ಬೆಂಗಳೂರು : ಕನ್ನಡ ಚಿತ್ರರಂಗದ ನಟ ಧರ್ಮ ಅವರ ಹೆಸರು ಬಳಸಿಕೊಂಡು ವಾರಹೀ ವರ್ಲ್ಡ್ ಆಫ್ ಗೋಲ್ಡ್ ಚಿನ್ನದ ಅಂಗಡಿ ಮಾಲೀಕರಿಗೆ ಕೋಟಿ-ಕೋಟಿ ವಂಚನೆ ಮಾಡಿದ್ದ ಪ್ರಕರಣದಲ್ಲಿ ಸ್ವತಃ ಧರ್ಮ ಅವರು ಸ್ಪಷ್ಟನೆ ಕೊಟ್ಟಿದ್ದಾರೆ. ಬಿಟಿವಿ ಜೊತೆ ಎಕ್ಸ್ಕ್ಯೂಸಿವ್ ಆಗಿ ಮಾತನಾಡಿದ ನಟ ಧರ್ಮ ಅವರು, ನಾನು ನಟನಾಗಿದ್ದು ನನ್ನ ವರ್ಚಸ್ಸು ಡ್ಯಾಮೇಜ್ ಮಾಡೋ ಯತ್ನ ನಡೆದಿದೆ. ನಾನು ಯಾರಿಗೂ ಕೊಲೆ ಬೆದರಿಕೆ ಹಾಕಿಲ್ಲ ಎಂದು ತಮ್ಮ ವಿರುದ್ಧ ಕೇಳಿ ಬಂದಿರುವ ಆರೋಪಕ್ಕೆ ಸ್ಪಷ್ಟನೆ ನೀಡಿದ್ದಾರೆ.
ನನ್ನ ಮೇಲೆ ಆರೋಪ ಮಾಡಿದವರ ವಿರುದ್ಧ ಮಾನನಷ್ಟ ಕೇಸ್ ಹಾಕುವೆ. ನನ್ನ ವಿರುದ್ಧ ಕೇಳಿ ಬಂದಿರುವ ಆರೋಪಗಳು ಸುಳ್ಳು ಎಂದು ವನೀತಾ & ಐಶ್ವರ್ಯ ವಿರುದ್ಧವೂ ನಟ ಧರ್ಮೇಂದ್ರ ಗುಡುಗಿದ್ದಾರೆ. ಐಶ್ವರ್ಯ ನನಗೆ ಪರಿಚಯ, ಹಲವು ಸಿನಿಮಾಗಳಿಗೆ ಫೈನಾನ್ಸ್ ಮಾಡಿದ್ರು. ಸಿನಿಮಾಗಳಿಗೆ ಐಶ್ವರ್ಯಾ ಕೋಟಿ -ಕೋಟಿ ಬೆಲೆ ಬಾಳುವ ಕಾರ್ ಕೊಡ್ತಿದ್ರು. ರಾಜಕೀಯ ಗಣ್ಯರ ಜೊತೆ ಫೋಟೋಗಳು ಇವೆ, ಆಕೆ ಗಣ್ಯ ವ್ಯಕ್ತಿ ಎಂದು ನಂಬಿದ್ದೆ ಎಂದ್ರು.
ನನ್ನ ಬಳಿ 5 ಲಕ್ಷ ರೂಪಾಯಿ ಹಣ ಇತ್ತು ಹಾಗಾಗಿ ವರಮಹಾಲಕ್ಷ್ಮಿ ಹಬ್ಬಕ್ಕೆ ನನ್ನ ಪತ್ನಿಗೆ ಚಿನ್ನ ಖರೀದಿಸಬೇಕೆಂದುಕೊಂಡಿದ್ದೆ. ಆಗ ವನೀತಾರನ್ನ ಐಶ್ವರ್ಯ ಪರಿಚಯ ಮಾಡಿಸಿದ್ರು. ಒಂದು ವರ್ಷದ ಹಿಂದೆ ನಾನು ಚಿನ್ನವನ್ನು ಖರೀದಿ ಮಾಡಿದ್ದೇನೆ ಎಂದ್ರು. ಒಂದು ದಿನ ಸಡನ್ ಆಗಿ ಐಶ್ವರ್ಯಾ ಕಾಲ್ ಮಾಡಿ ಅಂಗಡಿಯವರು ಹಣ ಕೇಳ್ತಿದ್ದಾರೆ ಅಂದ್ರು. ನೀವು ಒಂದ್ ಟೈಮ್ ಕಾಲ್ ಮಾಡಿ ಟೈಮ್ ಕೇಳಿ ಅಂತ ಹೇಳಿದ್ರು. ನಾನು ಕಾಲ್ ಮಾಡಿ ನಾರ್ಮಲ್ಲಾಗಿ ಕೇಳಿಕೊಂಡೆ ಹೊರತು ಯಾವುದೇ ರೀತಿಯಲ್ಲೂ ಕೊಲೆ ಬೆದರಿಕೆ ಹಾಕಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಇನ್ನು ನಾನು ಪ್ರಭಾವಿ ರಾಜಕಾರಣಿಯೊಬ್ಬರ ಹೆಸ್ರಲ್ಲಿ ಮಾತಾಡಿಲ್ಲ. ನನ್ನ ವಾಯ್ಸ್ ಹೇಗಿದೆಯೋ ಹಾಗೇ ಮಾತನಾಡಿದ್ದೇನೆ. ನಾನು ಕೊಲೆ ಬೆದರಿಕೆ ಹಾಕಿದ್ರೆ ಯಾವುದೇ ಶಿಕ್ಷೆ ಅನುಭವಿಸಲು ಸಿದ್ದ. ಅಂಗಡಿ ಮಾಲೀಕರಾದ ವನಿತಾ ಯಾಕೆ ಹೀಗೆ ಹೇಳಿದ್ದಾರೋ ಗೊತ್ತಿಲ್ಲ. ನನ್ನ ಅಕೌಂಟ್ ನೋಡಲಿ 10 ಲಕ್ಷದ ಮೇಲಿಲ್ಲ ಅಂತಹದ್ದರಲ್ಲಿ 8 ಕೋಟಿ ವ್ಯವಹಾರ ಗೊತ್ತಿಲ್ಲ. ನಮ್ಮ ವಕೀಲರ ಮೂಲಕವೇ ಎಲ್ಲಾ ಆರೋಪಕ್ಕೆ ತಕ್ಕ ಉತ್ತರವನ್ನು ನೀಡುತ್ತೇನೆ ಎಂದು ಬಿಟಿವಿಗೆ ಎಕ್ಸ್ಕ್ಯೂಸಿವ್ ಆಗಿ ಧರ್ಮೇಂದ್ರ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ : ರಾಜಕಾರಣಿ ಸಹೋದರಿ ಎಂದು ನಂಬಿಸಿ ಕೋಟಿ ಕೋಟಿ ವಂಚನೆ – ಖತರ್ನಾಕ್ ದಂಪತಿ ವಿರುದ್ಧ FIR..!