Download Our App

Follow us

Home » ರಾಜಕೀಯ » ED ಚಾರ್ಜ್​ಶೀಟ್ ಸಲ್ಲಿಕೆ ಬೆನ್ನಲ್ಲೇ ಬಳ್ಳಾರಿ ಸಂಸದರ ವಜಾಗೆ ಬಿಜೆಪಿ ಆಗ್ರಹ..!

ED ಚಾರ್ಜ್​ಶೀಟ್ ಸಲ್ಲಿಕೆ ಬೆನ್ನಲ್ಲೇ ಬಳ್ಳಾರಿ ಸಂಸದರ ವಜಾಗೆ ಬಿಜೆಪಿ ಆಗ್ರಹ..!

ಬೆಂಗಳೂರು : ವಾಲ್ಮೀಕಿ ನಿಗಮದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ಜಾರಿ ನಿರ್ದೇಶನಾಲಯ (ED) ಬಿ.ನಾಗೇಂದ್ರ ವಿರುದ್ಧ ಕೋರ್ಟ್​ಗೆ ಚಾರ್ಜ್​ಶೀಟ್ ಸಲ್ಲಿಕೆ ಮಾಡಿದೆ.  82ನೇ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ ಜಾರಿ ನಿರ್ದೇಶನಾಲಯ, ಹಗರಣದಲ್ಲಿ ಮಾಜಿ ಸಚಿವ ಬಿ. ನಾಗೇಂದ್ರ ಅವರು ಭಾಗಿಯಾಗಿದ್ದಾರೆ ಎಂದು ಉಲ್ಲೇಖಿಸಿದೆ. ಇದೀಗ ED ಚಾರ್ಜ್​ಶೀಟ್ ಸಲ್ಲಿಕೆ ಬೆನ್ನಲ್ಲೇ ಬಳ್ಳಾರಿ ಸಂಸದರ ವಜಾಗೆ ಬಿಜೆಪಿ ಆಗ್ರಹಿಸಿದೆ.

ಬಳ್ಳಾರಿ ಎಲೆಕ್ಷನ್​​​​​ನಲ್ಲಿ ಹಣ ಬಳಕೆ ಬಗ್ಗೆ ಚಾರ್ಜ್​ಶೀಟ್​​ನಲ್ಲಿ ಉಲ್ಲೇಖವಾಗಿದೆ. ಹಾಗಾಗಿ ಬಳ್ಳಾರಿ ಸಂಸದ ತುಕಾರಾಂ ಅವರನ್ನ ವಜಾ ಮಾಡಬೇಕು ಎಂದು ಬೆಂಗಳೂರಿನಲ್ಲಿ ಬಿಜೆಪಿ ಎಂಎಲ್​ಸಿ ರವಿಕುಮಾರ್​ ಆಗ್ರಹಿಸಿದ್ದಾರೆ. ವಾಲ್ಮೀಕಿ ನಿಗಮ ಹಗರಣದ ಬಗ್ಗೆ ED ಚಾರ್ಜ್​ ಶೀಟ್ ಸಲ್ಲಿಸಿದ್ದು, ಹಗರಣದಲ್ಲಿ ನಾಗೇಂದ್ರ ಪ್ರಮುಖ ಪಾತ್ರ ವಹಿಸಿರೋ ಬಗ್ಗೆ ಚಾರ್ಜ್​ಶೀಟ್​​ನಲ್ಲಿ ಮಾಹಿತಿ ಇದೆ.

ಈ ಬಗ್ಗೆ ಬಿಜೆಪಿ ಎಂಎಲ್​ಸಿ ರವಿಕುಮಾರ್ ಪ್ರತಿಕ್ರಿಯಿಸಿ, ಚುನಾವಣಾ ಆಯೋಗ ಬಳ್ಳಾರಿ ಎಂಪಿ ಸ್ಥಾನವನ್ನು ವಜಾ ಮಾಡ್ಬೇಕು, ರಾಜ್ಯ ಸರ್ಕಾರ ರಚಿಸಿದ್ದ SIT ಟೀಂ ನಾಗೇಂದ್ರ ಹೆಸರು ಬಿಟ್ಟಿತ್ತು. SIT ತನಿಖೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅನುಮಾನ ಇದೆ ಎಂದಿದ್ದಾರೆ.

ಇದನ್ನೂ ಓದಿ : ತೆಲುಗು ನಟ ಗಗನ್ ಅಭಿನಯದ ‘ಗಾಂಗೇಯ’ ಚಿತ್ರದ ಸಾಂಗ್ ರಿಲೀಸ್..!

Leave a Comment

DG Ad

RELATED LATEST NEWS

Top Headlines

ವೇದಿಕೆಯಲ್ಲಿ ಕಣ್ಣೀರಿಟ್ಟ ಸಮಂತಾರನ್ನು ಅಪ್ಪಿಕೊಂಡು ಸಮಾಧಾನಿಸಿದ ಆಲಿಯಾ..!

ಹೈದರಾಬಾದ್ : ಬಾಲಿವುಡ್​ ನಟಿ ಆಲಿಯಾ ಭಟ್ ಹಾಗೂ ಸಮಂತಾ ರುತ್ ಪ್ರಭು ಹೈದರಾಬಾದ್​ನಲ್ಲಿ ನಿನ್ನೆ ನಡೆದ ಜಿಗ್ರಾ ಸಿನಿಮಾದ ಗ್ರ್ಯಾಂಡ್ ಪ್ರಿ ರಿಲೀಸ್ ಇವೆಂಟ್​ನಲ್ಲಿ ಒಟ್ಟಿಗೆ

Live Cricket

Add Your Heading Text Here