ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪ್ರತಿಷ್ಠಿತ ‘ಬಾರ್ಡರ್ ಗವಾಸ್ಕರ್ ಟ್ರೋಫಿ’ ಟೆಸ್ಟ್ ಸರಣಿಯೂ ಇಂದಿನಿಂದ ಪ್ರಾರಂಭವಾಗಲಿದೆ. ಟೀಂ ಇಡಿಯಾ ನಾಯಕ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ, ಭಾರತ ತಂಡವನ್ನು ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಮುನ್ನಡೆಸಲಿದ್ದಾರೆ. ಜಸ್ಪ್ರೀತ್ ಬುಮ್ರಾ ನಾಯಕತ್ವದಲ್ಲಿ ಟೀಂ ಇಂಡಿಯಾ ಸರಣಿಯಲ್ಲಿ ಉತ್ತಮ ಆರಂಭ ಪಡೆಯುವ ನಿರೀಕ್ಷೆಯಲ್ಲಿದೆ. ಆದರೆ ಆಸ್ಟ್ರೇಲಿಯಾ ಸತತ ಎರಡು ಬಾರಿ ಸರಣಿ ಸೋಲಿಗೆ ಸೇಡು ತೀರಿಸಿಕೊಳ್ಳಲು ಸಜ್ಜಾಗಿದೆ.
ಇನ್ನು ಭಾರತಕ್ಕೆ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯು ಅತ್ಯಂತ ಮಹತ್ವದ್ದಾಗಿದೆ. ಏಕೆಂದರೆ ಜೂನ್‌ನಲ್ಲಿ ಇಂಗ್ಲೆಂಡ್‌ನ ಲಾರ್ಡ್ಸ್‌ನಲ್ಲಿ ನಡೆಯಲಿರುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯೂಟಿಸಿ) ಫೈನಲ್‌ನಲ್ಲಿ ಸ್ಥಾನ ಪಡೆಯಲು ಆಸ್ಟ್ರೇಲಿಯಾವನ್ನು 4-0 ಅಂತರದಿಂದ ಸೋಲಿಸಬೇಕಾಗಿದೆ. ಇಲ್ಲವಾದರೆ ಭಾರತಕ್ಕೆ ಡಬ್ಲ್ಯೂಟಿಸಿ ಫೈನಲ್ ತಲುಪುವ ಹಾದಿ ಕಠಿಣವಾಗಿರಲಿದೆ.
ಇಂದಿನ ಪಂದ್ಯಕ್ಕೆ ಪರ್ತ್ನ ಒಪ್ಟಸ್ ಸ್ಟೇಡಿಯಂ ಆತಿಥ್ಯ ವಹಿಸಲಿದೆ. ಇನ್ನು ಡಿಸೆಂಬರ್ 6 ರಿಂದ ಶುರುವಾಗಲಿರುವ 2ನೇ ಪಂದ್ಯ ಅಡಿಲೇಡ್ನಲ್ಲಿ ನಡೆಯಲಿದೆ. ಹಾಗೆಯೇ 3ನೇ ಪಂದ್ಯ ಡಿಸೆಂಬರ್ 14 ರಿಂದ ಬ್ರಿಸ್ಬೇನ್ನಲ್ಲಿ ಜರುಗಲಿದೆ. ಡಿಸೆಂಬರ್ 26 ರಿಂದ ಮೆಲ್ಬೋರ್ನ್ನಲ್ಲಿ ಬಾಕ್ಸಿಂಗ್ ಡೇ ಟೆಸ್ಟ್ ನಡೆಯಲಿದ್ದು, ಸಿಡ್ನಿಯಲ್ಲಿ ಜರುಗಲಿರುವ ಕೊನೆಯ ಟೆಸ್ಟ್ ಪಂದ್ಯ ಜನವರಿ 3 ರಿಂದ ಆರಂಭವಾಗಲಿದೆ.
