ಬಿಗ್ ಬಾಸ್ ಕನ್ನಡ ಸತತ 11 ಆವೃತ್ತಿಗಳಲ್ಲಿ ನಿರೂಪಕರಾಗಿ ಯಶಸ್ವಿಯಾಗಿರುವ ನಟ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದಾರೆ. ಬಿಗ್ ಬಾಸ್ ಕಾರ್ಯಕ್ರಮ ನಿರೂಪಕನಾಗಿ ಇದೇ ನನ್ನ ಕೊನೆ ಆವೃತ್ತಿ ಎಂದು ಅವರು ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಇದು ಸಹಜವಾಗಿಯೇ ಬಿಗ್ ಬಾಸ್ ರಿಯಾಲಿಟಿ ಶೋ ಅಭಿಮಾನಿಗಳಿಗೆ ಮತ್ತು ಸುದೀಪ್ ಅಭಿಮಾನಿಗಳಿಗೆ ಬೇಸರ ತರಿಸಿದೆ. ಈ ಬೆನ್ನಲ್ಲೇ ಇದೀಗ ಬಿಗ್ ಬಾಸ್ ಬೆಳ್ಳಂಬೆಳಗ್ಗೆಯೇ ಸ್ಪರ್ಧಿಗಳಿಗೆ ಶಾಕ್ ನೀಡಿದೆ.
ಹೌದು ಕಲರ್ಸ್ ಕನ್ನಡ ಇಂದಿನ ಪ್ರೋಮೋ ಒಂದನ್ನು ಹಂಚಿಕೊಂಡಿದೆ. ಈ ಪ್ರೋಮೋದಲ್ಲಿ ಫೋನ್ ಕರೆ ಮಾಡಿ ಮನೆಯ ಕ್ಯಾಪ್ಟನ್ ಜೊತೆ ಮಾತನಾಡಿದ ಬಿಗ್ ಬಾಸ್, ನಾನು ಈ ಮನೆಯಿಂದ ಹೊರಹೋಗುತ್ತಿದ್ದೇನೆ ಎಂದು ಹೇಳಿದ್ದಾರೆ. ಸದ್ಯ ಬಿಗ್ ಬಾಸ್ ಮಾತು ಕ್ಯಾಪ್ಟನ್ ಸೇರಿ ಸ್ಪರ್ಧಿಗಳಿಗೆ ನಡುಕ ಹುಟ್ಟಿಸಿದೆ.
ಬೆಳ್ಳಂಬೆಳಗ್ಗೆ ಬಿಗ್ ಬಾಸ್ ಫೋನ್ ಕರೆ ಮಾಡಿದ್ದಾರೆ. ಅತ್ತ ಮನೆಯ ಕ್ಯಾಪ್ಟನ್ ಶಿಶಿರ್ ಮನೆಯ ಫೋನ್ ಸ್ವೀಕರಿಸಿದ್ದಾರೆ. ನಿಮ್ಮ ಎಲ್ಲರ ವರ್ತನೆಯಿಂದ ನನಗೆ ತುಂಬಾ ನೋವಾಗಿದೆ. ಥ್ಯಾಂಕ್ಯೂ ವೆರಿ ಮಚ್ ಎಂದು ಬಿಗ್ ಬಾಸ್ ಹೇಳಿದ್ದಾರೆ. ಅದಕ್ಕೆ ಉತ್ತರವಾಗಿ ಶಿಶಿರ್ ಥ್ಯಾಂಕ್ಯೂ ಬಿಗ್ ಬಾಸ್ ಎಂದಿದ್ದಾರೆ.
ಶಿಶಿರ್ ಮಾತಿಗೆ ಕೋಪಗೊಂಡ ಬಿಗ್ ಬಾಸ್ ಏನು ಥ್ಯಾಂಕ್ಯೂ ಹೇಳುತ್ತಿದ್ದೀರಲ್ಲ. ಉಡಾಫೆತನ, ಅಪ್ರಮಾಣಿಕ ನಡವಳಿಕೆಯಿಂದ ಬೇಸತ್ತು ಈ ಕ್ಷಣದಿಂದ ಬಿಸ್ ಬಾಸ್ ಈ ಮನೆಯಲ್ಲಿ ಇರಲ್ಲ. ನಾನು ಬ್ರೇಕ್ ತೆಗೆದುಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ.
ಸದ್ಯ ಬಿಗ್ ಬಾಸ್ ಮಾತು ಅಚ್ಚರಿಗೆ ಕಾರಣವಾಗಿದೆ. ಅದರಲ್ಲೂ ಬ್ರೇಕ್ ತೆಗೆದುಕೊಳ್ಳುತ್ತೇನೆ ಎಂಬ ಹೇಳಿಕೆಯೂ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಕಿಚ್ಚನ ಟ್ವೀಟ್ ಮತ್ತು ಇದು ಕೊನೆಯ ನಿರೂಪಣೆ ಎಂಬ ಟ್ವೀಟ್ಗೆ ತಕ್ಕಂತೆ ಬಿಗ್ ಬಾಸ್ನ ಈ ಮಾತು ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ.
ಇದನ್ನೂ ಓದಿ : ಏರ್ ಇಂಡಿಯಾ ವಿಮಾನಕ್ಕೆ ಬಾಂಬ್ ಬೆದರಿಕೆ – ದೆಹಲಿ ಏರ್ಪೋರ್ಟ್ನಲ್ಲಿ ತುರ್ತು ಲ್ಯಾಂಡಿಂಗ್..!