ಬಿಗ್ಬಾಸ್ನಿಂದ ಜಗದೀಶ್ ಎಲಿಮಿನೇಟ್ ಆಗಿದ್ದಾರೆ. ಡೊಡ್ಮನೆಗೆ ಹೋದಾಗಿನಿಂದಲೂ ಒಂದರ ಹಿಂದೊಂದರಂತೆ ನಿಯಮಗಳನ್ನು ಮುರಿಯುತ್ತಾ ಸ್ಪರ್ಧಿಗಳ ಮೇಲೆ ಜಗಳವಾಡುತ್ತಾ, ಏಕ ವಚನದಲ್ಲಿ ಮಾತನಾಡುತ್ತಾ ಮನೆಯವರ ಸಿಟ್ಟಿಗೆ ಗುರಿಯಾಗಿದ್ದ ಜಗದೀಶ್, ಮಹಿಳಾ ಸ್ಪರ್ಧಿಗಳ ಬಗ್ಗೆ ಅವಹೇಳನಕಾರಿ ಮಾತನಾಡಿದ್ದಕ್ಕೆ ಅವರನ್ನು ಮನೆಯಿಂದ ಹೊರಗೆ ಕಳಿಸಲಾಗಿದೆ. ಅಷ್ಟೇ ಅಲ್ಲದೆ ಜಗದೀಶ್ ಮೇಲೆ ಕೈ ಮಾಡಿದ ಕಾರಣಕ್ಕೆ ರಂಜಿತ್ರನ್ನೂ ಸಹ ಬಿಗ್‌ಬಾಸ್ ಮನೆಯಿಂದ ಹೊರ ಕಳಿಸಲಾಗಿದೆ.
ಬಿಗ್‌ಬಾಸ್ ಮನೆಯಿಂದ ಹೊರಗೆ ಬಂದಿರುವ ಜಗದೀಶ್, ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡಿದ್ದಾರೆ. ಸಂದೇಶ ರವಾನಿಸಿರುವ ಜಗದೀಶ್, ನೂರಾರು ಕ್ಯಾಮೆರಾ, ಸಾವಿರಾರು ಬಿಗ್‌ಬಾಸ್ ಸಿಬ್ಬಂದಿ, ಆ ನಿರ್ದೇಶಕ, ಆ ಮಾಂತ್ರಿಕ ತಂತ್ರಜ್ಞರು, ಅವರ 24/7 ಡೆಡಿಕೇಷನ್ ಹಾಗೂ 20 ಕೋಟಿಗೂ ಹೆಚ್ಚಿನ ಬಿಗ್‌ಬಾಸ್ ಅಭಿಮಾನಿ ದೇವರುಗಳ ಆಶೀರ್ವಾದ ಈ ಹೊಸ ಕರ್ನಾಟಕ ಕ್ರಶ್ ಲಾಯರ್ ಜಗದೀಶ್ ಆಗಿದ್ದಾನೆ,” ಎಂದು ತಿಳಿಸಿದ್ದಾರೆ.
“ನಿಮ್ಮ ಪ್ರತಿಯೊಂದು ಚಪ್ಪಾಳೆ, ಸಂದೇಶ, ನಿಮ್ಮ ಆಶೀರ್ವಾದ ನನ್ನ ಈ ಬಿಗ್‌ಬಾಸ್ ಪಯಣದ ಯಶಸ್ಸು, ಅದು ನೀವು ನನ್ನ ಮೇಲೆ ಇಟ್ಟ ನಂಬಿಕೆಯಾಗಿದೆ. ಮತ್ತೊಮ್ಮೆ ಕೋಟಿ.. ಕೋಟಿ.. ನಮನ.
ಸಾರ್ಥಕ ಆಯಿತು, ನನ್ನ ಈ ಹುಟ್ಟು, ಈ ಪ್ರೀತಿ, ನನ್ನ ಗೆಲುವಿಗೆ ನೀವು ಕೊಟ್ಟ ಆ ಒಡನಾಟ, ನನ್ನ ಬಳಿ ಪದಗಳು ಕಡಿಮೆ, ವಿಶ್ಲೇಷಣೆ ಮಾಡಲು’ ಎಂದು ಬಿಗ್‌ಬಾಸ್ ಕಾರ್ಯಕ್ರಮವನ್ನು ಹೊಗಳಿದ್ದಾರೆ.
ಇದನ್ನೂ ಓದಿ : ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಗೆ ಸಹೋದರಿಯೇ ಇಲ್ಲ – ಟಿಕೆಟ್ ಡೀಲ್ಗೆ ಸ್ಫೋಟಕ ಟ್ವಿಸ್ಟ್..!