ಕನ್ನಡ ಕಿರುತೆರೆಯಲ್ಲಿ ಅಡುಗೆ ಶೋ ಅಂದ್ರೆ ಥಟ್ಟನೆ ನೆನಪಾಗೋದೇ ಸ್ಟಾರ್ ಸುವರ್ಣ ವಾಹಿನಿಯ ‘ಬೊಂಬಾಟ್ ಭೋಜನ’. ಸಾವಿರಕ್ಕೂ ಹೆಚ್ಚು ಸಂಚಿಕೆಗಳನ್ನು ದಾಟಿ ಹೊಸ ಮೈಲಿಗಲ್ಲು ಸೃಷ್ಟಿಸಿರುವ ಈ ಶೋ ಈಗಾಗಲೇ 4 ಸೀಸನ್ಗಳನ್ನು ಯಶಸ್ವಿಯಾಗಿ ಪೂರೈಸಿದೆ. ಇದೀಗ ಇನ್ನಷ್ಟು ಹೊಸತನವನ್ನೊಳಗೊಂಡು 5ನೇ ಆವೃತ್ತಿಯೊಂದಿಗೆ ವೀಕ್ಷಕರ ಮುಂದೆ ಬರಲು ತಯಾರಾಗಿದೆ.
ಈ ಬಾರಿ ‘ಬೊಂಬಾಟ್ ಭೋಜನ ಸೀಸನ್ 5’ ರ ಪ್ರಮುಖ ವಿಶೇಷತೆಯಂದ್ರೆ “ಬೊಂಬಾಟ್ ಭೋಜನ On Wheels”. ಇನ್ಮುಂದೆ ಬೊಂಬಾಟ್ ಭೋಜನದ ಗಾಡಿ ರಾಜ್ಯಾದ್ಯಂತ ಸಂಚರಿಸಿ ನಿಮ್ ಊರಿಗೆ, ನಿಮ್ ಕೇರಿಗೆ, ನಿಮ್ಗಲ್ಲಿಗಳಿಗೆ ಬಂದು ರುಚಿ ರುಚಿಯಾದ ಅಡುಗೆಯನ್ನು ತಯಾರಿಸಿ ಆ ರುಚಿಯನ್ನು ಅಲ್ಲಿನ ಜನರಿಗೆ ತಿಳಿಸಿಕೊಡಲಿದೆ. ಇದು ಈ ಸೀಸನ್ ನ ಮುಖ್ಯ ಆಕರ್ಷಣೆಯಾಗಿದೆ.
ಈ ಸೀಸನ್ನಲ್ಲಿದೆ 5 ವಿಶೇಷಗಳು :
1. ಸ್ಪೆಷಲ್ ಊಟ : ಸಿಹಿ ಕಹಿ ಚಂದ್ರು ಅವರು ರುಚಿ-ರುಚಿಯಾದ ಅಡುಗೆಯನ್ನು ತಿಳಿಸುತ್ತಾರೆ.
2. ಹೋಟೆಲ್ ಊಟ : ಕರ್ನಾಟಕದಾದ್ಯಂತ ಚಲಿಸಿ, ಜನಪ್ರಿಯತೆಗಳಿಸಿರುವ ವರ್ಷಗಳ ಇತಿಹಾಸವಿರುವ ಹೋಟೆಲ್ಗಳಿಗೆ ಧಾವಿಸಿ ಅಲ್ಲಿನ ಜನಪ್ರಿಯ ತಿನಿಸುಗಳನ್ನು ಸವಿದು ಜನರಿಗೆ ತಿಳಿಸುವುದು.
3. ಊಟ ರೆಡಿ : ಜನಸಾಮಾನ್ಯರು / ಸೆಲೆಬ್ರಿಟಿಸ್ಗಳು ಬಂದು ವಿವಿಧ ರೀತಿಯ ಕೈರುಚಿಯನ್ನು ತಿಳಿಸುವುದು.
4. ಆರೋಗ್ಯ ಅಡುಗೆ : ಡಾ|| ಗೌರಿ ಸುಬ್ರಮಣ್ಯರವರು ಜನರಿಗೆ ಉಪಯುಕ್ತವಾದ ಮನೆಮದ್ದನ್ನು ಇಲ್ಲಿ ತಿಳಿಸುತ್ತಾರೆ.
5. ಸವಿಯೂಟ : ಬೇರೆ ಬೇರೆ ಜಿಲ್ಲೆಗಳಲ್ಲಿರುವ ಲೇಡೀಸ್ ಕ್ಲಬ್ಗಳಿಗೆ ಹೋಗಿ ಅಲ್ಲಿನ ಜನರೊಂದಿಗೆ ಬೆರೆತು, ಅಡುಗೆ ಮಾಂತ್ರಿಕ ಸಿಹಿ ಕಹಿ ಚಂದ್ರುರವರು ವಿಭಿನ್ನ ಅಡುಗೆ ಡಿಶ್ಗಳನ್ನು ತಯಾರಿಸುತ್ತಾರೆ.
ಇದೆಲ್ಲದರ ಜೊತೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಇದೇ ಮೊದಲ ಬಾರಿಗೆ ಪ್ರತೀ ಶನಿವಾರ ಮಾಂಸ ಪ್ರಿಯರಿಗಾಗಿ ಸಿದ್ಧವಾಗ್ತಿದೆ ‘ಬೊಂಬಾಟ್ ಬಾಡೂಟ. ಅಡುಗೆ ಮಾಂತ್ರಿಕ ಆದರ್ಶ್ ತಟಪತಿ ಈ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಇದರಲ್ಲಿ ಖಾರ ಮಸಾಲ, ಮಿರ್ಚಿ ಮಸಾಲ ಹಾಗೂ ನಾಟಿ ಮಸಾಲ ಎಂಬ ವಿಭಾಗಗಳು ಹೊಂದಿರುತ್ತದೆ.
ನಳ ಮಹಾರಾಜ ಸಿಹಿ ಕಹಿ ಚಂದ್ರುರವರ ನೇತೃತ್ವದಲ್ಲಿ ‘ಬೊಂಬಾಟ್ ಭೋಜನ ಸೀಸನ್ 5’ ಇದೇ ಸೋಮವಾರದಿಂದ ಮಧ್ಯಾಹ್ನ 12 ಗಂಟೆಗೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.
ಇದನ್ನೂ ಓದಿ : ಹೋಟೆಲ್ ಬಾಲ್ಕನಿಯಿಂದ ಬಿದ್ದು ಖ್ಯಾತ ಗಾಯಕ ಲಿಯಾಮ್ ಪೇನ್ ಸಾವು..!