Download Our App

Follow us

Home » ಸಿನಿಮಾ » ಬಿಗ್​ಬಾಸ್​ ಮನೆಯಲ್ಲಿ ಬಿಗ್​ ಟ್ವಿಸ್ಟ್.. ಅಚ್ಚರಿಯ ರೀತಿಯಲ್ಲಿ ಆಚೆ ಬಂದ್ರಾ ಶೋಭಾ ಶೆಟ್ಟಿ?

ಬಿಗ್​ಬಾಸ್​ ಮನೆಯಲ್ಲಿ ಬಿಗ್​ ಟ್ವಿಸ್ಟ್.. ಅಚ್ಚರಿಯ ರೀತಿಯಲ್ಲಿ ಆಚೆ ಬಂದ್ರಾ ಶೋಭಾ ಶೆಟ್ಟಿ?

ಕನ್ನಡ ಬಿಗ್​ಬಾಸ್‌‌ ಮನೆಯ ಆಟ ರೋಚಕವಾಗಿ ಸಾಗುತ್ತಿದೆ. ವಾರಗಳು ಕಳೆಯುತ್ತಿದ್ದಂತೆ ದೊಡ್ಮನೆ ಆಟ ಕಳೆಗಟ್ಟುತ್ತಿದೆ. ಸದ್ಯ ವೈಲ್ಡ್ ಕಾರ್ಡ್ ಮೂಲಕ ಮನೆಗೆ ಬಂದಿದ್ದ ಶೋಭಾ ಶೆಟ್ಟಿಗೆ ಮನೆಗೆ ಹೊಂದಿಕೊಳ್ಳಲು ಸಾಧ್ಯ ಆಗುತ್ತಿಲ್ಲ. ಆರೋಗ್ಯ ಸಮಸ್ಯೆ ಇದೆ ಎಂದು ಮನೆಯಿಂದ ಹೊರ ಬಂದಿದ್ದಾರೆ ಎನ್ನಲಾಗಿದೆ. ಮನೆಗೆ ಬಂದ ಆರಂಭದಲ್ಲಿ ಬಹಳ ಜೋಶ್‌ನಲ್ಲಿದ್ದ ಶೋಭಾ ಶೆಟ್ಟಿ ಕೆಲವೇ ದಿನಕ್ಕೆ ಮಂಕಾಗಿದ್ದರು. ಮನೆ ಪ್ರವೇಶಿಸಿದಾಗ ಫುಲ್ ಸ್ಟ್ರಾಂಗ್ ಆಗಿ ಕಾಣಿಸಿಕೊಂಡಿದ್ದ ಶೋಭಾ ಕಳೆದ ವಾರದ ಟಾಸ್ಕ್‌ ನಲ್ಲಿ ಸಂಪೂರ್ಣ ಸೈಲೆಂಟ್ ಆಗಿದ್ದರು.

ಆ ಬಳಿಕ ನಾಮಿನೆಟ್ ಆಗಿದ್ದ ಶೋಭಾ ಶೆಟ್ಟಿಯನ್ನು ಕನ್ನಡಿಗರು ವೋಟ್​ ಮಾಡಿ ಉಳಿಸಿದ್ದರು. ಆದರೆ ಮನೆಯಲ್ಲಿರಲು ಸಾಧ್ಯವೇ ಇಲ್ಲ ಎಂದು ಸುದೀಪ್ ಬಳಿ ಶೋಭಾ ಶೆಟ್ಟಿ ಹೇಳಿದರು. ಅನಾರೋಗ್ಯದ ಕಾರಣದಿಂದ ನನಗೆ ಆಟ ಆಡೋಕೆ ಆಗಲ್ಲ ಎನಿಸುತ್ತಿದೆ’ ಎಂದರು. ಈ ವೇಳೆ ಶೋಭಾ ಶೆಟ್ಟಿಗೆ ಸುದೀಪ್ ಸಲಹೆ ಕೂಡ ಕೊಟ್ಟರು ‘ಈ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿರುವ ಉದ್ದೇಶ ಏನೆಂದು ಒಮ್ಮೆ ಯೋಚಿಸಿ, ನಿಮಗೆ ಮತ ಹಾಕಿದ ಪ್ರೇಕ್ಷಕರಿಗೆ ಅನ್ಯಾಯವಾದರೆ ಏನು ಹೇಳುತ್ತೀರಿ?’ ಏನೇ ಆದರೂ ಸಹ ಶೋಭಾ ಶೆಟ್ಟಿ, ತಾನು ಮನೆಗೆ ಹೋಗಲೇ ಬೇಕು ಎಂದು ಅಂಗಲಾಚಿದ್ದಾರೆ.

