ರಾಜ್ಯದಲ್ಲಿ ಸರ್ಕಾರಿ ಬಸ್ ಪ್ರಯಾಣ ದರ ಹೆಚ್ಚಳ ಮಾಡಲು ಕರ್ನಾಟಕ ಸರ್ಕಾರ ಅಧಿಕೃತ ಆದೇಶವನ್ನು ಹೊರಡಿಸಿದೆ. ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರಗಳು ಜಾರಿಗೆ ಬಂದಿದ್ದು, ಇಂದಿನಿಂದ ಎಲ್ಲಿಂದ, ಎಲ್ಲಿಗೆ? ಎಷ್ಟು ದರ? ಎಂಬ ಚರ್ಚೆಗಳು ಜೋರಾಗಿವೆ.
ಶನಿವಾರ ಕರ್ನಾಟಕ ಸರ್ಕಾರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ), ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳಲ್ಲಿ ಪ್ರಯಾಣ ದರ ಪರಿಷ್ಕರಿಸಲು ಅಂತಿಮ ಆದೇಶವನ್ನು ಹೊರಡಿಸಿದೆ.
2020ರಿಂದಲೂ ರಾಜ್ಯದಲ್ಲಿ ಬಸ್ ಪ್ರಯಾಣ ದರ ಏರಿಕೆ ಆಗಿರಲಿಲ್ಲ. ಹೀಗಾಗಿ ಈ ಬಾರಿ ಬಸ್ ಪ್ರಯಾಣ ದರ ಪರಿಷ್ಕರಣೆಗೆ ಸಂಪುಟ ಸಭೆ ಒಪ್ಪಿಗೆ ನೀಡಿದ ಬೆನ್ನಲ್ಲೇ ಮಧ್ಯರಾತ್ರಿಯಿಂದ 15ರಷ್ಟು ಟಿಕೆಟ್ ದರ ಏರಿಕೆಯಾಗಿದೆ. ಕೆಎಸ್ಆರ್‌ಟಿಸಿ ವೇಗದೂತ ಸಾರಿಗೆಯ ಪರಿಷ್ಕೃತ ದರದ ಬಗ್ಗೆ ಮಾಹಿತಿ ನೀಡಿದ್ದು 10 ರಿಂದ 100 ರೂಪಾಯಿವರೆಗೆ ಬಸ್ ಟಿಕೆಟ್ ದರ ಏರಿಕೆಯಾಗಿದೆ.
ಬೆಂಗಳೂರಿನಿಂದ ಮಂಗಳೂರಿಗೆ ದರ ಏರಿಕೆ ಎಷ್ಟು ಆಗಿದೆ?
- ಬೆಂಗಳೂರು ಟು ಮಂಗಳೂರಿಗೆ ಹಿಂದಿನ ದರ 398 ರೂಪಾಯಿ ಇದ್ದು ಹೊಸ ದರ 454 ರೂಪಾಯಿ ಆಗಿದೆ. ₹56 ಹೆಚ್ಚಳ.
- ಬೆಂಗಳೂರು ಟು ಮೈಸೂರಿಗೆ ಹಿಂದಿನ ದರ 141 ರೂಪಾಯಿ ಇದ್ದು, ಹೊಸ ದರ 162 ರೂಪಾಯಿ ಆಗಿದ್ದು ₹21 ಏರಿಸಿದ್ದಾರೆ.
- ಬೆಂಗಳೂರು ಟು ಶಿವಮೊಗ್ಗಕ್ಕೆ ಹಿಂದಿನ ದರ 312 ರೂಪಾಯಿ ಆಗಿದ್ದು ಹೊಸ ದರ 356 ರೂಪಾಯಿ ₹44 ಏರಿಕೆ ಆಗಿದೆ.
- ಬೆಂಗಳೂರು ಟು ಕಲಬುರಗಿಗೆ ಹಿಂದಿನ ದರ 706 ರೂಪಾಯಿ ಆಗಿದ್ದು ಹೊಸ ದರ 805 ಆಗಿದ್ದು ₹99 ಏರಿಕೆ ಆಗಿದೆ
- ಬೆಂಗಳೂರು ಟು ಕೊಪ್ಪಳಕ್ಕೆ ಹಿಂದಿನ ದರ 447 ರೂಪಾಯಿ ಆಗಿದ್ದು ಹೊಸ ದರ 506 ರೂಪಾಯಿ, ₹59 ಹೆಚ್ಚಳ
- ಬೆಂಗಳೂರು ಟು ಬಾಗಲಕೋಟೆಗೆ ಹಿಂದಿನ ದರ 605 ರೂಪಾಯಿ ಆಗಿದ್ದು ಹೊಸ ದರ 685 ರೂಪಾಯಿ ಆಗಿದೆ. ₹80 ಏರಿಕೆ
BMTC ಕೂಡ ಏರಿಕೆಯಾಗಿರೋ ಪರಿಷ್ಕೃತ ದರ
- ಮೆಜೆಸ್ಟಿಕ್ ಟು ಜೆ.ಪಿ ನಗರ ಹಿಂದಿನ ದರ 20 ರೂಪಾಯಿ ಇದ್ದು ಪರಿಷ್ಕೃತ ದರ 24 ರೂಪಾಯಿ ಆಗಿದೆ.
- ಮೆಜೆಸ್ಟಿಕ್ ಟು ನಂದಿನಿ ಲೇಔಟ್ ಹಿಂದಿನ ದರ 25 ರೂಪಾಯಿ ಇದ್ದು ಪರಿಷ್ಕೃತ ದರ 28 ರೂಪಾಯಿ
- ಮೆಜೆಸ್ಟಿಕ್ ಟು ಯಶವಂತಪುರ ರೈಲ್ವೆ ಸ್ಟೇಷನ್ ಹಿಂದಿನ ದರ 20 ಇದ್ದು 23 ರೂಪಾಯಿ ಆಗಿದೆ.
- ಮೆಜೆಸ್ಟಿಕ್ ಟು ಅತ್ತಿಬೆಲೆ 25 ರೂಪಾಯಿ ಇದ್ದ ದರ 30 ರೂಪಾಯಿ ಆಗಿದೆ.
- ಮೆಜೆಸ್ಟಿಕ್ ಟು ದೊಡ್ಡಬಳ್ಳಾಪುರ ಹಿಂದಿನ ದರ 25 ರೂಪಾರಿ ಇದ್ದು ಹೊಸ 30 ರೂಪಾಯಿ ಆಗಿದೆ.
- ಮೆಜೆಸ್ಟಿಕ್ ಟು ಕುಮಾರಸ್ವಾಮಿ ಲೇಔಟ್ ಹಿಂದಿನ ದರ 25 ರೂಪಾಯಿ ಇದ್ದು ಹೊಸ ದರ 28 ರೂಪಾಯಿ
- ಮೆಜೆಸ್ಟಿಕ್ ಟು ಬಿಟಿಎಂ ಲೇಔಟ್ ಹಿಂದಿನ ದರ 25 ರೂಪಾಯಿ ಇದ್ದು ಹೊಸ ದರ 28 ರೂಪಾಯಿ ಆಗಿದೆ.
ಇದನ್ನೂ ಓದಿ : ಚಿಕ್ಕಮಗಳೂರು : ತಾಯಿಯನ್ನ ಮನೆಗೆ ಕಳಿಸದ ಮಾವನ ಮೇಲೆ ನಡುರಸ್ತೆಯಲ್ಲೇ ಮಚ್ಚು ಬೀಸಿದ ಅಳಿಯ..!