ಮೈಸೂರು : ಮುಡಾ ಹಗರಣವನ್ನು ಮುಂದಿಟ್ಟುಕೊಂಡು ಸಿಎಂ ಸಿದ್ದರಾಮಯ್ಯ ರಾಜೀನಾಮೆಗಾಗಿ ಮೈತ್ರಿ ನಾಯಕರು ಪಾದಯಾತ್ರೆ ಹೊರಟಿದ್ದಾರೆ. 8 ದಿನದ ಪಾದಯಾತ್ರೆ ಶನಿವಾರಕ್ಕೆ (ಆ.10) ಮೂಡ ಕಚೇರಿ ಮುಂದೆ ಮುಕ್ತಾಯವಾಗಲಿದೆ. ಪಾದಯಾತ್ರೆಯುದಕ್ಕೂ ಸಿದ್ದರಾಮಯ್ಯ ವಿರುದ್ಧ ಜನಾಭಿಪ್ರಾಯ ರೂಪಿಸಲು ದೋಸ್ತಿಗಳು ಮುಂದಾಗಿದ್ದಾರೆ. ಆದರೆ ಮೈತ್ರಿ ನಾಯಕರ ಪಾದಯಾತ್ರೆಗೆ ಕೌಂಟರ್ ನೀಡಲು ಜನಾಂದೋಲನ ಸಭೆ ನಡೆಸಿದ್ದು, ಕೊನೆ ದಿನವಾದ ಇಂದು ಮೈಸೂರಿನಲ್ಲಿ ಬೃಹತ್ ಜನಾಂದೋಲನ ಸಭೆಯನ್ನು ಕಾಂಗ್ರೆಸ್ ಹಮ್ಮಿಕೊಂಡಿದೆ. ಈ ಬೃಹತ್ ಸಮಾವೇಶದಲ್ಲಿ ಬಿಜೆಪಿ-ಜೆಡಿಎಸ್ ವಿರುದ್ದ ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಕಿಡಿಕಾರಿದ್ದಾರೆ.
ಮೈಸೂರಿನಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಫ್ಯಾಮಿಲಿ ವಿರುದ್ಧ ಬಿಗ್ ಬಾಂಬ್ ಸಿಡಿಸಿದ ಹರಿಪ್ರಸಾದ್ ಅವರು, ಯಡಿಯೂರಪ್ಪನವ್ರೇ ನೀವು ಸಿಎಂ ಆಗಿದ್ದಾಗ ಫೈಲ್ಗೆ ಸೈನ್ ಹಾಕಿದ್ದು ಯಾರು? ಸಾವಿರಾರು ಫೈಲ್ಗಳಿಗೆ ಸಹಿ ಮಾಡಿದ್ದು ನಿಮ್ಮ ಮಗ ವಿಜಯೇಂದ್ರ ಅಲ್ವಾ? ಮುಖ್ಯಮಂತ್ರಿಗಳೇ ಬಿಎಸ್ವೈ ಕಾಲದ ಫೈಲ್ಗಳನ್ನು FSL ಲ್ಯಾಬ್ಗೆ ಕಳಿಸಿ ತನಿಖೆ ಮಾಡಿಸಿ ಎಂದು ಜನಾಂದೋಲನ ಸಭೆಯಲ್ಲಿ ಬಿ.ಕೆ.ಹರಿಪ್ರಸಾದ್ ಗುಡುಗಿದ್ದಾರೆ.
ಇನ್ನು ವಿಜಯೇಂದ್ರ ಸಾವಿರಾರು ಫೈಲ್ಗಳಿಗೆ ಸಹಿ ಮಾಡಿದ್ದಾರೆ. ಫೋರೆನ್ಸಿಕ್ ಪರೀಕ್ಷೆ ಮಾಡಿಸಿದ್ರೆ ಬಂಡವಾಳ ಬಯಲಾಗುತ್ತೆ. ಆಪರೇಷನ್ ಕಮಲದ ಪಿತಾಮಹನೇ ಯಡಿಯೂರಪ್ಪ. ಇವತ್ತು ಅದೇ ಯಡಿಯೂರಪ್ಪ ಭ್ರಷ್ಟಾಚಾರದ ಮಾತ್ನಾಡುತ್ತಿದ್ದಾರೆ. ಜೈಲಿಗೆ ಹೋಗಿ ಬಂದವರು ಪಾದಯಾತ್ರೆ ಮಾಡ್ತಿರೋದೇ ಹಾಸ್ಯಾಸ್ಪದ ಎಂದು ಮೈಸೂರಿನಲ್ಲಿ ಬಿಜೆಪಿ-ಜೆಡಿಎಸ್ ವಿರುದ್ಧ ಬಿ.ಕೆ.ಹರಿಪ್ರಸಾದ್ ಕಿಡಿಕಾರಿದ್ದಾರೆ.
ಇದನ್ನೂ ಓದಿ : ದೇವೇಗೌಡರ ವಿರುದ್ಧ ಬಿಜೆಪಿ ಫ್ಲೆಕ್ಸ್ – ಹಳೆ ಬ್ಯಾನರ್ ಮುಂದಿಟ್ಟು ಮೈತ್ರಿಗೆ ಕುಟುಕಿದ ಕಾಂಗ್ರೆಸ್..!