ಲಕ್ನೋದ ವಧುವೊಬ್ಬಳು ಬನಾರಸಿ ಬಿಕಿನಿ ತೊಟ್ಟು ವರನ ಕೊರಳಿಗೆ ಹಾರ ಹಾಕಿದ ಫೋಟೋಗಳು ಇತ್ತೀಚಿಗಷ್ಟೇ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಮದುವೆಯ ಸಾಂಪ್ರದಾಯಿಕ ಪದ್ಧತಿಗಳನ್ನು ಧ್ವಂಸಗೊಳಿಸುವುದು ಎಂಬ ಶೀರ್ಷಿಕೆಯೊಂದಿಗೆ ಪೋಟೋಗಳು ಜಾಲತಾಣದಲ್ಲಿ ಹರಿದಾಡಿತ್ತು, ಇದು ಭಾರೀ ಚರ್ಚೆಗೆ ಕೂಡ ಗ್ರಾಸವಾಗಿತ್ತು.
ಭಾರೀ ವಿವಾದವನ್ನೇ ಹುಟ್ಟುಹಾಕಿದ ಈ ಫೋಟೋ ಅಸಲಿಯೋ ಅಥವಾ ನಕಲಿಯೋ ಎಂದು ಹಲವರು ಅನುಮಾನ ವ್ಯಕ್ತಪಡಿಸಿದ್ದರು. ಇತ್ತೀಚಿಗಂತೂ ಎಐ ತಂತ್ರಜ್ಞಾನದಿಂದ ರಚಿತವಾದ ಡೀಪ್ ಫೇಕ್ ವಿಡಿಯೋಗಳು, ಫೋಟೋಗಳೇ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಅದರಲ್ಲೂ ಸೆಲೆಬ್ರಿಟಿಗಳಿಗ ಡೀಪ್‌ಫೇಕ್ ವಿಡಿಯೋಗಳು ಆಗಾಗ ವೈರಲ್ ಆಗುತ್ತಿರುತ್ತವೆ. ಇದೀಗ ವಧು ಬಿಕಿನಿ ತೊಟ್ಟು ಹಸೆಮಣೆ ಏರಿದಂತಹ ಫೋಟೋ ಕೂಡಾ ಎಐ ರಚಿತ ಫೋಟೋವಾಗಿದ್ದು, ಇದು ನೈಜ ಘಟನೆಯಲ್ಲ ಎಂಬುದು ತಿಳಿದು ಬಂದಿದೆ.
ವೈರಲ್ ಆಗಿರುವ ಫೋಟೋದಲ್ಲಿ ಯುವತಿಯೊಬ್ಬಳು ಹಳದಿ ಬಣ್ಣದ ಬನಾರಸಿ ಬಿಕಿನಿಯಲ್ಲಿ ವರನಿಗೆ ಹಾರ ಹಾಕಲು ನಿಂತಿದ್ದಾಳೆ. ವರನು ಕೂಡ ಶೇರ್ವಾನಿ ಧರಿಸಿ ಪಕ್ಕದಲ್ಲಿ ನಿಂತಿರುವುದನ್ನು ಕಾಣಬಹುದು. ವಧುವಿನಂತೆಯೇ ಯುವತಿ ಆಭರಣ ಧರಿಸಿ, ಮೇಕಪ್ ಮಾಡಿಕೊಂಡಿದ್ದಾಳೆ. ಇದು ಲಕ್ನೋದ ವಧು ಎಂದು ಸುಳ್ಳು ಸುದ್ದಿಯನ್ನು ಕೂಡಾ ಹಬ್ಬಿಸಲಾಗಿತ್ತು. ವಾಸ್ತವದಲ್ಲಿ ಇದು ನೈಜ ಘಟನೆಯಲ್ಲ ಬದಲಿಗೆ ಇದೊಂದು ಎಐ ರಚಿತ ಫೋಟೋವಾಗಿದೆ.
ಮೂಲ ಚಿತ್ರವನ್ನು ರೆಡ್ಡಿಟ್ ಪೇಜ್ ‘ದೇಸಿ ಅಡಲ್ಟ್ ಪ್ಯೂಷನ್’ ನಲ್ಲಿ ಪೋಸ್ಟ್ ಮಾಡಲಾಗಿದೆ. ಈ ಫೋಟೋಗೆ ‘ಮದುವೆ ಸೀಸನ್’ ಎಂಬ ಶೀರ್ಷಿಕೆ ಇದೆ. ಫೋಟೋ ಬಗ್ಗೆ ಹೆಚ್ಚಿನ ತನಿಖೆ ನಡೆಸಿದಾಗ ಅದನ್ನು ಎಐ ಸಹಾಯದಿಂದ ಸೃಷ್ಟಿಸಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ : ನೋಟಿಸ್ ಕೊಟ್ಟಿದ್ದಕ್ಕೆ ನಾನು ಹೆದರಲ್ಲ, ಕೇಂದ್ರ ಶಿಸ್ತು ಸಮಿತಿಗೆ ಏನ್ ಹೇಳ್ಬೇಕೋ ಹೇಳ್ತೀನಿ – ಯತ್ನಾಳ್..!