Download Our App

Follow us

Home » ಅಪರಾಧ » ಬೆಂಗಳೂರಲ್ಲಿ ಬೆಚ್ಚಿ ಬೀಳಿಸೋ ಘಟನೆ – BMTC ಕಂಡಕ್ಟರ್​​​​​​ಗೆ ಪ್ರಯಾಣಿಕನಿಂದಲೇ ಚಾಕು ಇರಿತ..!

ಬೆಂಗಳೂರಲ್ಲಿ ಬೆಚ್ಚಿ ಬೀಳಿಸೋ ಘಟನೆ – BMTC ಕಂಡಕ್ಟರ್​​​​​​ಗೆ ಪ್ರಯಾಣಿಕನಿಂದಲೇ ಚಾಕು ಇರಿತ..!

ಬೆಂಗಳೂರು : ಪ್ರಯಾಣಿಕನೋರ್ವ ಬಿಎಂಟಿಸಿ ಬಸ್​ ಕಂಡಕ್ಟರ್​ ಚಾಕುವಿನಿಂದ ಇರಿದಿರುವ ಘಟನೆ ಬೆಂಗಳೂರಿನ ವೈಟ್​ಫೀಲ್ಡ್ ಬಳಿಯ ITPL ಬಸ್ ಸ್ಟಾಪ್ ಬಳಿ ನಡೆದಿದೆ. ನಿನ್ನೆ(ಅಕ್ಟೋಬರ್ 01) ಸಂಜೆ ವೈಟ್ ಫೀಲ್ಡ್ ಬಳಿಯ ಐಟಿಪಿಎಲ್ ಬಸ್ ಸ್ಟಾಪ್ ನಲ್ಲಿ KA- 57-F0015 ವೋಲ್ವೋ ಬಸ್ ಕಂಡಕ್ಟರ್ ಯೋಗೇಶ್​ಗೆ ಹರ್ಷಾ ಸ್ನೇಹಿ ಎಂಬ ಪ್ರಯಾಣಿಕ 2 ರಿಂದ 3 ಬಾರಿ ಚಾಕುವಿನಿಂದ ಇರಿದಿದ್ದಾನೆ.

ಆರೋಪಿ ಹರ್ಷಾ ಸ್ನೇಹಿ
ಆರೋಪಿ ಹರ್ಷಾ ಸ್ನೇಹಿ

ಪ್ರಯಾಣಿಕರು ತುಂಬಿದ್ದ ಬಸ್​ನಲ್ಲಿ ಈ ದುಷ್ಕೃತ್ಯ ನಡೆದಿದೆ. ಕಂಡಕ್ಟರ್ ಯೋಗೇಶ್​ಗೆ ಚಾಕುವಿನಿಂದ ಇರಿದ ಬಳಿಕ ಹರ್ಷಾ ಸ್ನೇಹಿ ಬಸ್​ನಲ್ಲಿದ್ದ ಸುತ್ತಿಗೆ ತೆಗೆದುಕೊಂಡು ಗಾಜು ಪುಡಿ ಮಾಡಿ, ಬಸ್ ಡೋರ್​ಗೆ ಕಾಲಿನಿಂದ ಗುದ್ದಿ ಹುಚ್ಚನಂತೆ ವರ್ತಿಸಿದ್ದಾನೆ. ಇದನ್ನು ನೋಡಿ ಸಹ ಪ್ರಯಾಣಿಕರು ಕಿರುಚಾಡಿಕೊಂಡು ಬಸ್​​ನಿಂದ ಕೆಳಗೆ ಇಳಿದು ಓಡಿ ಹೋಗಿದ್ದಾರೆ.

ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ವೈಟ್​ಫೀಲ್ಡ್ ಠಾಣೆ ಪೊಲೀಸರು, ಆರೋಪಿ ಹರ್ಷಾ ಸ್ನೇಹಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ. ಚಾಕು ಇರಿತಕ್ಕೆ ಒಳಗಾದ ಕಂಡಕ್ಟರ್​ ಯೋಗೇಶ್​ಗೆ ಗಂಭೀರ ಗಾಯವಾಗಿದ್ದು,​ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ : ಹಿಜ್ಬುಲ್ಲಾ ಉಗ್ರರ ಮೇಲಿನ ದಾಳಿಗೆ ಪ್ರತಿದಾಳಿ – ಇಸ್ರೇಲ್​ ಮೇಲೆ 100 ಕ್ಷಿಪಣಿಗಳಿಂದ ಇರಾನ್ ಭಯಾನಕ​ ಅಟ್ಯಾಕ್..!

Leave a Comment

DG Ad

RELATED LATEST NEWS

Top Headlines

ವೇದಿಕೆಯಲ್ಲಿ ಕಣ್ಣೀರಿಟ್ಟ ಸಮಂತಾರನ್ನು ಅಪ್ಪಿಕೊಂಡು ಸಮಾಧಾನಿಸಿದ ಆಲಿಯಾ..!

ಹೈದರಾಬಾದ್ : ಬಾಲಿವುಡ್​ ನಟಿ ಆಲಿಯಾ ಭಟ್ ಹಾಗೂ ಸಮಂತಾ ರುತ್ ಪ್ರಭು ಹೈದರಾಬಾದ್​ನಲ್ಲಿ ನಿನ್ನೆ ನಡೆದ ಜಿಗ್ರಾ ಸಿನಿಮಾದ ಗ್ರ್ಯಾಂಡ್ ಪ್ರಿ ರಿಲೀಸ್ ಇವೆಂಟ್​ನಲ್ಲಿ ಒಟ್ಟಿಗೆ

Live Cricket

Add Your Heading Text Here