ಬೆಂಗಳೂರು : ಸಿದ್ದರಾಮಯ್ಯ ಸರ್ಕಾರ ಹಳೇ ಹುಬ್ಬಳ್ಳಿ ಗಲಭೆ ಕೇಸ್ ವಾಪಸ್ ಪಡೆಯಲು ತೀರ್ಮಾನಿಸಿದೆ. ಈ ವಿಚಾರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಇದೀಗ ಹಳೇ ಹುಬ್ಬಳ್ಳಿ ಗಲಭೆ ಕೇಸ್ ವಾಪಸ್ ಪಡೆತಿರೋದಕ್ಕೆ ರಾಜ್ಯ ಸರ್ಕಾರದ ವಿರುದ್ಧ ರಾಜ್ಯಪಾಲರಿಗೆ ಬಿಜೆಪಿ ದೂರು ನೀಡಿದೆ.
ದೇಶದ್ರೋಹಿಗಳ ಮೇಲಿನ ಕೇಸ್ ವಾಪಸ್ ಪಡೆದಿದೆ ಎಂದು ಆರೋಪ ಮಾಡಿರುವ ಬಿಜೆಪಿ ನಾಯಕರು, ಡಿಜೆ ಹಳ್ಳಿ, ಕೆಜೆ ಹಳ್ಳಿ ಕೇಸ್ ವಾಪಸ್ಗೂ ಸರ್ಕಾರ ಪತ್ರ ಬರೆದಿದೆ. ಗಣೇಶ ಹಬ್ಬದ ಗಲಾಟೆಯಲ್ಲಿ ಹಿಂದೂಗಳ ಕೇಸ್ ವಾಪಸ್ ಪಡೆದಿಲ್ಲ. ಕರವೇ ನಾರಾಯಣಗೌಡರ ಮೇಲೆ ಕೇಸ್ ಹಾಕಿ ಜೈಲಿಗೆ ಕಳಿಸಿದ್ರು. ಇದು ಕಾಂಗ್ರೆಸ್ ಮೇಲಿನ ಆರೋಪಗಳ ಡೈವರ್ಟ್ ಮಾಡೋ ಪ್ರಯತ್ನ ಎಂದು ರಾಜಭವನ ಬಳಿ ಬಿಜೆಪಿ ನಾಯಕರ ಗಂಭೀರ ಆರೋಪ ಮಾಡಿದ್ದಾರೆ.
ಇನ್ನು ರಾಜಭವನ ಬಳಿ ಕಿಡಿಕಾರಿದ ವಿಪಕ್ಷ ನಾಯಕ ಆರ್.ಅಶೋಕ್ ಅವರು, ಈ ಸರ್ಕಾರದಲ್ಲಿ ಅಭಿವೃದ್ಧಿ ಮಾಡಲು ಹಣವಿಲ್ಲ. ಶಾಸಕರೇ ಅನುದಾನಕ್ಕಾಗಿ ಅಂಗಲಾಚುವ ಸ್ಥಿತಿ ಬಂದಿದೆ. ಕಾನೂನು ಸುವ್ಯವಸ್ಥೆ ಬಗ್ಗೆಯೂ ರಾಜ್ಯಪಾಲರ ಗಮನಕ್ಕೆ ತಂದಿದ್ದೇವೆ. ರಾಜ್ಯಪಾಲರು ಸರ್ಕಾರಕ್ಕೆ ಪತ್ರ ಬರೆಯೋದಾಗಿ ತಿಳಿಸಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ.
ಇದನ್ನೂ ಓದಿ : ಬಿಗ್ಬಾಸ್ ಫ್ಯಾನ್ಸ್‌ಗೆ ಶಾಕ್.. ಅಪ್ಪನ ನಿರ್ಧಾರವನ್ನು ಸ್ವಾಗತಿಸಿದ ಸಾನ್ವಿ ಸುದೀಪ್ – ಏನಂದ್ರು?