ಬೆಂಗಳೂರು : ವಿವಾಹಿತ ಮಹಿಳೆಯ ಹಿಂದೆ ಬಿದ್ದಿದ್ದ ಯುವಕನಿಗೆ ಮಹಿಳೆಯ ಅಣ್ಣ, ಗಂಡ, ಸ್ನೇಹಿತರು ಚಾಕು ಇರಿದ ಘಟನೆ ಬ್ಯಾಟರಾಯನಪುರ ಠಾಣಾ ವ್ಯಾಪ್ತಿಯ ಪಂತರಪಾಳ್ಯದಲ್ಲಿ ನಡೆದಿದೆ. ಕಾರ್ತಿಕ್ (20) ಚಾಕು ಇರಿತಕ್ಕೆ ಒಳಗಾಗಿರೋ ಯುವಕ.
ಮಹಿಳೆಗೆ ಮದುವೆ ಆಗಿರುವುದು ಗೊತ್ತಿದ್ರೂ ಆಕೆಯನ್ನ ಕಾರ್ತಿಕ್ ಫಾಲೋ ಮಾಡುತ್ತಿದ್ದ. ಈ ವಿಚಾರ ಗೊತ್ತಾಗಿ ಮೂರ್ನಾಲ್ಕು ಬಾರಿ ಮಹಿಳೆಯ ಗಂಡ ಹಾಗೂ ಅಣ್ಣ ಕಾರ್ತಿಕ್ಗೆ ವಾರ್ನ್ ಮಾಡಿದ್ದರು.
ಮಹಿಳೆಯ ಅಣ್ಣ ವಿನೋದ್ ತಂಗಿ-ಭಾವನ ಮಧ್ಯೆ ಬರ್ಬೇಡಾ ಅಂತಾ ಕಾರ್ತಿಕ್ಗೆ ಹಲವು ಬಾರಿ ವಾರ್ನ್ ಮಾಡಿದ್ದನು. ಆದ್ರೆ, ಎಷ್ಟೇ ವಾರ್ನ್ ಮಾಡಿದ್ರೂ ಮತ್ತೆ ಮಹಿಳೆ ಹಿಂದೆ ಬಿದ್ದು ಕಾರ್ತಿಕ್ ಮಾತಾಡ್ತಿದ್ದ. ನಿನ್ನೆ ರಾತ್ರಿ 11 ಗಂಟೆ ಸುಮಾರಿಗೆ ಪಂತರಪಾಳ್ಯಕ್ಕೆ ಕಾರ್ತಿಕ್ ಹೋಗಿದ್ದ. ಈ ವೇಳೆ ವಿನೋದ್ ಕಾರ್ತಿಕ್ನನ್ನು ಫಾಲೋ ಮಾಡಿಕೊಂಡು ಹೋಗಿ ಚಾಕು ಇರಿದಿದ್ದಾನೆ. ತನ್ನ ಭಾವ ಸತೀಶ್ ಹಾಗೂ ಗೆಳೆಯ ಸೂರ್ಯನ ಜೊತೆ ಹೋಗಿ ಅಟ್ಯಾಕ್ ಮಾಡಿದ್ದಾನೆ.
ಕಾರ್ತಿಕ್ನ ತಲೆ ಮತ್ತು ಹೊಟ್ಟೆಗೆ ಚಾಕು ಇರಿದು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಸದ್ಯ ಘಟನೆ ಸಂಬಂಧ ಬ್ಯಾಟರಾಯನಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಇದನ್ನೂ ಓದಿ : ಚಿತ್ರದುರ್ಗದಲ್ಲಿ ರಾತ್ರಿಯಿಡಿ ಮೇಘರಾಜನ ಆರ್ಭಟ – ರಸ್ತೆಗಳೆಲ್ಲ ಜಲಾವೃತ, ಜನಜೀವನ ಅಸ್ತವ್ಯಸ್ತ..!