಮಾಲಿಕ ಪ್ರದೀಪ್ ನಿನ್ನೆ ಬೆಂಗಳೂರಿನ ಬ್ಯಾಡರಹಳ್ಳಿ ಬಳಿ ಪೆಟ್ರೋಲ್ ಸುರ್ಕೊಂಡು ಸೂಸೈಡ್ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಫುಡ್ ವಯರ್ ಇಂಡಿಯಾ ಕಂಪನಿ ಹೊಟೇಲ್, ರೆಸಾರ್ಟ್ ಉದ್ಯಮಕ್ಕೆ ಮಾರ್ಗದರ್ಶನ ನೀಡುವ ಕಂಪನಿಯಾಗಿದೆ. ಪ್ರದೀಪ್ ಅವರು ಉದ್ಯಮ ಆರಂಭಿಸಲು ಲೈಸೆನ್ಸ್, ಮಾರ್ಕೆಂಟಿಗ್ ಸಹಾಯ ಮಾಡ್ತಿದ್ದರು. ಕೋಟಿಗಟ್ಟಲೆ ಹಣ ಹೂಡಿಕೆ ಮಾಡಿ ಕಂಪನಿ ಆರಂಭಿಸಿದ್ದ ಪ್ರದೀಪ್ ಆಹಾರ ಉದ್ಯಮದಲ್ಲಿ ಸಾಕಷ್ಟು ಅನುಭವ ಹೊಂದಿದ್ದರು. ಪ್ರದೀಪ್ ಮಾರ್ಗದರ್ಶನದಿಂದ ಹಲವು ಹೋಟೆಲ್ ಯಶಸ್ವಿಯಾಗಿದ್ದವು.
ಪ್ರದೀಪ್ ಕಂಪನಿಗೆ ಸಾಕಷ್ಟು ಅವಾರ್ಡ್ ಕೂಡ ಸಿಕ್ಕಿದ್ದವು, ಹಲವು ಗಣ್ಯರ ಜೊತೆಗೆ ಒಡನಾಟ ಹೊಂದಿದ್ದ ಪ್ರದೀಪ್ ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಬೆಂಗಳೂರಿನ ನಾಗರಭಾವಿ ನಿವಾಸಿಯಾಗಿರುವ ಪ್ರದೀಪ್ ಮುದ್ದಿನಪಾಳ್ಯ ಬಳಿ ನಿನ್ನೆ ಕಾರ್ ಸಮೇತ ಬೆಂದುಹೋಗಿದ್ದರು. ಪೊಲೀಸರು ಪ್ರದೀಪ್ CDR ತೆಗೆದು ತನಿಖೆ ನಡೆಸುತ್ತಿದ್ದು, ಅವರ ಚಲನವಲನದ ಸಿಸಿಟಿವಿ ದೃಶ್ಯದಲ್ಲಿ ಪತ್ತೆಯಾಗಿದೆ. ಅನ್ನಪೂರ್ಣೇಶ್ವರಿ ನಗರ ಬಂಕ್ನಿಂದ ಪ್ರದೀಪ್ ಪೆಟ್ರೋಲ್ ತಂದಿದ್ದರು. ಬಿಎನ್ಎಸ್ 194 ಅಡಿಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಮುಡಾ ಹಗರಣ : ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡರ ಅಳಿಯನಿಗೂ ಅಕ್ರಮ ಸೈಟ್..!