ಸೇವ್‌ ಆದಾಗ ಕರ್ತವ್ಯದ ಬಗ್ಗೆ ತಮ್ಮ ತಾಯಿಯ ಬಗ್ಗೆ ಹೇಳಿ ಶೋಭಾ ಅವರ ಮನಪರಿವರ್ತನೆಗೆ ಕಿಚ್ಚ ಪ್ರಯತ್ನಿಸಿದರು. ‘ತಾಯಿ ನಿಧನರಾದಾಗಲೂ ನಾನು ನನ್ನ ಕರ್ತವ್ಯ ಮಾಡಿದ್ದೆ’ ಎಂದು ಹೇಳುವ ಮೂಲಕ ಕರ್ತವ್ಯ ಬಂದಾಗ ಅಡಚಣೆ ಬರುವುದು ಸಹಜ, ಕಷ್ಟ ಬರೋದು ಸಹಜ ಇದರ ಮೇಲೆ ನಾನು ಬುದ್ದಿ ಹೇಳಲ್ಲ ಎಂದು ಪಾಠ ಮಾಡಿದರು. ಸುದೀಪ್ ಮಾತಿನಿಂದ ಶೋಭಾಗೆ ಧೈರ್ಯ ಬಂತು. ‘ಕ್ಷಮಿಸಿ ಸರ್. ನಾನೇ ಪ್ರೇಕ್ಷಕರನ್ನು ತಪ್ಪಾಗಿ ಅರ್ಥ ಮಾಡಿಕೊಂಡಿದ್ದೆ. ನಿಮ್ಮ ಪ್ರೀತಿ, ಬೆಂಬಲಕ್ಕೆ ಧನ್ಯವಾದ. ನಾನು ಕಮ್​ಬ್ಯಾಕ್ ಮಾಡುತ್ತೇನೆ. ನನ್ನನ್ನು ನಾನು ಸಾಬೀತು ಮಾಡಿಕೊಳ್ಳುತ್ತೇನೆ. ಸುದೀಪ್ ಸರ್ ಮೌಲ್ಯಯುತ ಮಾತುಗಳಿಗೆ ಥ್ಯಾಂಕ್ಸ್’ ಎಂದರು.

ಆದರೆ ಎಲಿಮಿನೇಶನ್​ ಬಾಟಮ್‌ 2ನಲ್ಲಿ ಶಿಶಿರ್‌ ಮತ್ತು ಐಶ್ವರ್ಯಾ ಅವರು ಬಂದಾಗ ಎಲ್ಲರ ಬಳಿ ಕಿಚ್ಚ ಅಭಿಪ್ರಾಯ ಕೇಳಿಕೊಂಡು ಬಂದರು. ಈ ವೇಳೆ ಶೋಭಾ ಮತ್ತೆ ತನ್ನನ್ನು ಮನೆಗೆ ಕಳುಹಿಸಿ ಎಂದು ಕೈಮುಗಿದು ಕೇಳಿಕೊಂಡರು. ಇದಕ್ಕೆ ಕಿಚ್ಚನಿಗೆ ಕೋಪ ಬಂತು. ವೋಟ್ ಮಾಡಿದ ಜನಗಳಿಗೆ ಏನು ಮರ್ಯಾದೆ ಕೊಡುತ್ತೀದ್ದಿರಿ ನೀವು? ಅವರೇನು ಮೂರ್ಖರಾ? ಮೊದಲು ನೀವು ಮಾತನಾಡಿದ್ದು ಡ್ರಾಮಾನಾ? ಎಂದು ಕೋಪದಿಂದಲೇ ಕೇಳಿದರು. ಕೊನೆಗೆ ಶೋಭಾ ಶೆಟ್ಟಿ ಮಾತುಗಳಿಗೆ ರೋಸಿ ಹೋದ ಸುದೀಪ್ ಶೋ ವೀಕ್ಷಕರ ಕ್ಷಮೆ ಕೇಳಿ ಶೋ ಮುಕ್ತಾಯ ಗೊಳಿಸಿದ್ದಾರೆ.

ಆದ್ರೆ ಶೋಭಾ ಅವರು ಮನೆಯಿಂದ ಹೊರ ಹೋಗಿರುವ ವಿಡಿಯೋವನ್ನು ಬಿಗ್ ಬಾಸ್ ಇನ್ನು ತೋರಿಸಿಲ್ಲ. ಸುದೀಪ್‌ ಕಾರ್ಯಕ್ರಮ ಮುಗಿಸಿದ್ದಾರೆ. ಹೀಗಾಗಿ ವೇದಿಕೆಗೆ ಕರೆದು ಮಾತನಾಡಿಸದೆ ನೇರವಾಗಿ ಶೋಭಾ ಅವರನ್ನು ಮನೆಗೆ ಕಳುಹಿಸಲಾಗಿದೆಯೇ ಎಂಬುವುದು ಇಂದಿನ ಸಂಚಿಕೆಯಲ್ಲಿ ತಿಳಿದುಬರಲಿದೆ.

ಇದನ್ನೂ ಓದಿ : ಹಾಸನದಲ್ಲಿ ಭೀಕರ ಅಪಘಾತ.. ಕರ್ತವ್ಯಕ್ಕೆ ಹಾಜರಾಗುವ ಮುನ್ನವೇ ಯುವ ಐಪಿಎಸ್ ಅಧಿಕಾರಿ ಸಾವು..!

Leave a Comment

DG Ad

RELATED LATEST NEWS

Top Headlines

ಸ್ಯಾಂಡಲ್​ವುಡ್​​ನಲ್ಲಿ ‘ಮಲ್ಟಿ’ ಸ್ಟಾರ್ಸ್​ ಹಂಗಾಮಾ – ಸ್ವಾತಂತ್ರ್ಯ ದಿನಾಚರಣೆಗೆ ಬಹುನಿರೀಕ್ಷಿತ ‘45’ ಸಿನಿಮಾ ರಿಲೀಸ್..!

2025ರ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾದ “45” ಚಿತ್ರ ಆಗಸ್ಟ್ 15 ಸ್ವಾತಂತ್ರ್ಯ ದಿನೋತ್ಸವದಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಸಾಮಾನ್ಯವಾಗಿ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ರಿಲೀಸ್ ಡೇಟ್​​ನ ಅನೌನ್ಸ್

Live Cricket

Add Your Heading Text Here