ಯಾವ ಚಾನೆಲ್, ಆ್ಯಪ್ನಲ್ಲಿ ನೇರ ಪ್ರಸಾರ? ಈ ಸರಣಿಯ ಎಲ್ಲಾ ಪಂದ್ಯಗಳನ್ನು ಸ್ಟಾರ್ ಸ್ಪೋರ್ಟ್ಸ್ ಚಾನೆಲ್ಗಳಲ್ಲಿ ವೀಕ್ಷಿಸಬಹುದು. ಹಾಗೆಯೇ ಡಿಡಿ ಸ್ಪೋರ್ಟ್ ಚಾನೆಲ್ನಲ್ಲೂ ಲೈವ್ ಇರಲಿದೆ. ಈ ಸರಣಿಯ ಪಂದ್ಯಗಳನ್ನು ಡಿಸ್ನಿ ಹಾಟ್ಸ್ಟಾರ್ ಆ್ಯಪ್ ಹಾಗೂ ವೆಬ್ಸೈಟ್ನಲ್ಲೂ ವೀಕ್ಷಿಸಬಹುದು.
ಎಷ್ಟು ಗಂಟೆಗೆ ಪಂದ್ಯ ಶುರು? ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಮೊದಲ ಟೆಸ್ಟ್ ಪಂದ್ಯವು ಭಾರತೀಯ ಕಾಲಮಾನ ಬೆಳಿಗ್ಗೆ 7.50 ರಿಂದ ಶುರುವಾಗಲಿದೆ. ಈ ಪಂದ್ಯದ ಸೆಷನ್ ಟೈಮಿಂಗ್ಸ್ ಈ ಕೆಳಗಿನಂತಿದೆ.
- 7.50 AM ರಿಂದ 9.50 AM ರವರೆಗೆ ಮೊದಲ ಸೆಷನ್
- 10.30 AM ರಿಂದ 12.30 PM ರವರೆಗೆ ದ್ವಿತೀಯ ಸೆಷನ್
- 12.50 PM ರಿಂದ 2.50 PM ರವರೆಗೆ ತೃತೀಯ ಸೆಷನ್
ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ವೇಳಾಪಟ್ಟಿ :
- ಭಾರತ vs ಆಸ್ಟ್ರೇಲಿಯಾ, 1ನೇ ಟೆಸ್ಟ್: ನವೆಂಬರ್ 22-26, ಪರ್ತ್ (7:50 AM IST)
- ಭಾರತ vs ಆಸ್ಟ್ರೇಲಿಯಾ, 2ನೇ ಟೆಸ್ಟ್: ಡಿಸೆಂಬರ್ 6-10, ಅಡಿಲೇಡ್ (9:30 AM IST)
- ಭಾರತ vs ಆಸ್ಟ್ರೇಲಿಯಾ, 3ನೇ ಟೆಸ್ಟ್: ಡಿಸೆಂಬರ್ 14-18, ಬ್ರಿಸ್ಬೇನ್ (5:50 AM IST)
- ಭಾರತ vs ಆಸ್ಟ್ರೇಲಿಯಾ, 4ನೇ ಟೆಸ್ಟ್: ಡಿಸೆಂಬರ್ 26-30, ಮೆಲ್ಬೋರ್ನ್ (5:00 AM IST)
- ಭಾರತ vs ಆಸ್ಟ್ರೇಲಿಯಾ, 5ನೇ ಟೆಸ್ಟ್: ಜನವರಿ 2-7, ಸಿಡ್ನಿ (5:00 AM IST)
ಇದನ್ನೂ ಓದಿ : ರಾಷ್ಟ್ರ ರಾಜಧಾನಿಯಲ್ಲೂ ಘಮಘಮಿಸಲಿದೆ ನಂದಿನಿ – KMF ಉತ್ಪನ್ನಗಳ ಮಾರಾಟಕ್ಕೆ ಸಿಎಂ ಸಿದ್ದು ಚಾಲನೆ..!