ಮಂಡ್ಯ : ಮಂಡ್ಯ ಅಬಕಾರಿ ಡಿಸಿ ಮತ್ತು ಇನ್ಸ್ಪೆಕ್ಟರ್ ಲಂಚಕ್ಕೆ ಬೇಡಿಕೆಯಿಟ್ಟ ಪ್ರಕರಣ ಸಂಬಂಧ ಸಚಿವ ಚಲುವರಾಯಸ್ವಾಮಿಗೆ ಸಂಕಷ್ಟ ಎದುರಾಗಿದೆ. ಮಂಡ್ಯದ ಚಂದೂಪುರದಲ್ಲಿ ಬಾರ್ & ರೆಸ್ಟೋರೆಂಟ್ಗೆ ಲೈಸೆನ್ಸ್ ನೀಡಲು ಅಬಕಾರಿ ಇಲಾಖೆ ಅಧಿಕಾರಿಗಳು, ಇನ್ಸ್ಪೆಕ್ಟರ್ ಲಕ್ಷ ಲಕ್ಷ ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ. ಈ ವೇಳೆ ಉಸ್ತುವಾರಿಗೂ ಕೊಡಬೇಕೆಂದು ಡಿಸಿ ಡಿಮ್ಯಾಂಡ್ ಮಾಡಿದ್ದರು.
ಉಸ್ತುವಾರಿಗಳ ಬಳಿ ಹೇಳಿಸಿದ್ರೆ ಸಾಕು, ಅವ್ರನ್ನ ನೀವೆ ನೋಡ್ಕೊಬೇಕು ಎಂದು ಡಿಸಿ ರವಿಶಂಕರ್ ಹೇಳಿದ್ದರು. ಲಂಚ ಕೇಳಿರುವ ಆರೋಪದ ಮೇರೆಗೆ ಅಬಕಾರಿ ಇಲಾಖೆಯ ರವಿಶಂಕರ್ ಹಾಗೂ ಇನ್ಸ್ಪೆಕ್ಟರ್ ಶಿವಶಂಕರ್ ವಿರುದ್ಧ ಕ್ರಮ ಕೈಗೊಳ್ಳಲಿದ್ದಾರೆ. ಇಬ್ಬರನ್ನೂ ಸಸ್ಪೆಂಡ್ ಮಾಡಲು ಸಚಿವ ತಿಮ್ಮಾಪುರ ಸೂಚಿಸಿದ್ದಾರೆ.
ಲಂಚ ಬೇಡಿಕೆ ಸಂಬಂಧ ಲೋಕಾಯುಕ್ತಕ್ಕೆ ಪುನೀತ್ ಕುಮಾರ್ ದೂರು ನೀಡಿದ್ದು, ಲೋಕಾಯುಕ್ತ ತನಿಖೆ ಶುರುವಾದ್ರೆ ಚಲುವರಾಯಸ್ವಾಮಿಗೂ ಸಂಕಷ್ಟ ಎದುರಾಗಲಿದೆ. ಇನ್ನು ಇನ್ಸ್ಪೆಕ್ಟರ್, ಡಿಸಿ ಜೊತೆ ಸಚಿವರನ್ನು ವಿಚಾರಣೆಗೆ ಕರೆಸೋ ಸಾಧ್ಯತೆಯಿದೆ.
ಏನಿದು ಅಬಕಾರಿ ಲಂಚ ಪ್ರಕರಣ?
ಚಂದೂಪುರದಲ್ಲಿ ಬಾರ್ ಆ್ಯಂಡ್ ರೆಸ್ಟೋರೆಂಟ್ಗೆ ಅನುಮತಿ ಪಡೆಯಲು ಲಕ್ಷ್ಮಮ್ಮ ಎಂಬುವವರ ಹೆಸರಿನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿಯನ್ನು ಲಕ್ಷ್ಮಮ್ಮ ಪುತ್ರ ಪುನೀತ್ ಎಂಬವರು ಸಲ್ಲಿಸಿದ್ದರು. ಆರಂಭದಲ್ಲಿ ಆನ್‌ಲೈನ್ ಮೂಲಕ ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಲಾಗಿತ್ತು, ಮತ್ತು ನಂತರ ಅವರು ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿದ್ದರು. ಬಳಿಕ, ಅಬಕಾರಿ ಇಲಾಖೆ ಅಧಿಕಾರಿಗಳು ಲಂಚದ ಬೇಡಿಕೆ ಇಟ್ಟಿದ್ದರು. ನಂತರ ಈ ಮೊತ್ತವನ್ನು 20 ಲಕ್ಷ ರೂ.ಗೆ ಇಳಿಕೆ ಮಾಡಲಾಗಿತ್ತು ಎಂದು ಪುನೀತ್ ಆರೋಪಿಸಿದ್ದಾರೆ.
ಇದನ್ನೂ ಓದಿ : ವಕೀಲೆ ಜೀವ ಆತ್ಮಹತ್ಯೆ ಕೇಸ್ – ತನಿಖೆ ಚುರುಕುಗೊಳಿಸಿದ ಸಿಸಿಬಿ ಅಧಿಕಾರಿಗಳು..!