ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ತಮಿಳುನಾಡಿನಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಮಳೆಯ ಪರಿಣಾಮ ಚೆನ್ನೈ ಸೇರಿದಂತೆ ಹಲವೆಡೆ ಜನಜೀವನ ಅಸ್ತವ್ಯಸ್ತವಾಗಿದೆ. ಅನೇಕ ಪ್ರದೇಶಗಳು ಜಲಾವೃತಗೊಂಡಿವೆ. ಹೀಗಾಗಿ ಬಿಗ್ ಬಾಸ್ ತಮಿಳು ಸೀಸನ್ 8 ಕಾರ್ಯಕ್ರಮ ಮುಂದುವರಿಯುತ್ತದೆಯೇ? ಮನೆ ಬಳಿ ಮಳೆನೀರು ಸಂಗ್ರಹವಾಗಿದೆಯಾ ಎಂದು ವೀಕ್ಷಕರು ಪ್ರಶ್ನೆ ಮಾಡುತ್ತಿದ್ದಾರೆ.
ಬಿಗ್ ಬಾಸ್ ತಮಿಳು ಸೀಸನ್8 ಅಕ್ಟೋಬರ್ 6 ರಂದು ಆರಂಭವಾಗಿದ್ದು, ಈ ಬಾರಿ ವಿಜಯ್ ಸೇತುಪತಿ ನಿರೂಪಣೆ ಮಾಡುತ್ತಿದ್ದಾರೆ. ಬಿಗ್ ಬಾಸ್ ಎರಡನೇ ವಾರಕ್ಕೆ ಕಾಲಿಡುತ್ತಿದೆ. ಈ ವಾರದ ನಾಮಿನೇಷನ್ ಪಟ್ಟಿಯಲ್ಲಿರುವವರಲ್ಲಿ ಯಾರು ಹೊರಹೋಗುತ್ತಾರೆ ಎಂಬ ಕುತೂಹಲ ಮನೆಮಾಡಿದೆ. ಇದಲ್ಲದೆ, ಚೆನ್ನೈನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಬಿಗ್ ಬಾಸ್ ಕಾರ್ಯಕ್ರಮ ಮುಂದುವರಿಯುತ್ತದೆಯೇ ಎಂಬ ಸಂದೇಹ ಉಂಟಾಗಿದೆ.
ಚೆನ್ನೈನ ಚೆಂಬರಂಬಾಕ್ಕಂ ಕೆಳಭಾಗದಲ್ಲಿರುವುದರಿಂದ, ಅಲ್ಲಿ ನೀರು ಬೇಗನೆ ನಿಲ್ಲುತ್ತದೆ. ಬಿಗ್ ಬಾಸ್ 8ನೇ ಸೀಸನ್‌ನ ಸೆಟ್ ಇಲ್ಲಿದೆ. ಚೆಂಬರಂಬಾಕ್ಕಂನಲ್ಲಿ ನೀರು ನಿಂತಿರುವುದರಿಂದ ಬಿಗ್ ಬಾಸ್ ಮನೆಯೊಳಗೆ ನೀರು ನುಗ್ಗುವ ಸಾಧ್ಯತೆಯಿದೆ. ಹೀಗಾಗಿ ಕಾರ್ಯಕ್ರಮ ಮುಂದುವರಿಸುವುದರಲ್ಲಿ ಸಮಸ್ಯೆಯಿದೆ. ಬಿಗ್ ಬಾಸ್ 4ನೇ ಸೀಸನ್ ವೇಳೆ ಮಳೆಯಿಂದಾಗಿ ಸ್ಪರ್ಧಿಗಳನ್ನು ಒಂದು ರಾತ್ರಿ ಹೋಟೆಲ್‌ನಲ್ಲಿ ತಂಗಲು ವ್ಯವಸ್ಥೆ ಮಾಡಲಾಗಿತ್ತು.
ಬಿಗ್ ಬಾಸ್ ಮನೆಗೆ ನೀರು ನುಗ್ಗದಂತೆ ತಡೆಯಲು ನಿರ್ಮಾಪಕರು ಕ್ರಮ ಕೈಗೊಳ್ಳುತ್ತಿದ್ದಾರೆ. ಆದರೆ, ಚೆಂಬರಂಬಾಕ್ಕಂನಲ್ಲಿ ನೀರು ನಿಂತಿರುವುದನ್ನು ನೋಡಿ, ಸ್ಪರ್ಧಿಗಳ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅಭಿಮಾನಿಗಳು ಮತ್ತು ಸ್ಪರ್ಧಿಗಳ ಕುಟುಂಬಸ್ಥರು ಹಲವು ಪ್ರಶ್ನೆಗಳನ್ನು ಮಾಡುತ್ತಿದ್ದಾರೆ.
ಇದನ್ನೂ ಓದಿ : ತೈಲ ಟ್ಯಾಂಕರ್ ಸ್ಫೋಟ – 94 ಜನ ಸಾವು, 50ಕ್ಕೂ ಹೆಚ್ಚು ಮಂದಿಗೆ ಗಾಯ..!