ಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಮಾಜಿ ಸಚಿವ ಬಿ.ನಾಗೇಂದ್ರ ಅವರು ಇಂದು ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಈ ಪ್ರಕರಣದಲ್ಲಿ ಎ1 ಆರೋಪಿಯಾಗಿದ್ದ ನಾಗೇಂದ್ರ ಅವರು ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಮೊನ್ನೆ ಕೋರ್ಟ್ ಜಾಮೀನು ಮಂಜೂರು ಮಾಡಿದ ಹಿನ್ನೆಲೆ ಇಂದು ಪರಪ್ಪನ ಅಗ್ರಹಾರ ಕಾರಾಗೃಹದಿಂದ ಬಿಡುಗಡೆ ಭಾಗ್ಯ ಪಡೆದಿದ್ದಾರೆ.
ಬಿಡುಗಡೆ ಬಳಿಕ ಜೈಲಿನ ಬಳಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಬಿ.ನಾಗೇಂದ್ರ ಅವರು, ರಾಜ್ಯ ಸರ್ಕಾರ ಕೆಡವಲು ಬಿಜೆಪಿ ಷಡ್ಯಂತ್ರ ಮಾಡಿದೆ. ಬಿಜೆಪಿ ನಾಯಕರಿಂದ ದೊಡ್ಡ ಹುನ್ನಾರ ನಡೆದಿದೆ. ಬೈ ಎಲೆಕ್ಷನ್ನಲ್ಲಿ ಬಿಜೆಪಿಯನ್ನು ಸೋಲಿಸಿ ಪಾಠ ಕಲಿಸುತ್ತೇವೆ ಎಂದು ಪರಪ್ಪನ ಅಗ್ರಹಾರ ಜೈಲಿನ ಬಳಿ ಶಪಥ ಮಾಡಿದ್ದಾರೆ.
ಇನ್ನು ವಾಲ್ಮೀಕಿ ನಿಗಮದ ಹಗರಣದಲ್ಲಿ ನಮ್ಮ ಪಾತ್ರ ಏನೂ ಇಲ್ಲ. ಬ್ಯಾಂಕ್ನವರಿಂದಲೇ ಅಕ್ರಮ ನಡೆದಿತ್ತು. ನಾನಾಗಲೀ, ಸಿಎಂ ಆಗಲೀ ಯಾವುದೇ ಆದೇಶ ಮಾಡಿಲ್ಲ. ED ಬಳಸಿಕೊಂಡು ಬಿಜೆಪಿಯವರು ಸಂಚು ಮಾಡಿದ್ರು. ಸಿಎಂ, ಡಿಸಿಎಂ ಹೆಸರು ಹೇಳಿಸುವ ಪ್ರಯತ್ನ ಮಾಡಿದ್ರು ಎಂದು ಜೈಲಿನ ಬಳಿ ಬಿ.ನಾಗೇಂದ್ರ ಗಂಭೀರ ಆರೋಪ ಮಾಡಿದ್ದಾರೆ.
ಇದನ್ನೂ ಓದಿ : ಜನ ಮೆಚ್ಚಿದ ಮಾರ್ಟಿನ್.. ದೇಶಾದ್ಯಂತ ಯಶಸ್ವಿ ಪ್ರದರ್ಶನ – ಸಕ್ಸಸ್ ಮೀಟ್‌ನಲ್ಲಿ ಜನತೆಗೆ ಧನ್ಯವಾದ ಸಲ್ಲಿಸಿದ ಧ್ರುವ ಸರ್ಜಾ..!