ಭಾರತ ತಮ್ಮ ಪಾಲಿಗೆ ಒಂದು ಪ್ರಯೋಗಶಾಲೆಯಾಗಿದ್ದು, ಇಲ್ಲಿ ಯಶಸ್ವಿಯಾದಲ್ಲಿ ಬೇರೆಡೆ ಅದನ್ನು ಜಾರಿ ಮಾಡಬಹುದು ಎಂದು ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದರು. ಇದೀಗ ಬಿಲ್ ಗೇಟ್ಸ್ ಅವರ ಈ ಮಾತಿಗೆ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿವೆ.
ಲಿಂಕ್ಡ್ಇನ್ ಸಹ-ಸಂಸ್ಥಾಪಕ ರೀಡ್ ಹಾಫ್ಮ್ಯಾನ್ ನಡೆಸಿಕೊಡುವ ಪಾಡ್ಕಾಸ್ಟ್ನಲ್ಲಿ ಈ ಬಗ್ಗೆ ಮಾತನಾಡಿರುವ ಬಿಲ್ ಗೇಟ್ಸ್ ಭಾರತವನ್ನು ಪ್ರಯೋಗಶಾಲೆಯಂತೆ ಪರಿಗಣಿಸಿರುವುದಾಗಿ ಹೇಳಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಜನರು ಬಿಲ್ ಗೇಟ್ಸ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
‘ಭಾರತದಲ್ಲಿ ಬಹಳಷ್ಟು ಕ್ಲಿಷ್ಟಕರ ಸಂಗತಿಗಳೆನಿಸಿದ್ದ ಆರೋಗ್ಯ, ಶಿಕ್ಷಣ, ಪೌಷ್ಟಿಕತೆಯ ಪರಿಸ್ಥಿತಿ ಈಗ ಅಲ್ಲಿ ಉತ್ತಮಗೊಳ್ಳುತ್ತಿದೆ. ಸಾಕಷ್ಟು ಸ್ಥಿರತೆ ಸಾಧಿಸಲಾಗಿದೆ. ಸರ್ಕಾರಕ್ಕೂ ಆದಾಯ ತಂದುಕೊಡುತ್ತಿದೆ. ಮುಂದಿನ 20 ವರ್ಷದಲ್ಲಿ ಅಲ್ಲಿನ ಜನರು ಇನ್ನೂ ಉತ್ತಮ ಸ್ಥಿತಿ ಪಡೆಯಬಹುದು. ಭಾರತದಂತಹ ದೇಶವು ಪ್ರಯೋಗಶಾಲೆಯಂತಿದ್ದು, ಹೊಸ ಪ್ರಯೋಗಗಳನ್ನು ಮಾಡಬಹುದು. ಅವು ಅಲ್ಲಿ ಯಶಸ್ವಿಯಾದಲ್ಲಿ ಬೇರೆಡೆ ಅದನ್ನು ಜಾರಿಗೆ ತರಬಹುದು’ ಎಂದು ಪೋಡ್ಕ್ಯಾಸ್ಟ್ನಲ್ಲಿ ಬಿಲ್ ಗೇಟ್ಸ್ ಹೇಳಿದ್ದಾರೆ.
‘ಅಮೆರಿಕದ ಹೊರಗೆ ನಮ್ಮ ಅತಿದೊಡ್ಡ ಕಛೇರಿ ಇರುವುದು ಭಾರತದಲ್ಲೇ. ಅತಿ ಹೆಚ್ಚು ಹೊಸ ಪ್ರಯೋಗಗಳನ್ನು ನಾವು ಭಾರತದಲ್ಲಿನ ಸಹಭಾಗಿದಾರರ ಜೊತೆಗೂಡಿ ಮಾಡುತ್ತಿದ್ದೇವೆ’ ಎಂದು ಹೇಳುವ ಮೂಲಕ ವಿವಾದದ ಕಿಡಿಯನ್ನು ಹೊತ್ತಿಸಿದ್ದಾರೆ.
ಇದನ್ನೂ ಓದಿ : ದಾವಣಗೆರೆ : ಆಸ್ತಿಗಾಗಿ ಸುಪಾರಿ ಕೊಟ್ಟು ತಮ್ಮನನ್ನೇ ಕೊಲೆ ಮಾಡಿಸಿದ ಅಣ್ಣ..!