ಬೆಂಗಳೂರು : ಕರ್ನಾಟಕದಲ್ಲಿ ಅನರ್ಹ ರೇಷನ್ ಕಾರ್ಡ್‌ಗಳನ್ನು ರದ್ದು ಮಾಡಲು ರಾಜ್ಯ ಸರ್ಕಾರ ಕಠಿಣ ಕ್ರಮಕೈಗೊಂಡಿದೆ. ಸರ್ಕಾರ ಸದ್ದಿಲ್ಲದೆ ಬಿಪಿಎಲ್ ಕಾರ್ಡ್ ಆಪರೇಷನ್ಗೆ ಇಳಿದಿದೆ. ಈಗಾಗಲೇ ಹಲವು ಜಿಲ್ಲೆಗಳಲ್ಲಿ ಲಕ್ಷಾಂತರ ಬಿಪಿಎಲ್ ಕಾರ್ಡ್‌ಗಳನ್ನು ಪತ್ತೆ ಮಾಡಿ ರದ್ದು ಮಾಡಲಾಗುತ್ತಿದೆ. ಈ ಬೆನ್ನಲ್ಲೆ ನಮ್ಮ ಮನೆಗಳ ಬಿಪಿಎಲ್ ಕಾರ್ಡ್ ಅರ್ಹವೋ ಅಥವಾ ಅನರ್ಹವೋ ಎಂಬ ಚರ್ಚೆ ಜೋರಾಗಿದೆ. ಇದೀಗ ಈ ವಿಚಾರವಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು, BPL ಕಾರ್ಡ್ಗಳ ಬಗ್ಗೆ ಆತಂಕ ಅಗತ್ಯವಿಲ್ಲ. ಯಾರು ಸ್ಥಿತಿವಂತರೋ ಅವರ BPL ಕಾರ್ಡ್ ರದ್ದಾಗುತ್ತೆ. ಐಟಿ ರಿಟರ್ನ್ ಫೈಲ್ ಮಾಡೋರ ಕಾರ್ಡ್ ರದ್ದಾಗುತ್ತೆ. ಆದಾಯ ತೆರಿಗೆ ಕಟ್ಟೋರಿಗೆ BPL ಕಾರ್ಡ್ ಯಾಕೆ? ಅನರ್ಹರನ್ನು ತೆಗೆದು ಹಾಕಲು ಆಹಾರ ಇಲಾಖೆ ಮುಂದಾಗಿದೆ ಎಂದಿದ್ದಾರೆ.
ಇನ್ನು ಗ್ಯಾರಂಟಿಗಳಿಗೂ BPL ಕಾರ್ಡ್ ವಿಚಾರಕ್ಕೂ ಸಂಬಂಧ ಇಲ್ಲ. BPL ಕಾರ್ಡ್ನವರಿಗೆ ಮಾತ್ರ ಗ್ಯಾರಂಟಿ ಕೊಡ್ತಿಲ್ವಲ್ಲ. ಒಂದೆರಡು ಬಿಟ್ರೆ ಉಳಿದ ಗ್ಯಾರಂಟಿಗಳಿಗೆ BPL ಲಿಂಕ್ ಮಾಡಿಲ್ಲ. ಬಿಜೆಪಿ ಸುಳ್ಳು ಹಬ್ಬಿಸುವ ಕೆಲಸ ಮಾಡುತ್ತಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಗರಂ ಆಗಿದ್ದಾರೆ.
ಇದನ್ನೂ ಓದಿ : ನಿರ್ದೇಶಕ ಭರತ್ ಮೇಲೆ ಗುಂಡು ಹಾರಿಸಿದ್ದ ಆರೋಪ – ನಟ ತಾಂಡವ್ ರಾಮ್ ಬಂಧನ..!