ಟಿವಿ ಲೋಕದ ಅತೀ ದೊಡ್ಡ ರಿಯಾಲಿಟಿ ಶೋ, ಕನ್ನಡ ಬಿಗ್ ಬಾಸ್ ಸೀಸನ್ 11ಕ್ಕೆ ದಿನಗಣನೆ ಶುರುವಾಗಿದೆ. ಅಂತೂ ಇಂತೂ ಪ್ರೇಕ್ಷಕರ ಕುತೂಹಲಕ್ಕೆ ತೆರೆಬಿದ್ದಿದ್ದು, ಕಿಚ್ಚ ಸುದೀಪ್ ಅವರು ಮಾಸ್ ಡೈಲಾಗ್ ಹೊಡೆದ ಹೊಸ ಬಿಗ್ ಬಾಸ್ನ ಪ್ರೋಮೋವೊಂದು ರಿಲೀಸ್ ಆಗಿದೆ. ಈ ಮೂಲಕ ಸೀಸನ್ 11ರಲ್ಲಿ ಆ್ಯಂಕರ್ ಬದಲಾಗುತ್ತಾರಾ ಎಂಬ ಅನುಮಾನಕ್ಕೂ ಪೂರ್ಣ ವಿರಾಮ ಸಿಕ್ಕಂತಾಗಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ ಕಾರ್ಯಕ್ರಮ ಸೆಪ್ಟೆಂಬರ್ 29ರಿಂದ ಆರಂಭ ಆಗಲಿದ್ದು, ಈ ಬಾರಿ ಕೂಡ ಕಿಚ್ಚ ಸುದೀಪ್ ಅವರೇ ಆ್ಯಂಕರ್ ಆಗಿ ಮುಂದುವರಿಯಲಿದ್ದಾರೆ. ಈ ಬಗ್ಗೆ ಅಪ್ಡೇಟ್ ನೀಡಲು ‘ಕಲರ್ಸ್ ಕನ್ನಡ’ ಹೊಸ ಪ್ರೋಮೋ ಬಿಡುಗಡೆ ಮಾಡಿದೆ. ಇದರಲ್ಲಿ ಕಿಚ್ಚ ಸುದೀಪ್ ಅವರು ಅಬ್ಬರಿಸಿದ್ದಾರೆ.
ಇಷ್ಟು ವರ್ಷಗಳ ಕಾಲ ಸುದೀಪ್ ಅವರು ಯಶಸ್ವಿಯಾಗಿ ಬಿಗ್ ಬಾಸ್ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದಾರೆ. ಅವರಿಂದಾಗಿ ಎಲ್ಲ 10 ಸೀಸನ್ಗಳಿಗೆ ಸ್ಟಾರ್ ಮೆರುಗು ಸಿಕ್ಕಿತು. ಈಗ ಸಡನ್ ಆಗಿ ಬೇರೆ ಆ್ಯಂಕರ್ ಬರುತ್ತಾರೆ ಎಂದರೆ ಅಭಿಮಾನಿಗಳು ಅದನ್ನು ಸ್ವೀಕರಿಸುವುದು ಕಷ್ಟವಾಗಿತ್ತು. ಹಾಗಿದ್ದರೂ ಕೂಡ ಕೆಲವು ಅನುಮಾನಗಳು ಹುಟ್ಟಿಕೊಂಡಿದ್ದವು. ಸುದೀಪ್ ಬದಲು ಬೇರೆಯವರು ಈ ಬಾರಿ ನಿರೂಪಣೆ ಮಾಡಬಹುದು ಎಂದು ಕೆಲವರು ಊಹಿಸಿದ್ದರು. ಆದರೆ ಅದು ಅಂತಿಮವಾಗಿ ನಿಜವಾಗಿಲ್ಲ.
‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಹೊಸ ಪ್ರೋಮೋದಲ್ಲಿ ಸುದೀಪ್ ಅವರು ಖಡಕ್ ಆಗಿ ಡೈಲಾಗ್ ಹೊಡೆದಿದ್ದಾರೆ. ‘10 ವರ್ಷದಿಂದ ಒಂದು ಲೆಕ್ಕ, ಈಗಿಂದ ಬೇರೇನೇ ಲೆಕ್ಕ. ಇದು ಹೊಸ ಅಧ್ಯಾಯ’ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ. ಈ ಪ್ರೋಮೋ ನೋಡಿ ಸುದೀಪ್ ಅಭಿಮಾನಿಗಳಿಗೆ ಖುಷಿ ಆಗಿದೆ.
ಇನ್ನು ಈ ಬಾರಿ ಯಾರೆಲ್ಲ ಬಿಗ್ ಬಾಸ್ ಮನೆಯೊಳಗೆ ಕಾಲಿಡುತ್ತಾರೆ ಎಂಬುದನ್ನು ತಿಳಿಯುವ ಕೌತುಕ ಎಲ್ಲರಲ್ಲಿ ಹೆಚ್ಚಾಗಿದೆ. ‘ಕಲರ್ಸ್ ಕನ್ನಡ’ ಹಾಗೂ ‘ಜಿಯೋ ಸಿನಿಮಾ’ ಮೂಲಕ ಈ ಶೋ ಪ್ರಸಾರ ಆಗಲಿದ್ದು, ಸೆ.29ರ ಭಾನುವಾರ ಗ್ರ್ಯಾಂಡ್ ಓಪನಿಂಗ್ ಆಗಲಿದೆ. ಇದೇ ತಿಂಗಳ 23ಕ್ಕೆ ಸುದೀಪ್ ನೇತೃತ್ವದಲ್ಲೇ ಬಿಗ್ ಬಾಸ್ ಟೀಮ್ ಪ್ರೆಸ್ಮೀಟ್ ಮಾಡಲಿದೆ.
ಇದನ್ನೂ ಓದಿ : ರಾಧಿಕಾ ಕುಮಾರಸ್ವಾಮಿ ನಟನೆಯ ಬಹುನಿರೀಕ್ಷಿತ ಸಿನಿಮಾ ‘ಭೈರಾದೇವಿ’ ಪ್ರಚಾರಕ್ಕೆ ಅದ್ದೂರಿ ಚಾಲನೆ..!