ಬಿಗ್ಬಾಸ್ ಕನ್ನಡ 11ನೇ ಸೀಸನ್ ಆರಂಭಕ್ಕೆ ಕ್ಷಣಗಣನೆ ಶುರುವಾಗಿದ್ದು, ಇದೇ ತಿಂಗಳು ಸೆಪ್ಟೆಂಬರ್ 29ರಂದು ಈ ರಿಯಾಲಿಟಿ ಶೋ ಆರಂಭವಾಗಲಿದೆ. ಈ ಬಾರಿಯ ಬಿಗ್ ಬಾಸ್ ಸ್ವರ್ಗ, ನರಕ ಎಂಬ ಥೀಮ್‌ನಲ್ಲಿಯೇ ನಡೆಸಲಾಗುತ್ತಿದೆ. ಇದೀಗ ಬಿಗ್ ಬಾಸ್ ತಂಡ ಸುದ್ದಿಗೋಷ್ಠಿಯಲ್ಲಿ ಸ್ಪರ್ಧಿಗಳ ಬಗ್ಗೆ ಬಿಗ್ ಅಪ್ಡೇಟ್ ನೀಡಿದೆ.
ಬಿಗ್ ಬಾಸ್ ಇತಿಹಾಸದಲ್ಲೇ ಪ್ರ ಪ್ರಥಮ ಬಾರಿಗೆ ರಾಜ ರಾಣಿ ಫಿನಾಲೆಯಲ್ಲಿ ಕೆಲವು ಸ್ಪರ್ಧಿಗಳನ್ನು ರಿವೀಲ್ ಮಾಡಲಾಗುತ್ತದೆ ಎಂದು ಆಯೋಜಕರು ಮಾಹಿತಿ ಹಂಚಿಕೊಂಡಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯ ಬಿಗ್ ಬಾಸ್ ರಿಯಾಲಿಟಿಯ ಶೋಗಳ 10 ಸೀಸನ್‌ನಲ್ಲಿ ಕಂಟೆಸ್ಟೆಂಟ್‌ಗಳ ಹೆಸರನ್ನು ವೇದಿಕೆ ಮೇಲೆಯೇ ರಿವೀಲ್ ಮಾಡಿ, ಅವರನ್ನು ಪರಿಚಯ ಮಾಡಿಕೊಡಲಾಗುತ್ತಿತ್ತು. ಈ ಬಾರಿ ಮಾತ್ರ ಹೊಸದೊಂದು ರೀತಿಯಲ್ಲಿ ಬಿಗ್ ಬಾಸ್ ಕಂಟೆಸ್ಟೆಂಟ್‌ಗಳ ಹೆಸರನ್ನು ರಿವೀಲ್ ಮಾಡಲಾಗುತ್ತದೆ. ಇದೇ ಕಲರ್ಸ್ ಕನ್ನಡ ವಾಹಿನಿಯ ಮತ್ತೊಂದು ರಿಯಾಲಿಟಿ ಶೋ ರಾಜಾರಾಣಿ ಶೋನಲ್ಲಿ ಬಿಗ್ ಬಾಸ್ ಕಂಟೆಸ್ಟೆಂಟ್‌ಗಳ ಹೆಸರನ್ನು ರಿವೀಲ್ ಮಾಡಲಾಗುತ್ತಿದೆ.
ರಾಜಾರಾಣಿ ಶೋನಲ್ಲಿ ರಿವೀಲ್ ಮಾಡಿದ ಹೆಸರುಗಳಿಗೆ ವಾಹಿನಿಯ ವೀಕ್ಷಕರಿಂದಲೇ ವೋಟಿಂಗ್ ಮಾಡಲು ಅವಕಾಶ ನೀಡಲಾಗುತ್ತದೆ. ಅಂದರೆ, ಬಿಗ್ ಬಾಸ್ ಕಂಟೆಸ್ಟೆಂಟ್‌ಗಳ ಹೆಸರನ್ನು ರಿವೀಲ್ ಮಾಡಿದ ನಂತರ ಜನರಿಂದ ಅವರಿಗೆ ಆನ್‌ಲೈನ್ ಮೂಲಕ ವೋಟಿಂಗ್ ಅನ್ನು ಪಡೆಯಲಾಗುತ್ತದೆ. ಅತಿ ಹೆಚ್ಚಿನ ಮತಗಳನ್ನು ಪಡೆದವರಿಗೆ ಬಿಗ್ ಬಾಸ್ ಮನೆಯೊಳಗೆ ಹೋಗಲು ಅವಕಾಶ ನೀಡಲಾಗುತ್ತದೆ.
ಬಿಗ್ ಬಾಸ್ ಶುರುವಾಗುವ ಮುಂಚೆ ಕಿಚ್ಚ ಸುದೀಪ್ ಅವರ ಹೆಸರಿನ ಹ್ಯಾಷ್ ಟ್ಯಾಗ್ ಪ್ರೋಮೋಗಳಲ್ಲಿ ಇಲ್ಲದ ಕಾರಣ ಸುದೀಪ್ ಹೋಸ್ಟ್ ಮಾಡರೋದು ಡೌಟ್ ಎನ್ನಲಾಗ್ತಿತ್ತು. ಬಳಿಕ ಸುದೀಪ್ ಅವರೇ ನಿರೂಪಣೆ ಮಾಡೋದು ಕನ್‌ಫರ್ಮ್ ಆಯ್ತು. ಇದೀಗ ತಂಡ ಹ್ಯಾಷ್‌ಟ್ಯಾಗ್ BBK11, ಹ್ಯಾಷ್‌ಟ್ಯಾಗ್ HOsaAdhaya ಎಂಬ ಎರಡು ಹೊಸ ಹ್ಯಾಷ್‌ಟ್ಯಾಗ್‌ವನ್ನು ಬಿಡುಗಡೆಗೊಳಿಸಿದೆ.
ಇದನ್ನೂ ಓದಿ : ಬಿಗ್ ಬಾಸ್ ಸೀಸನ್ 11ರಲ್ಲಿ ಸ್ವರ್ಗ, ನರಕ ಎರಡು ಥೀಮ್ ಇಟ್ಟಿರೋದ್ಯಾಕೆ? – ಸ್ಪಷ್ಟನೆ ನೀಡಿದ ಕಿಚ್ಚ ಸುದೀಪ್..!