ಕೊಡಗು : ಸರ್ಕಾರಿ ಬಸ್ ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿದ ಘಟನೆ ಗೋಣಿಕೊಪ್ಪ ಸಮೀಪದ ಸೀಗೆತೋಡು ಎಂಬಲ್ಲಿ ನಡೆದಿದೆ. ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಐವರು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಗಾಯಳುಗಳನ್ನು ಗೋಣಿಕೊಪ್ಪ ಆಸ್ಪತ್ರೆಗೆ ದಾಖಲಿಸಿ ಚಿಕ್ಸಿತೆ ನೀಡಲಾಗುತ್ತಿದೆ.
ಬಸ್ ಚಾಲಕ ಸಂತೋಷ್ ಅವರ ಕಾಲಿಗೆ ಗಂಭೀರ ಗಾಯವಾಗಿದ್ದು, ಸುಮಾರು 40ಕ್ಕೂ ಹೆಚ್ಚು ಪ್ರಯಾಣಿಕರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೆಎಸ್‌ಆರ್‌ಟಿಸಿ ಬಸ್ ಮೈಸೂರು ಮಾರ್ಗದಿಂದ ಗೋಣಿಕೊಪ್ಪಕ್ಕೆ ಬರುತ್ತಿತ್ತು. ಲಾರಿ ಗೋಣಿಕೊಪ್ಪ ಕಡೆಯಿಂದ ಮೈಸೂರು ಕಡೆಗೆ ತೆರಳುತ್ತಿತ್ತು. ಈ ವೇಳೆ ಅಪಘಾತ ಸಂಭವಿಸಿದೆ.
ಇದನ್ನೂ ಓದಿ : ಶಾಸಕ ಸ್ಥಾನದಿಂದ ಮುನಿರತ್ನರನ್ನು ಸಸ್ಪೆಂಡ್ ಮಾಡುವಂತೆ ಸ್ಪೀಕರ್‌ಗೆ ಸಚಿವ ಎಚ್.ಕೆ ಪಾಟೀಲ್ ಪತ್ರ..!
Post Views: 122